More

    ಬೋಗಸ್ ಪರವಾನಗಿ, ಗ್ರಾಪಂ ಅಧ್ಯಕ್ಷನ ವಿಚಾರಣೆ

    ಮೇಲುಕೋಟೆ: ಯೋಗನರಸಿಂಹಸ್ವಾಮಿ ಬೆಟ್ಟದ ಬಳಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲು ಮೇಲುಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಬೋಗಸ್ ಪರವಾನಗಿ ನೀಡಿದ್ದಾರೆ ಎಂದು ಆರೋಪಿಸಿ ನೀಡಿದ್ದ ದೂರಿನನ್ವಯ ಇತ್ತೀಚೆಗೆ ವಿಚಾರಣೆ ನಡೆಯಿತು.
    ದೂರುದಾರರಾದ ಪಾಂಡವಪುರ ರೈತ ಸಂಘದ ತಾಲೂಕು ಉಪಾಧ್ಯಕ್ಷ ಈಶಮುರಳಿ, ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ, ಮಾಜಿ ಸದಸ್ಯ ಕೆ.ಎನ್.ಸುಬ್ರಮಣ್ಯ ಅವರು ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ವಿರುದ್ಧ ಒಂದು ತಿಂಗಳ ಹಿಂದೆ ದೂರು ನೀಡಿದ್ದು, ತಾಲೂಕು ಪಂಚಾಯಿತಿ ಇಒ ಸ್ವಾಮಿಗೌಡ ಅವರು ಅಧ್ಯಕ್ಷ ಎನ್.ಸೋಮಶೇಖರ್ ಅವರನ್ನು ದೂರುದಾರರ ಸಮಕ್ಷಮ ವಿಚಾರಣೆಗೆ ಹಾಜರುಪಡಿಸಿದರು. ಅಧ್ಯಕ್ಷ ಸೋಮಶೇಖರ್ ಇದು ನನ್ನ ಸಹಿಯಲ.್ಲ ಬೋಗಸ್ ಪರವಾನಗಿ ಪತ್ರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಸಹಿ ಪೋರ್ಜರಿಯಾಗಿದೆ. ಲೆಟರ್ ಹೆಡ್ ಮೊಹರು ಸಹ ದುರ್ಬಳಕೆಯಾಗಿದೆ. ಅಧಿಕಾರಿಗಳೇ ಕ್ರಮ ಜರುಗಿಸಬೇಕು ಎಂದರು.
    ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ದೂರುದಾರರು ನಿಮ್ಮ ಸಹಿ ಫೋರ್ಜರಿಯಾಗಿದ್ದರೆ ತಕ್ಷಣ ಪೊಲೀಸ್‌ಗೆ ಠಾಣೆ ಮತ್ತು ಹಿರಿಯ ಅಧಿಕಾರಿಗಳಿಗೆ ಯಾಕೆ ದೂರು ನೀಡಲಿಲ್ಲ. ಅಕ್ರಮ ಹೊರಬಂತು ಎಂದು ಸುಳ್ಳು ಹೇಳುತ್ತಿದ್ದಾರೆ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು. ಪಿಡಿಒ ರಾಜೇಶ್ವರ್ ಮಾತನಾಡಿ, ಗ್ರಾಮ ಪಂಚಾಯಿತಿ ಗಣಕಯಂತ್ರದ ಮೂಲಕವೇ ಪತ್ರ ವ್ಯವಹಾರ ಮಾಡುತ್ತಿದ್ದು ಮುದ್ರಿತ ಲೆಟರ್ ಹೆಡ್ ಬಳಸುತ್ತಿಲ್ಲ ಎಂದು ಹೇಳಿಕೆ ನೀಡಿದರು.
    ವಿಚಾರಣೆ ವೇಳೆ 1991ರ ನಡಾವಳಿಪುಸ್ತಕ ಪರಿಶೀಲಿಸಿ 199-92 ರಲ್ಲಿ ಗ್ರಾಮ ಪಂಚಾಯಿತಿಯೇ ಇರಲಿಲ್ಲ. ಬದಲಾಗಿ ಮಂಡಲಪಂಚಾಯಿತಿ ಅಸ್ಥಿತ್ವದಲ್ಲಿತ್ತು. ಆಗ ಅಧ್ಯಕ್ಷರ ಬದಲಾಗಿ ಪ್ರಧಾನರ ಹುದ್ದೆಯಿದ್ದು ಎನ್.ವೆಂಕಟನರಸಿಂಹಶೆಟ್ಟಿ ಎಂಬುವರು ಪ್ರಧಾನರಾಗಿದ್ದರು. ಇಮೇಲ್ ಸಹ ಇರಲಿಲ್ಲ. 1992ರಲ್ಲಿ ಲೆಟರ್‌ಹೆಡ್‌ನಲ್ಲಿ ಪರವಾನಗಿ ಪತ್ರ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಎಲ್ಲ ವಿಚಾರಣೆ ನಡೆಸಿದ ತಾಪಂ ಇಒ 1992ರಲ್ಲಿ ನೀಡಿದಂತೆ ತಯಾರಿಸಿದ ಬೋಗಸ್ ಪರವಾನಗಿ ಪತ್ರದಲ್ಲಿ ಸಹಿಮಾಡಿದ ಅಧ್ಯಕ್ಷ ಎನ್.ಸೋಮಶೇಖರ್ ಸಹಿಯನ್ನು ಹೋಲಿಸಿದಾಗ ಪತ್ರದಲ್ಲಿರುವ ಸಹಿ ಮೇಲ್ನೋಟಕ್ಕೆ ಹಾಲಿ ಅಧ್ಯಕ್ಷರ ಸಹಿಯೇ ಎಂಬುದು ಕಂಡುಬಂದಿರುತ್ತದೆ. ಇದರ ಸಂಪೂರ್ಣ ವರದಿಯನ್ನು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.
    ಏನಿದು ಪ್ರಕರಣ: ಸಣ್ಣಮ್ಮ ಎಂಬುವರು ಚಕ್ಕುಬಂದಿ ನಮೂದಿಸದ 40ಘಿ86 ಅಡಿ ಅಳತೆಯ ಆಶ್ರಯ ಯೋಜನೆಯ ನಿವೇಶನದ ಹಕ್ಕು ಪತ್ರವನ್ನು 1992ರಲ್ಲಿ ಪತ್ರ ಪಡೆದಿರುವುದಾಗಿ ಹೇಳಿಕೊಂಡು 30 ವರ್ಷದ ನಂತರ 2023ರಲ್ಲಿ ಕಟ್ಟಡನಿರ್ಮಾಣಕ್ಕೆ ಮುಂದಾಗಿದ್ದರು. ಈ ಹಕ್ಕುಪತ್ರ ಬೋಗಸ್ ಆಗಿದ್ದು ಗ್ರಾಮಪಂಚಾಯಿತಿ ಪರವಾನಗಿ ಇಲ್ಲದೆ ಅಕ್ರಮವಾಗಿ ಯೋಗನರಸಿಂಹಸ್ವಾಮಿ ಬೆಟ್ಟದ ಸಮೀಪವೇ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಸಾರ್ವಜನಿಕರ ದೂರಿನ ಸಂಬಂಧ ತಹಸೀಲ್ದಾರ್ ಕಟ್ಟಡ ನಿರ್ಮಾಣ ಸ್ಥಗಿತಮಾಡಿದ್ದರು. ಈ ವೇಳೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ ಸಣ್ಣಮ್ಮ 1992ರಲ್ಲೇ ಕಟ್ಟಡ ನಿರ್ಮಾಣಕ್ಕೆ ಗ್ರಾ.ಪಂ. ಅಧ್ಯಕ್ಷರು ಲಿಖಿತ ಪರವಾನಗಿ ನೀಡಿದ್ದರು ಎಂದು ಹಾಲಿ ಅಧ್ಯಕ್ಷ ಸೋಮಶೇಖರ್ ಸಹಿ ಇದ್ದ ಪತ್ರವೊಂದನ್ನು ಸಲ್ಲಿಸಿದ್ದರು.

    ಪ್ರಕರಣದಲ್ಲಿ ಸ್ವಯಂಪ್ರೇರಿತರಾಗಿ ಈಶಮುರಳಿ, ಜಯಲಕ್ಷ್ಮಿ, ಕೆ.ಎನ್.ಸುಬ್ರಮಣ್ಯ ಪ್ರತಿವಾದಿಗಳಾಗಿ ಭಾಗಿಯಾಗಿ ಸಣ್ಣಮ್ಮ ಹೈಕೋರ್ಟ್‌ಗೆ 1992ರಲ್ಲೇ ಪಡೆದಿರುವುದಾಗಿ ಸಲ್ಲಿಸಿದ್ದ ಪರವಾನಗಿ ಪತ್ರದ ದಾಖಲೆ ಪಡೆದಿದ್ದರು. ಪರವಾನಗಿ ಪತ್ರದಲ್ಲಿ ಗ್ರಾ.ಪಂ. ಅಧ್ಯಕ್ಷರ ಮೊಹರಿನೊಂದಿಗೆ ಹಾಲಿ ಅಧ್ಯಕ್ಷ ಸೋಮಶೇಖರ್ ಸಹಿ, ಇ-ಮೇಲ್ ಐಡಿ, ಕಂಪ್ಯೂಟರ್ ಮುದ್ರಿತ ಅಕ್ಷರಗಳು ನಮೂದಾಗಿತ್ತು. ಅಲ್ಲದೆ ನಿವೇಶನ ಸಂಖ್ಯೆ ಹಾಗೂ ಚಕ್ಕುಬಂದಿ ಇರದ ಕಾರಣ ಭಾರಿ ಅನುಮಾನಕ್ಕೆಡೆಮಾಡಿಕೊಟ್ಟಿತ್ತು. ಪ್ರಕರಣದ ತನಿಖೆಗೆ ಮುಂದಾದ ಜಿ.ಪಂ. ಸಿಇಒ ಹಾಗೂ ಪಂಚಾಯತ್‌ರಾಜ್ ಆಯುಕ್ತರ ಸೂಚನೆಯಂತೆ ವಿಚಾರಣೆ ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts