More

    ಬ್ಯಾಂಕಿಂಗ್ ಸೇವೆ ಗ್ರಾಹಕರಿಗೆ ಬೇಗ ತಲುಪಲಿ

    ಕುಮಟಾ: ದೇಶ ಜಾಗತಿಕವಾಗಿ ತೆರೆದುಕೊಂಡು ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದ್ದರೂ, ಬ್ಯಾಂಕಿಂಗ್ ರಂಗದ ಸಮಗ್ರ ಸೇವೆಗಳು ಗ್ರಾಹಕರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಬೇಕಿವೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಕೆ.ಎಸ್. ಭಟ್ ಹೇಳಿದರು.

    ಬ್ಯಾಂಕಿನ ಪ್ರಾದೇಶಿಕ ಕಚೇರಿಯಲ್ಲಿ ಶುಕ್ರವಾರ ಉಳಿತಾಯ ಮತ್ತು ಚಾಲ್ತಿ ಖಾತೆ ಅಭಿಯಾನಕ್ಕೆ ಅವರು ಚಾಲನೆ ನೀಡಿ ಅವರು ಮಾತನಾಡಿದರು.

    ಬ್ಯಾಂಕ್ ಸೇವೆಗಳು ಹೆಚ್ಚೆಚ್ಚು ಜನರನ್ನು ತಲುಪುವ ಉದ್ದೇಶದಿಂದ ಮತ್ತು ಜನಸಾಮಾನ್ಯರಿಗೆ ಡಿಜಿಟಲ್ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಅಭಿಯಾನ ಪ್ರಾರಂಭಿಸಲಾಗಿದೆ. ಮೂಲಭೂತ ಬ್ಯಾಂಕಿಂಗ್ ವ್ಯವಹಾರಕ್ಕೆ ಉಳಿತಾಯ ಖಾತೆಯೇ ಮೂಲಾಧಾರವಾಗಿದ್ದು, 31 ಜನವರಿ 2021ರವರೆಗೆ ಜಾರಿಯಲ್ಲಿರುತ್ತದೆ ಎಂದರು.

    ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೊಸ ತಲೆಮಾರಿನ ಎಲ್ಲ ಡಿಜಿಟಲ್ ಸೇವೆಗಳನ್ನು ಗ್ರಾಹಕರಿಗೆ ವಿಸ್ತರಿಸಿದೆ. ಗ್ರಾಹಕರು ತಮ್ಮ ಅವಶ್ಯಕತೆಗೆ ತಕ್ಕಂತೆ ತಮ್ಮಲ್ಲಿನ ಹೆಚ್ಚಿನ ಹಣವನ್ನು ಶೇ. 3ರ ಬಡ್ಡಿ ದರದಲ್ಲಿ ಒಂದೇ ದಿನದ ಮಟ್ಟಿಗೂ ಉಳಿತಾಯ ಖಾತೆಯಲ್ಲಿ ಇಡಬಹುದು. ಅವಧಿ ಠೇವಣಿಯಲ್ಲಿ ಬ್ಯಾಂಕ್ 456 ದಿನಗಳ ಹೊಸ ಠೇವಣಿ ಯೋಜನೆ ಪ್ರಾರಂಭಿಸಿದ್ದು, ಅದಕ್ಕೆ ಶೇ. 5.80 ಗರಿಷ್ಠ ಬಡ್ಡಿ ದರ ಹಾಗೂ ಹಿರಿಯ ನಾಗರಿಕರಿಗೆ ಶೇ. 6.30 ಬಡ್ಡಿ ಪಡೆಯುವರು ಎಂದರು.

    ಹಿರಿಯ ಪ್ರಬಂಧಕ ಉಲ್ಲಾಸ ಗುನಗಾ ಮಾತನಾಡಿ, ಬ್ಯಾಂಕ್ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಶೇ. 7.50ಕ್ಕೆ ಮತ್ತು ಕಾರು ಸಾಲದ ಬಡ್ಡಿದರ ಶೇ. 8ಕ್ಕೆ ತಗ್ಗಿಸಿದೆ. ಹಾಗೆಯೇ ಬಂಗಾರದ ಸಾಲದ ಬಡ್ಡಿಯನ್ನು ಕೇವಲ ಶೇ. 7.25ಕ್ಕೆ ಸ್ಥಿರಗೊಳಿಸಿ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ಬ್ಯಾಂಕ್ ಮತ್ತು ಸರ್ಕಾರದ ಸೇವೆ ಸಮರ್ಪಕವಾಗಿ ಪಡೆಯಲು ಉಳಿತಾಯ ಖಾತೆಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಜೋಡಣೆ ಅತ್ಯವಶ್ಯಕ ಎಂದರು.

    ಗ್ರಾಹಕರ ಪರವಾಗಿ ಹಿರಿಯ ಗ್ರಾಹಕಿ ಲಕ್ಷ್ಮೀ ಭಟ್ ಮಾತನಾಡಿದರು. ಈ ವೇಳೆ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಕೆ. ಎಸ್. ಉಪಾಧ್ಯಾ, ಹಿರಿಯ ವ್ಯವಸ್ಥಾಪಕ ಎನ್. ವಿ. ಭಟ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts