More

    ಭಂಡಾರದೊಡೆಯನ ಭಕ್ತಿಯಲ್ಲಿ ಮಿಂದೆದ್ದ ಭಕ್ತ ಗಣ

    ಯಾದಗಿರಿ: ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಶನಿವಾರ ಮಕರ ಸಂಕ್ರಮಣ ಹಬ್ಬದ ದಿನದಂದು ಲಕ್ಷಾಂತರ ಭಕ್ತರ ಮಧ್ಯೆ ಅದ್ದೂರಿಯಿಂದ ನಡೆಯಿತು.
    ಎಲ್ಲೆಲ್ಲೂ ಭಂಡಾರದ ಧೂಳು, ಕಣ್ಣು ಹಾಯಿಸಿದಲ್ಲೆಲ್ಲ ಜನಸಾಗರ, ಬೆಂಡು, ಬತ್ತಾಸಿನ ಭರ್ಜರಿ ಮಾರಾಟ, ಬೆಲ್ಲದ ಜಿಲೇಬಿ, ಬಿಸಿಬಿಸಿ ಭಜ್ಜಿಯ ಘಮಘಮ ವಾಸನೆ, ಪಲ್ಲಕ್ಕಿಯನ್ನು ಹೊತ್ತ ಪೂಜಾರಿಗಳು. ಇವು, ಮೈಲಾಪುರ ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳು.
    ಎಲ್ಲ ಜಾತ್ರೆಗಳಂತೆ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ರಥೋತ್ಸವದ ಜರುಗುವುದಿಲ್ಲ. ಬದಲಿಗೆ ಕಬ್ಬಿಣದ ಸರಪಳಿ ಹರಿಯಲಾಗುತ್ತದೆ. ಮೈಲಾರಲಿಂಗೇಶ್ವರನ ದೇವಸ್ಥಾನ ಹಲವು ವೈಶಿಷ್ಟ್ಯಗಳನ್ನು ಹೊಂದಿದ ಗುಹಾಂತರ ದೇವಾಲಯವಾಗಿದ್ದು, ಜಾತ್ರೆಗೆ ಕಲ್ಯಾಣ ಕನರ್ಾಟಕ, ಉತ್ತರ ಕನರ್ಾಟಕ ಸೇರಿದಂತೆ ನೆರೆ ಆಂಧ್ರ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಮಲ್ಲಯ್ಯನ ದರ್ಶನ ಪಡೆದು ಪುನೀತರಾದರು.
    ಎಲ್ಲಿ ನೋಡಿದರೂ ಭಂಡಾರ, ಭಕ್ತಿಯ ಪರವಶದಲ್ಲಿ ಮೈಮರೆತ ಜನತೆ. ಕಿವಿ ಗಡಚುವಂಥಹ ಕೂಗು ಮೈಲಾರಲಿಂಗ ಏಳು ಕೋಟಿಘೇ, ಮಧ್ಯಾಹ್ನ ಮಲ್ಲಯ್ಯನ ಗರ್ಭ ಗುಡಿಯಿಂದ ಉತ್ಸವ ಮೂತರ್ಿ ಗಂಗಾಸ್ನಾನಕ್ಕೆ ಪಕ್ಕದಲ್ಲಿ ಇರುವ ಹೊನ್ನಕೆರೆಗೆ ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಲ ವಾದ್ಯಗಳೊಂದಿಗೆ ನಡೆಯಿತು.
    ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು `ಏಳು ಕೋಟಿಗೆಳುಕೋಟಿಗೆ.. ಎಂಬ ಜಯ ಘೋಷದೊಂದಿಗೆ ಮಲ್ಲಯ್ಯನಿಗೆ ಪ್ರಿಯವಾದ ಭಂಡಾರ, ಕಲ್ಲುಸಕ್ಕರೆ, ಉತ್ತುತ್ತಿ, ಕುರಿ ಉಣ್ಣೆ, ರೊಕ್ಕ ರೂಪಾಯಿಗಳನ್ನು ಹಾಗೂ ತಾವೂ ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು, ಜೋಳ, ಭತ್ತದ ಬೆಳೆಯನ್ನು ಎಸೆದು ಏಳು ಏಳು ಕೋಟಿಗೆ ಮಲ್ಲಯ್ಯ ಎಂದು ಘೋಷಣೆ ಹಾಕಿ ಭಕ್ತಿ ಭಾವ ಮೆರೆದರು.
    ಗರ್ಭ ಗುಡಿಯಿಂದ ಹೊನ್ನಯ್ಯನ ಕೆರೆಗೆ ಉತ್ಸವ ಮೂತರ್ಿ ತೆರಳುವ ಸಮಯದಲ್ಲಿ ಪುರಾತನ ಸಂಪ್ರದಾಯಕವಾದ ಜೀವಂತ ಕುರಿಗಳನ್ನು ಪಲ್ಲಕ್ಕಿಯ ಮೇಲೆ ಎಸೆಯುವದನ್ನು ಜಿಲ್ಲಾಡಳಿತ ನಿಷೇಸಲಾಗಿತ್ತು. ಆದರೂ ಜಿಲ್ಲಾಡಳಿತದ ಕಣ್ತಪ್ಪಿಸಿ ಭಕ್ತರು ಈ ಬಾರಿಯ ಜಾತ್ರೆಯಲ್ಲಿ ಒಂದೆರಡು ಕುರಿಗಳು ಪಲ್ಲಕ್ಕಿಯ ಮೇಲೆ ಹಾರಿಸಲಾಯಿತು. ಕೆಲವರು ತಂದಿದ್ದ ಹರಕೆ ಕುರಿ ಮರಿಗಳನ್ನು ಅಕಾರಿಗಳು ತಮ್ಮ ವಶಕ್ಕೆ ಪಡೆದರು. ಮಾತ್ರವಲ್ಲ ಭಕ್ತರಿಗೆ ಇದರ ಬಗ್ಗೆ ಅರಿವು ಮೂಡಿಸುವ ಕೆಲಸವೂ ಆಗುತ್ತಿದೆ. ಅಲ್ಲಲ್ಲಿ ಕುರಿ ಹಾರಿಸುವದು ನಿಷೇಧ ಎಂಬ ನಾಮಫಲಕಗಳನ್ನು ಹಾಕಿ ಧ್ವನಿ ವರ್ಧಕದಲ್ಲಿ ಹೇಳುವ ದೃಶ್ಯ ಕಂಡುಬಂದಿತು.
    ಸರಪಳಿ ಕಡಿತ: ಗಂಗಾಸ್ನಾನ ಮಾಡಿ ಹಿಂತರಗಿದ ಪಲ್ಲಕ್ಕಿ ಉತ್ಸವು ಪ್ರತಿ ಬಾರಿಯಂತೆ ಈ ಬಾರಿಯು ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ಜರಗಿತು. ರೋಮಾಂಚನದ ಈ ದೃಶ್ಯಕ್ಕೆ ಲಕ್ಷಾಂತರ ಭಕ್ತವರ್ಗ ಸಾಕ್ಷಿಯಾಯಿತು. ಮುಂಜಾಗೃತಾ ಕ್ರಮವಾಗಿ ಸುಮಾರು 1 ಸಾವಿರಕ್ಕಿಂತಲೂ ಹೆಚ್ಚು ಪೋಲಿಸರನ್ನು ನಿಯೋಜಿಸುವ ಮೂಲಕ ಬಿಗಿಭದ್ರತೆ ಒದಗಿಸಲಾಗಿತ್ತು. ವೈದ್ಯಕೀಯ, ಸಾರಿಗೆ ಮತ್ತು ಕಂದಾಯ ಇಲಾಖೆಗಳ ಸಹಯೋಗದಲ್ಲಿ ಈ ಬಾರಿಯ ಜಾತ್ರಾ ಮೊಹೋತ್ಸವ ಅತ್ಯಂತ ಯಶಸ್ವಿಯಾಗಿ ಜರುಗಿತು.
    ಜಾತ್ರೆಯಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಿಹಿ ಅಂಗಡಿಗಳಲ್ಲಿ ಬೊಂಬಾಟಾಗಿ ಸಿಹಿತಿಂಡಿ ತಿನಿಸಿಗಳು ಹಾಗೂ ಮಲ್ಲಯ್ಯನ ಭಂಡಾರ ಖರೀದಿಸಿದರು. ಚಿಕ್ಕಮಕ್ಕಳು ಆಟಿಕೆ ಸಾಮಾನುಗಳನ್ನು ಖರೀದಿಸಿ ಪೀಪಿ ಊದುತ್ತಾ , ಜೋಕಾಲಿಗಳಲ್ಲಿ ಕುಳಿತು ಸಂಭ್ರಮಿಸಿರುವುದು ಜಾತ್ರೆಗೆ ಹೆಚ್ಚಿನ ಮೆರಗು ತಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts