More

    ಬೆಳೆ ಪರಿಹಾರ ಅನ್ಯಾಯ ಸರಿಪಡಿಸಲಿ

    ಸವದತ್ತಿ: ಇಲ್ಲಿನ ತಹಸೀಲ್ದಾರ್​ ಕಚೇರಿಯಲ್ಲಿ ಮಂಗಳವಾರ ರಾಜ್ಯ ರೆತ ಸಂ ಮತ್ತು ಹಸಿರು ಸೇನೆ ವತಿಯಿಂದ 2023&24ನೇ ಸಾಲಿನ ಬರ ಪರಿಹಾರ ಹಣದ ವ್ಯತ್ಯಾಸ ಶ್ರೀದಲ್ಲಿ ಸರಿಪಡಿಸಬೇಕು ಹಾಗೂ ಎಲ್ಲ ರೈತರಿಗೆ ಸರಿಯಾದ ಪ್ರಮಾಣದಲ್ಲಿ ಬೆಳೆ ಪರಿಹಾರ ತಲುಪುವಂತೆ ಕ್ರಮ ಕೆಗೊಳ್ಳಬೇಕೆಂದು ಒತ್ತಾಯಿಸಿ ತಹಸೀಲ್ದಾರ್​ ಮಧುಸೂದನ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು.

    ಸಂದ ರಾಜ್ಯ ಕಾರ್ಯಾಧ್ಯ ಬಸವರಾಜ ಬಿಜ್ಜೂರ ಮಾತನಾಡಿ, ಭೀಕರ ಬರದಿಂದ ರೆತಕುಲ ಸಂಕಷ್ಟಕ್ಕೆ ಒಳಗಾಗಿದೆ. ಬಹು ದಿನಗಳ ನಂತರ ಬರ ಪರಿಹಾರವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುತ್ತಿದ್ದರೂ ಸವದತ್ತಿ ಮತ್ತು ಯರಗಟ್ಟಿ ತಾಲೂಕುಗಳಲ್ಲಿ ಸರಿಯಾದ ಪ್ರಮಾಣದಲ್ಲಿ ರೆತರ ಖಾತೆಗೆ ಹಣ ಜಮೆಯಾಗುತ್ತಿಲ್ಲ ಹಾಗೂ ಅನೇಕರಿಗೆ ಬರ ಪರಿಹಾರವೇ ಜಮೆಯಾಗಿಲ್ಲ. ತಣ ಬೆಳೆ ಪರಿಹಾರ ವ್ಯತ್ಯಾಸ ಸರಿಪಡಿಸುವುದರ ರೆತರ ಖಾತೆಗೆ ಬರ ಪರಿಹಾರ ತಲುಪುವಂತೆ ಕ್ರಮ ಕೆಗೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರೆತ ಮುಖಂಡ ಸುರೇಶ ಸಂಪಗಾಂವ ಮಾತನಾಡಿ, ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಕಟ್ಟಿರುವ ರೆತರಿಗೆ ವಿಮೆ ಹಣ ಕೊಡಬೇಕು. ರೆತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ರೆತರಿಗೆ ವೆಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸಹಾಯಕ ಕೃಷಿ ನಿರ್ದೇಶಕ ಎಸ್​.ವಿ ಪಾಟೀಲ, ಮಹಾಂತೇಶ ಚರಂತಿಮಠ, ದ್ಯಾಮನಗೌಡ ಪಾಟೀಲ, ಸೋಮು ರೆನಾಪೂರ, ಮಹಾಂತೇಶ ಮುತವಾಡ, ಎಂ.ಎನ್​ .ಇಂಗಳಗಿ, ರಮೇಶ ಚಲವಾದಿ, ಪಾಂಡುರಂಗ ತಳವಾರ, ಎಂ.ಬಿ. ಪೇಂಟೆದ, ಅಶೋಕ ಯರಗುದ್ದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts