More

    ಭಕ್ತರ ಮನೆಯಲ್ಲೇ ವಚನ ಆಷಾಢ

    ಮುಂಡರಗಿ: ಆಷಾಢ ಮಾಸದಲ್ಲಿ ಶ್ರೀಮಠದಲ್ಲಿ ಕೈಗೊಳ್ಳಲಾಗುತ್ತಿದ್ದ ಪ್ರವಚನವನ್ನು ಕರೊನಾ ಸೋಂಕು ಹಿನ್ನೆಲೆಯಲ್ಲಿ ರದ್ದುಪಡಿಸಿ, ಭಕ್ತರ ಮನೆಯಲ್ಲಿಯೇ ವಚನ ಆಷಾಢ ಮಾಸ ಕಾರ್ಯಕ್ರಮ ನಡೆಸಲಾಗುವುದು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜೂ. 22ರಿಂದ ಜು. 19ರ ವರೆಗೆ ವಚನ ಆಷಾಢ ಮಾಸ ಕಾರ್ಯಕ್ರಮವನ್ನು ಭಕ್ತರ ಮನೆಗಳಲ್ಲಿ ನಡೆಸಲಾಗುವುದು. ದಿನಕ್ಕೆ ಒಂದು ಮನೆಯಂತೆ 30 ದಿನ 30 ಭಕ್ತರ ಮನೆಗಳಲ್ಲಿ ಪ್ರತಿನಿತ್ಯ ಮಧ್ಯಾಹ್ನ 12 ಗಂಟೆಗೆ ವಚನ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

    ಮನೆಗಳಲ್ಲಿ ನಡೆಯುವ ಈ ಪ್ರವಚನ ಕಾರ್ಯಕ್ರಮದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಮಾನಸಿಕ ಸದೃಢತೆ ಹೊಂದಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

    ಇದೇ ಸಂದರ್ಭದಲ್ಲಿ ವಚನ ಆಷಾಢ ಮಾಸ ಪ್ರವಚನ ಸಮಿತಿ ಅಧ್ಯಕ್ಷರಾಗಿ ಶಿವಯೋಗಿ ಕೊಪ್ಪಳ ಹಾಗೂ ಸಂಚಾಲಕರಾಗಿ ವಿ.ಎಸ್. ಘಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಎಚ್. ವಿರೂಪಾಕ್ಷಗೌಡ್ರ, ಧ್ರುವಕುಮಾರ ಹೊಸಮನಿ, ಕೊಟ್ರೇಶ ಅಂಗಡಿ, ಬಸಯ್ಯ ಗಿಂಡಿಮಠ, ಈಶ್ವರಪ್ಪ ಬೆಟಗೇರಿ, ಪಾಲಾಕ್ಷೀ ಗಣದಿನ್ನಿ, ಗಿರೀಶಗೌಡ ಪಾಟೀಲ, ಉಮೇಶ ಹಿರೇಮಠ, ಎ.ಪಿ. ದಂಡಿನ, ವಿಶ್ವನಾಥ ಉಳ್ಳಾಗಡ್ಡಿ, ಎ.ಕೆ. ಮುಲ್ಲಾನವರ, ಸದಾಶಿವಯ್ಯ ಕಬ್ಬೂರಮಠ, ರವಿ ಕಾಶಿಗವಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts