More

    ಬೋಧನೆ ವೃತ್ತಿಯಲ್ಲ,ಅದೊಂದು ಬದ್ಧತೆ,ಡಿಸಿ ದಿವ್ಯಾಪ್ರಭು

    ಚಿತ್ರದುರ್ಗ: ಶಿಕ್ಷಕರ ಸ್ಥಾನವನ್ನು ಯಾರಿಂದಲೂ ತುಂಬಲಾಗದೆಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಭಿಪ್ರಾಯಪಟ್ಟರು. ಶಿಕ್ಷಣ ಇಲಾಖೆ ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ,ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶಗಳಿಸಿದ ಜಿಲ್ಲೆಯ ಪ್ರೌಢ ಶಾಲೆ ಮುಖ್ಯಶಿಕ್ಷಕರಿಗೆ ಸನ್ಮಾನ ಸಮಾರಂಭ ಹಾಗೂ ಶೈಕ್ಷಣಿಕ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ತಂದೆ,ತಾಯಿ,ಗುರುವಿನ ನಂತರದಲ್ಲಿ ನಾವು ದೇವರನ್ನು ಕಾಣುತ್ತೇವೆ.

    ಬೋಧನೆ ವೃತ್ತಿಯಲ್ಲ,ಅದೊಂದು ಬದ್ಧತೆ,ವಿದ್ಯಾರ್ಥಿಗಳಿಗೆ ಜ್ಞಾನವನ್ನು ವರ್ಗಾಯಿಸುದೊಂದೇ ಶಿಕ್ಷಕರ ಕೆಲಸವಲ್ಲ. ಪಠ್ಯಕಲಿಕೆಗೆ ಇಂ ದು ಹತ್ತಾರು ಆ್ಯಪ್‌ಗಳಿದ್ದರೂ,ಶಿಕ್ಷಕರ ಬೋಧನೆಗೆ ಸರಿಗಟ್ಟದು. ಜ್ಞಾನದೊಂದಿಗೆ ಬದುಕಿನ ಬಗ್ಗೆ ಹೇಳಿಕೊಡುವವರೇ ಶಿಕ್ಷಕರು. ಹತ್ತಾರು ಸಾಧಕರಲ್ಲಿ ಏಳೆಂಟು ಜನರಾದರೂ,ಸಾಧನೆಗೆ ಗುರುಗಳು ಕಾರಣವೆನ್ನುತ್ತಾರೆ.

    ವಿದ್ಯಾರ್ಥಿ-ಶಿಕ್ಷಕರ ನಡುವಿನ ಸಂಬಂಧ ಅತ್ಯಂತ ಪವಿತ್ರವಾದದ್ದು. ಕಾಲಕ್ಕೆ ತಕ್ಕಂತೆ ಶಿಕ್ಷಕರು ಆಫ್‌ಡೇಟ್ ಆಗ ಬೇಕಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗಳಿಸಿರುವ ನಂ-1ಸ್ಥಾನವನ್ನು ಉಳಿಸಿಕೊಳ್ಳಲು ಜಿಲ್ಲಾಡಳಿತ ಎಲ್ಲ ಸಹಕಾರವನ್ನು ನೀಡಲಿದೆ ಎಂದರು.

    2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವಾರ್ಷಿಕ ಕ್ರಿಯಾಯೋಜನೆ ಬಿಡುಗಡೆ ಮಾಡಿ ಮಾತನಾಡಿದ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು,ಸಂಸ್ಕಾರ,ಮಾನವೀಯ ಮೌಲ್ಯಗಳನ್ನು ಕಲಿಸುವುದು ಶಿಕ್ಷಕರ ಮೊದಲ ಆದ್ಯತೆಯಾಗಿರಲಿ. 10 ತರಗತಿ ಯೊಳಗೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಕಲಿಸ ಬೇಕು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮದ ಜತೆ ಉತ್ತಮ ಕೆಲಸ ಮಾಡಿದ್ದವರನ್ನು ಪುರಸ್ಕ ರಿಸುವುದು ಕರ್ತವ್ಯವಾಗ ಬೇಕು.

    ಜಿಲ್ಲೆಯ 490 ಪ್ರೌಢಶಾಲೆಗಳ ಪೈಕಿ ಶೇ.100 ಅಂಕಗಳಿಸಿದ 79 ಸರ್ಕಾರಿ,72ಅನುದಾನಿತ ಹಾಗೂ 83 ಅನುದಾನ ರಹಿತ ಪ್ರೌಢ ಶಾಲೆಗಳ ಮುಖ್ಯಶಿಕ್ಷಕರನ್ನು ಗೌರವಿಸಲಾಯಿತು.

    ಡಿಡಿಪಿಐ ಕೆ.ರವಿಶಂಕರರೆಡ್ಡಿ ಸ್ವಾಗತಿಸಿದರು. ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ರೇವಣಸಿದ್ದಪ್ಪ,ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾ ರ‌್ಯೆ ಲೀಲಾವತಿ,ಡಯಟ್ ಪ್ರಾಚಾರ‌್ಯ ನಾಸೀರುದ್ದೀನ್,ಮುಖ್ಯಶಿಕ್ಷಕರ ಸಂಘದ ಗೌರವಾಧ್ಯಕ್ಷ ನಾಗರಾಜ್,ಅಧ್ಯಕ್ಷ ನಾಗೇಂದ್ರಪ್ಪ, ಕಾರ‌್ಯದರ್ಶಿ ಮಂಜುನಾಥ್,ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ,ಉದ್ಯಮಿಗಳಾದ ರಾಧಾಕೃಷ್ಣ ನಾಯ್ಡು,ಮೈಲಾರ ಸ್ವಾಮಿ, ಶಿಕ್ಷಣಾಧಿಕಾರಿಗಳಾದ ಶಿಕ್ಷಣಾಧಿಕಾರಿಗಳಾದ ಎನ್.ಆರ್.ತಿಪ್ಪೇಸ್ವಾಮಿ,ಸಂಪತ್‌ಕುಮಾರ್, ಪರಶುರಾಮ್,ಸಿದ್ದಪ್ಪ, ಶೈಲಜಾಕುಮಾರಿ,ಬಿಇಒಳಾದ ನಾಗ ಭೂಷಣ್,ಎಚ್.ಗಿರಿಜಾ,ಜಯಮ್ಮ,ಶ್ರೀನಿವಾಸ್,ಮೊಹೀಸಿನ್,ಸುರೇಶ್ ಹಾಗೂ ಸವಿತಾ,ಶಿವಣ್ಣ,ಚಂದ್ರಪ್ಪ ಮತ್ತಿತರರು ಇದ್ದರು.


    ಭಾವುಕರಾದ ವಿಜಯನಗರ ಡಿಸಿ
    ಅವಿಭಜಿತ ಚಿತ್ರದುರ್ಗ ಮೂಲದ ದಿವಾಕರ ಅವರು,ತಾವು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾಗ ಅಂದು ರಾಜ್ಯದಲ್ಲಿದ್ದ 24 ಜಿಲ್ಲೆಗಳ ಪೈಕಿ ಚಿತ್ರದುರ್ಗ ಜಿಲ್ಲೆ 22ನೇ ಸ್ಥಾನದಲ್ಲಿತ್ತು. ದುರ್ಗದ ಸಿಇಒ ಆದ ಬಳಿಕ ನಂ.1 ಸ್ಥಾನ ಪಡೆದಿದ್ದು ಹರ್ಷತರಿಸಿದೆ. ನಾನೀಗ ವಿಜಯನಗರದ ಡಿಸಿ. ನನ್ನ ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿತ್ರದುರ್ಗಕ್ಕೆ ಪೈಪೋಟಿ ನೀಡಲಿದೆ. ತಮ್ಮ ತಂದೆ,ಚಿಕ್ಕಪ್ಪ,ಮಾವ ಶಿಕ್ಷಕರಾಗಿದ್ದವರು. ಆರೋಗ್ಯದೆ ಡೆ ನಿಗಾ ಇರಲಿ.ಆಸೆ,ಆಕಾಂಕ್ಷಿಗಳಿಗೆ ಮಿತಿ ಇರದಿದ್ದರೆ ನೆಮ್ಮದಿ ಹಾಳಾಗುತ್ತದೆ. ಗುರಿಯೆಡೆ ಸಾಗುವಾಗ ಕಿವುಡರಾಗಿ,ಗುರಿ ಮುಟ್ಟಿದಾಗ ಮೂಕರಾಗಿ. ನೀವು ಮನಸು ಮಾಡಿದರೆ ನನ್ನಂಥ ಸಾವಿರಾರು ಜನರನ್ನು ಸಮಾಜಕ್ಕೆ ಕೊಡುತ್ತೀರಿ ಎಂದು ಭಾವುಕರಾಗಿ ಶಿಕ್ಷಕರಿಗೆ ಸಲಹೆ ನೀಡಿದರು.


    ಭವಿಷ್ಯ ನುಡಿದಿದ್ದ ಟೀಚರ್
    ನಾನು ಒಂದನೇ ತರಗತಿಯಲ್ಲಿದ್ದಾಗಲೇ ಭಾಷಣ ಸ್ಪರ್ಧೆಗೆ ಪ್ರೋತ್ಸಾಹಿಸಿದ್ದ ತಮ್ಮ ಟೀಚರ್ ಪಾರ್ವತಿ ಅವರನ್ನು ಡಿಸಿ ದಿವ್ಯಾಪ್ರಭು ನೆ ನಪಿಸಿಕೊಂಡರು. ಅಂದು ಅವರು ನೀನು ಐಎಎಸ್ ಪಾಸು ಮಾಡುತ್ತೀಯಾ ಎಂದಿದ್ದರು. ಐಎಎಸ್ ಅಂದರೆ ಏನೆಂಬುದರ ಅರಿವು ಆ ಚಿಕ್ಕ ವಯಸ್ಸಿನಲ್ಲಿ ನನಗೆ ಇರಲಿಲ್ಲ. ಆದರೆ ಅದನ್ನು ಪಾಸು ಮಾಡಿದ ಬಳಿಕ ಟೀಚರ್‌ನ್ನು ಹುಡುಕಿಕೊಂಡು ಹೋಗಿ ಆರ್ಶೀವಾದ ಪಡೆದೆ ಎಂದ ಅವರ,ಜಿಲ್ಲೆಯ ಇವತ್ತಿನ ಸಾಧನೆಗೆ ಶಾಲೆಯ ಎಲ್ಲ ಶಿಕ್ಷಕರೂ ಕಾರಣರಾಗಿದ್ದಾರೆಂದು ಶ್ಲಾಘಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts