More

    ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ

    ಚಿತ್ರದುರ್ಗ: ಕನಿಷ್ಠ ವೇತನ 31 ಸಾವಿರ ರೂ.ಗೆ ಹೆಚ್ಚಿಸುವುದು, ಆರು ಸಾವಿರ ರೂ.ಪಿಂಚಣಿ ಸವಲತ್ತು ಒದಗಿಸುವುದು ಸೇರಿದಂತೆ ನಾನಾ ಬೇಡಿ ಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಪಂ ಬಳಿ ಗ್ರಾಪಂ ನೌಕರರ ಜಿಲ್ಲಾ ಸಂಘದ(ಸಿಐಟಿಯು)ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದರು.
    ನಿವೃತ್ತಿ ಹೊಂದಿದ ಸಿಬ್ಬಂದಿಗೆ ಅಥವಾ ನಿಧನ ಹೊಂದಿದ ಸಿಬ್ಬಂದಿ ಕುಟುಂಬ ವರ್ಗದವರಿಗೆ ವೇತನ ಬಾಕಿ, ಅನುಕಂಪ ಆಧಾರಿತ ನೇಮಕಾತಿ, ಖಾಲಿ ಇರುವ ಬಿಲ್ ಕಲೆಕ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಸಿದೆ ಇರುವುದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಹಲವು ಆದೇಶಗಳನ್ನು ನೀಡಿದ್ದರೂ ಅವುಗಳನ್ನು ಜಾರಿಗೊಳಿಸಿದ ಜಿಪಂ ವಿಳಂಬ ನೀತಿಯನ್ನು ಖಂಡಿಸಿದರು.
    ಐಪಿಡಿ ಸಾಲಪ್ಪ ವರದಿಯಂತೆ ಸ್ವಚ್ಛತಾಗಾರರ ನೇಮಕ, ಅರ್ಹ ಸಿಬ್ಬಂದಿಗೆ ಬಡ್ತಿ, ಅಕ್ರಮ ನೇಮಕ ರದ್ದು ಸೇರಿದಂತೆ ವಿವಿಧ 17 ಬೇ ಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವು ಮನವಿಗಳನ್ನು ಸಲ್ಲಿಸಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಡಿ.ಎಂ.ಮಲಿಯಪ್ಪ, ವಿ.ಜಿ.ವೆಂಕಟೇಶ್,ವಿ.ಮಾರಪ್ಪ, ವಿ.ರಂಗನಾಥ್, ಸನಾವುಲ್ಲಾ,ಉಮೇಶ್,ತಿಮ್ಮಣ್ಣ ಇತರರು ಪ್ರತಿಭಟ ನೆಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts