More

    ಬೇಕಾಬಿಟ್ಟಿ ಬೆಲೆಗೆ ತರಕಾರಿ ಮಾರಾಟ

    ಶಿರಸಿ: ಲಾಕ್​ಡೌನ್ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ಇಲ್ಲಿನ ತರಕಾರಿ, ದಿನಸಿ ಹಾಗೂ ಹಣ್ಣಿನ ವ್ಯಾಪಾರಿಗಳು ಸಾರ್ವಜನಿಕರ ಸುಲಿಗೆಗೆ ನಿಂತ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ದರ ಪರಿಷ್ಕರಣೆ ಮಾಡಿದೆ. ಆದರೂ ವ್ಯಾಪಾರಿಗಳು ಜನರಿಗೆ ಪಂಗನಾಮ ಹಾಕುತ್ತಿದ್ದಾರೆ ಎಂಬ ದೂರು ವ್ಯಾಪಕವಾಗಿದೆ.

    ನಗರದ ವಿವಿಧೆಡೆ ದಿನಸಿ, ತರಕಾರಿ, ಹಣ್ಣು ವಿತರಣೆಗೆ ವಾರ್ಡ್ ವ್ಯಾಪ್ತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

    ನಗರದ 50ಕ್ಕೂ ಹೆಚ್ಚು ವಿವಿಧ ವ್ಯಾಪಾರಿಗಳಿಗೆ ಈ ತುರ್ತು ಸೇವೆಗೆ ತಾಲೂಕು ಆಡಳಿತದ ವತಿಯಿಂದಲೇ ಅನುಮತಿ ನೀಡಲಾಗಿದೆ. ಆದರೆ ಈ ವ್ಯಾಪಾರಿಗಳು ಜನರ ಸುಲಿಗೆಗೆ ನಿಂತಿದ್ದಾರೆ ಎಂಬ ಆರೋಪ ಹೆಚ್ಚಿದೆ. ಮನೆ ಬಾಗಿಲಿಗೆ ಅಗತ್ಯ ಸೇವೆ ನೀಡುತ್ತಿದ್ದೇವೆ. ಹಾಗಾಗಿ ಹೆಚ್ಚಿನ ದರ ಪಡೆಯುವುದು ಅನಿವಾರ್ಯ ಎಂದು ಹೇಳುವ ವ್ಯಾಪಾರಿಗಳು ಮಾರುಕಟ್ಟೆ ದರಕ್ಕಿಂತ ಕೆಲವು ವಸ್ತುಗಳ ಮೇಲೆ ಗರಿಷ್ಠ 20ರಿಂದ 25 ರೂಪಾಯಿವರೆಗೆ ಹೆಚ್ಚಿನ ದರ ಪಡೆಯುತ್ತಿದ್ದಾರೆ. ಚೌಕಾಸಿ ಮಾಡುವ ಗ್ರಾಹಕರಿಗೆ ವಸ್ತುಗಳನ್ನು ನೀಡದೆ ತೆರಳುವ ಘಟನೆಗಳು ನಡೆಯುತ್ತಿದ್ದು, ಅನಿವಾರ್ಯತೆಯಿಂದ ಜನರು ಈ ಕುರುಕುಳ ಸಹಿಸಿಕೊಳ್ಳುತ್ತಿದ್ದಾರೆ.

    ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥ, ತರಕಾರಿಗಳು ಮಾರುಕಟ್ಟೆ ದರದಲ್ಲಿಯೇ ಸಿಗಬೇಕು. ದರ ಹೆಚ್ಚಿಸಿದ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ವ್ಯಾಪಾರಿ ಅನುಮತಿ ರದ್ದುಪಡಿಸುತ್ತೇವೆ.
    | ಪ್ರದೀಪ ಬಿ.ಯು, ಸಿಪಿಐ

    ಪ್ರಸ್ತುತ ಸಾರ್ವಜನಿಕರು ತಾಲೂಕಾ ಆಡಳಿತದಿಂದ ಅನುಮತಿ ಪಡೆದ ವ್ಯಾಪಾರಿಗಳಿಂದಲೇ ತರಕಾರಿ, ಹಣ್ಣು, ದಿನಸಿ ಖರೀದಿ ಮಾಡಬೇಕು. ಹೀಗಾಗಿ ವ್ಯಾಪಾರಿಗಳು ಬೇಕಾಬಿಟ್ಟಿ ದರ ಹೇಳುತ್ತಿದ್ದಾರೆ. ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತರುವುದರಿಂದ ಅವರು ಹಏಳಿದ ದರವನ್ನು ನೀಡುವುದು ಅನಿವಾರ್ಯವಾಗಿದೆ. ಅಧಿಕಾರಿಗಳು ದರ ಪರಿಷ್ಕರಿಸಿದರೂ ವ್ಯಾಪಾರಿಗಳಿಗೆ ವ್ಯತ್ಯಾಸ ಆಗುತ್ತಿಲ್ಲ.
    |ಮನೋರಮಾ ನಾಯ್ಕ ನಗರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts