More

    ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿಯೇ ವ್ಯವಹರಿಸಲಿ

    ಹಳಿಯಾಳ: ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಎಲ್ಲ ಆರ್ಥಿಕ ವಹಿವಾಟು ನಡೆಯಬೇಕು. ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕು. ಕನ್ನಡ ಭಾಷಿಕರನ್ನೇ ನಿಯೋಜನೆ ಮಾಡಬೇಕು, ಎಟಿಎಂನಲ್ಲಿ ಹಣದ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಹಳಿಯಾಳ ಘಟಕದ ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಶನಿವಾರ ಸ್ಥಳೀಯ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

    ಪ್ರತಿಭಟನಾಕಾರರ ಅಹವಾಲು ಆಲಿಸಲು ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳ ಪರವಾಗಿ ಆಗಮಿಸಿದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್​ಸೆಟಿ ನಿರ್ದೇಶಕ ನಿತ್ಯಾನಂದ ವೈದ್ಯ, ಕೆನರಾ ಬ್ಯಾಂಕ್​ನಲ್ಲಿ ಆರ್ಥಿಕ ವಹಿವಾಟು ಕಾಗದ ಪತ್ರಗಳ ವ್ಯವಹಾರವನ್ನು ಕನ್ನಡ ಭಾಷೆಯಲ್ಲಿ ನಡೆಸಲು ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಸ್ಟೇಟ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾಪ್ರೋರೇಷನ ಬ್ಯಾಂಕ್​ಗಳಿಗೂ ತೆರಳಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಕರವೇ ಘಟಕ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಉಪಾಧ್ಯಕ್ಷ ಚಂದ್ರಕಾಂತ ದ್ರುವೆ, ವಿನೋದ ದೊಡ್ಡಮನಿ, ಕಾರ್ಯದರ್ಶಿ ಮಹೇಶ ಆನೆಗುಂದಿ, ಶ್ರೀಶೈಲ್ ಮಠದೇವರು, ವಿಜಯ ಪಡನ್ನಿಸ್, ಈರಯ್ಯಾ ಹಿರೇಮಠ, ಮಂಜುನಾಥ ಮಾದರ, ರಾಮಾ ಜಾವಳೆಕರ, ಸುರೇಶ ಕೊಕಿತಕರ, ನಾಗೇಶ ಹೆಗಡೆ, ಸಿ.ಬಿ. ಹಿರೇಮಠ, ವಿನಾಯಕ ಮಡ್ಡಿ, ಮಂಜು ಗೌಳಿ, ಕಾರ್ತಿಕ ಕಳ್ಳಿಮನಿ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts