More

    ಬೆಳೆಗೆ ಹಳದಿ ನಂಜಾಣು ರೋಗ

    ಕಮಲಾಪುರ: ತಾಲೂಕಿನಲ್ಲಿ ಮಳೆಯಿಂದಾಗಿ ಹೆಸರು ಉತ್ತಮವಾಗಿ ಬೆಳೆದಿದೆ. ಸೋಂತ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಗೆ ಹಳದಿ ನಂಜಾಣು ರೋಗ ಕಾಣಿಸಿಕೊಂಡಿದ್ದು, ರೈತರು ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಸಲಹೆ ನೀಡಿದ್ದಾರೆ.

    ಮರಗುತ್ತಿ ಗ್ರಾಮದ ಕೆಲ ಜಮೀನುಗಳಿಗೆ ಬುಧವಾರ ಭೇಟಿ ನೀಡಿ ಬೆಳೆ ಪರಿಶೀಲಿಸಿದ ಅವರು, ಹಳದಿ ಬಣ್ಣಕ್ಕೆ ತಿರುಗಿದ ಗಿಡವನ್ನು ತಕ್ಷಣ ಕಿತ್ತು ಬಿಸಾಕಬೇಕು. ಇದೊಂದು ವೈರಸ್ ಆಗಿದ್ದು, ಗಿಡ ಕೀಳದಿದ್ದರೆ ವೇಗವಾಗಿ ಇಡೀ ಜಮೀನಿಗೆ ಹರಡಲಿದೆ. ವೈರಸ್ ನಾಶಕ್ಕೆ ಒಂದು ಲೀಟರ್ ನೀರಿನಲ್ಲಿ ೦.೩ ಎಂಎಲ್ ಇಮ್ಡಾಕ್ರೋಪಿಡ್ ಬೆರೆಸಿ ಸಿಂಪಡಿಸಿ ಎಂದರು.

    ೨೦೨೩-೨೪ರಲ್ಲಿ ೫೪,೧೮೧ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಈವರೆಗೆ ೩೨,೭೫೦ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತೊಗರಿ ೨೧,೨೪೭, ಉದ್ದು ೧,೬೮೦, ಹೆಸರು ೧,೮೬೦, ಸೋಯಾಬೀನ್ ೬,೮೭೭ ಹೆಕ್ಟೇರ್ ಬೆಳೆಯಲಾಗುತ್ತಿದೆ. ಕಳೆದೊಂದು ವಾರದಿಂದ ೧೯೧-೨೩೩ ಮಿಮೀ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಬಿತ್ತನೆ ಕಾರ್ಯ ಇನ್ನಷ್ಟು ಚುರುಕು ಪಡೆಯಲಿದೆ ಎಂದು ತಿಳಿಸಿದ್ದಾರೆ.

    ಕೃಷಿ ವಿಜ್ಞಾನಿ ಪಂಪನಗೌಡ, ಕಮಲಾಪುರ ರೈತ ಸಂಪರ್ಕ ಕೇಂದ್ರದ ಎಒ ಕೇಸರಸಿಂಗ್ ಹಜಾರೆ ಇತರರಿದ್ದರು.

    ಗಂಡೋರಿಗೆ ಹೆಚ್ಚಿದ ಒಳಹರಿವು
    ನಿರಂತರ ಮಳೆಯಿಂದಾಗಿ ಮಹಾಗಾಂವ್ ಸಮೀಪದ ಗಂಡೋರಿ ಜಲಾಶಯಕ್ಕೆ ೪೦೦೦ ಕ್ಯೂಸೆಕ್ ಒಳಹರಿವು ಇದ್ದು, ಡ್ಯಾಂನಲ್ಲಿ ೧.೫೧೨ ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಸಾಮರ್ಥ್ಯ ೧.೮೮೭ ಟಿಎಂಸಿ ಇದ್ದು, ಇದೇ ರೀತಿ ಮಳೆ ಸುರಿದರೆ ಇನ್ನೊಂದಿಷ್ಟು ದಿನಗಳಲ್ಲಿ ಭರ್ತಿಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts