More

    ಬೊಪ್ಪಂಡ ಕಾಶಿ ನಂಜಪ್ಪ ಗದ್ದೆಯಲ್ಲಿ ನಾಟಿ ಓಟದ ಸ್ಪರ್ಧೆ

    ನಾಪೋಕ್ಲು: ಹಳೇ ತಾಲೂಕಿನ ಬೊಪ್ಪಂಡ ಕಾಶಿ ನಂಜಪ್ಪ ಅವರ ಗದ್ದೆಯಲ್ಲಿ ಇತ್ತೀಚೆಗೆ ನಾಟಿ ಓಟದ ಸ್ಪರ್ಧೆಯನ್ನು ಆಯೋಜಿಲಾಗಿತ್ತು.


    ನಾಟಿ ಓಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಓಟವನ್ನು ಏರ್ಪಡಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಚಿಂಗಂಡ ಲತೀಶ್ ಪ್ರಥಮ, ಬಿಜಂಡ ಸುಜನ ದ್ವಿತೀಯ ಚೆರಿಯಪರಂಬುವಿನ ಸುರೇಶ್ ತೃತೀಯ ಬಹುಮಾನ ಪಡೆದರು.


    ಮಹಿಳೆಯರ ವಿಭಾಗದಲ್ಲಿ ಜ್ಯೋತಿ ಪ್ರಥಮ, ಸುಂದರಿ ದ್ವಿತೀಯ, ವಿಜಿ ತೃತೀಯ ಬಹುಮಾನ ಗಳಿಸಿದರು.
    ವಿಜೇತರಿಗೆ ಕಾಶಿ ನಂಜಪ್ಪ ಅವರು ಬಹುಮಾನ ವಿತರಿಸಿದರು.


    ಬೊಪ್ಪಂಡ ಕಾಶಿ ನಂಜಪ್ಪ ಮಾದರಿ: ನಾಲ್ಕು ನಾಡಿನಲ್ಲಿ ಪ್ರತಿ ಕುಟುಂಬದವರಿಗೂ ಗದ್ದೆ ಇದ್ದರೂ ಯಾರು ನಾಟಿ ಮಾಡದೆ ಹಡಿಲು ಬಿಟ್ಟಿದ್ದಾರೆ. ಆದರೆ, ಬೊಪ್ಪಂಡ ಕಾಶಿ ನಂಜಪ್ಪ ಅವರು ಪ್ರತಿ ವರ್ಷ ತಮ್ಮ ಗದ್ದೆಯಲ್ಲಿ ನಾಟಿ ಓಟದ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.


    ಕೊಡಗಿನಲ್ಲಿ ಈಗ ಶೇ.30ರಷ್ಟು ಜನರು ಮಾತ್ರ ಗದ್ದೆಯನ್ನು ನೆಡುತ್ತಿದ್ದು, ಉಳಿದ ಶೇ.70ರಷ್ಟು ಜನರು ತಮ್ಮ ಗದ್ದೆಯನ್ನು ಹಡಿಲು ಬಿಟ್ಟು, ಕಾಫಿ ತೋಟ, ಅಡಕೆ, ತೆಂಗು ತೋಟ, ಮತ್ತು ಮನೆದಳವಾಗಿ ಪರಿವರ್ತಿಸಿ ಹಣ ಗಳಿಕೆಯಲ್ಲಿ ತೊಡಗಿದ್ದಾರೆ.

    ಕೊಡಗು ಅಂದು ಭತ್ತದ ಖಣಜವಾಗಿತ್ತು, ಪ್ರತಿ ಕುಟುಂಬದವರು ತಮಗೆ ಸೇರಿದ ಗದ್ದೆಯನ್ನು ಉತ್ತು, ಬಿತ್ತಿ ನಾಟಿ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ಇಂದು ಗದ್ದೆಯನ್ನು ನಾಟಿ ಮಾಡದೆ ಮೋಜು ಮಸ್ತಿಗಾಗಿ ಮನೆದಳವಾಗಿ ಮಾಡಿ ಭೂಮಿ ತಾಯಿಗೆ ಮೋಸ ಮಾಡಿದ್ದಾರೆ. ಹಳೆಯ ಕಾಲದಲ್ಲಿ ಒಂದು ವರ್ಷದ ಊಟದ ಭತ್ತವನ್ನು ಪ್ರತಿ ಕುಟುಂಬದವರು ಶೇಖರಿಸಿ ಇಟ್ಟು ಉತ್ತಮವಾಗಿ ಜೀವನ ನಡೆಸುತ್ತಿದ್ದರು.
    ಕಾಶಿ ನಂಜಪ್ಪ, ನಾಟಿ ಓಟದ ಗದ್ದೆಯ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts