More

    ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

    ಕುಂದಗೋಳ: ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದಲ್ಲಿ ಶá-ಕ್ರವಾರ ಪ್ರತಿಭಟನೆ ನಡೆಯಿತು.

    ತಾಲೂಕಿನ ಬೆಟದೂರ ಗ್ರಾಮದಿಂದ ಚಕ್ಕಡಿಯೊಂದಿಗೆ ಮೆರವಣಿಗೆ ಮೂಲಕ ಕುಂದಗೋಳಕ್ಕೆ ಆಗಮಿಸಿದ ಸಂಘದ ಪದಾಧಿಕಾರಿಗಳು, ಪಟ್ಟಣದ ಗಾಳಿ ಮರೆಮ್ಮ ದೇವಸ್ಥಾನ ಬಳಿ ಕೆಲಕಾಲ ಪ್ರತಿಭಟಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲಿ ಸಂಚರಿಸá-ತ್ತ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಬಸವರಾಜ ಮೆಳವಂಕಿ ಅವರಿಗೆ ಮನವಿ ಸಲ್ಲಿಸಿದರು.

    ಸಂಘದ ಉತ್ತರ ಕರ್ನಾಟಕ ಗೌರವ ಅಧ್ಯಕ್ಷ ಶಶಿಕಾಂತ ಪಡಸಲಗಿ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿ ಸಾರಾಯಿಯಿಂದ ರೈತರು, ಕೂಲಿ ಕಾರ್ವಿುಕರು, ಸಾಮಾನ್ಯ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಸಾರಾಯಿ ಹಾಗೂ ಸಾಲ ಮುಕ್ತ ರಾಜ್ಯವಾಗಿಸಬೇಕು. ಹೊಲಗಳ ಕಾಲು ದಾರಿಗಳನ್ನು ಮುಖ್ಯರಸ್ತೆವರೆಗೆ ಅಭಿವೃದ್ಧಿಪಡಿಸಬೇಕು. ಬೆಳೆ ವಿಮೆ, ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದೇ ರೈತರ ಖಾತೆಗೆ ಜಮೆ ಮಾಡಬೇಕು. ಶೇಂಗಾ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು. ಹಳ್ಳಿಗಳಲ್ಲಿ ಸಾರಾಯಿ ಮಾರಾಟ ನಿಲ್ಲಿಸಬೇಕು. ಬೆಟದೂರಲ್ಲಿ ರುದ್ರಭೂಮಿ ನಿರ್ವಿುಸಬೇಕು. ಕಳಸಾ ಬಂಡೂರಿ ಯೋಜನೆ ತ್ವರಿತವಾಗಿ ಆರಂಭಿಸಬೇಕು ಹೀಗೆ ವಿವಿಧ ಬೇಡಿಕೆ ಈಡೆರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗá-ವುದು ಎಂದು ಎಚ್ಚರಿಸಿದರು.

    ಮಂಜುನಾಥ ಕಾಲವಾಡ, ಕಲಮೇಶ ಲಿಗಾಡಿ, ಚಂದ್ರಶೇಖರ ಕಬ್ಬೂರ, ರಮೇಶ ಕಿತ್ತೂರ, ಸುರೇಶ ದೊಡಮನಿ, ಶೇಖಪ್ಪ ಬಾಲನಾಯ್ಕರ, ಶಿವಪ್ಪ ಕೊಪ್ಪದ, ರಾಜು ದೊಡಶಂಕರ, ಬಸಯ್ಯ ಸ್ಥಾವರಮಠ, ಫಕೀರ ಗೌಡ ಹೂವಣ್ಣವರ, ಅಮೃತ ಕಮ್ಮಾರ, ಶಿವನಗೌಡ ಶಿಂದೋಗಿ, ಶಿವಾನಂದ ತಹಶೀಲ್ದಾರ, ಗಂಗಪ್ಪ ಪರಣ್ಣವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts