More

    ಬೆಳಗಾವಿ ವಿಭಾಗಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

    ಬೆಳಗಾವಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಬಕಾರಿ ಕ್ರೀಡಾಕೂಟ-2022ರಲ್ಲಿ ಗುಂಪು ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 84 ಅಂಕ ಗಳಿಸುವ ಮೂಲಕ ಬೆಳಗಾವಿ ವಿಭಾಗ ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

    28 ಅಂಕ ಗಳಿಸಿದ ಹೊಸಪೇಟೆ ವಿಭಾಗ ರನ್ನರ್ ಅಪ್ ಪ್ರಶಸ್ತಿ ಗಳಿಸಿದರೆ, 16 ಅಂಕಗಳೊಂದಿಗೆ ಕಲಬುರಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ನಗರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

    ಗುಂಪು ವಿಭಾಗ ಪುರುಷರ ಕ್ರಿಕೆಟ್ ಸ್ಪರ್ಧೆಯಲ್ಲಿ ಬೆಳಗಾವಿ ಎ.ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು, ಹೊಸಪೇಟೆ ಎ.ತಂಡ ದ್ವಿತೀಯ ರನ್ನರ್ ಅಪ್ ಬಹುಮಾನ ಪಡೆಯಿತು. ವಾಲಿಬಾಲ್‌ನಲ್ಲಿ ಬೆಳಗಾವಿ ಎ.ತಂಡ ಪ್ರಥಮ, ಬೆಳಗಾವಿ ಬಿ.ತಂಡ ದ್ವಿತೀಯ, ಕಬಡ್ಡಿಯಲ್ಲಿ ಬೆಳಗಾವಿ ಎ.ತಂಡ ಪ್ರಥಮ, ಬೆಳಗಾವಿ ಬಿ.ದ್ವಿತೀಯ. ಹಗ್ಗ ಜಗ್ಗಾಟದಲ್ಲಿ ಕಲಬುರಗಿ ಎ.ತಂಡ ಪ್ರಥಮ, ಬೆಳಗಾವಿ ಬಿ.ತಂಡ ದ್ವಿತೀಯ, ಬ್ಯಾಡ್ಮಿಂಟನ್‌ನಲ್ಲಿ ಬೆಳಗಾವಿ ಎ.ತಂಡ ಪ್ರಥಮ, ಬೆಳಗಾವಿ ಬಿ.ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಹೊಸಪೇಟೆ ಎ.ತಂಡ ಪ್ರಥಮ, ಹೊಸಪೇಟೆ ಬಿ.ತಂಡ ದ್ವಿತೀಯ, ಥ್ರೋಬಾಲ್ ಬೆಳಗಾವಿ ವಿಭಾಗದ ತಂಡ ಪ್ರಥಮ, ಹೊಸಪೇಟೆ ವಿಭಾಗ ದ್ವಿತೀಯ ಬಹುಮಾತನ ಪಡೆದರೆ ಹಗ್ಗ ಜಗ್ಗಾಟದಲ್ಲಿ ಬೆಳಗಾವಿ ವಿಭಾಗ ಪ್ರಥಮ, ಕಲಬುರಗಿ ವಿಭಾಗ ದ್ವಿತೀಯ ಸ್ಥಾನ ಪಡೆದವು.

    ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ಬಳ್ಳಾರಿ ಜಿಲ್ಲೆಯ ಸ್ಪರ್ಧಿಗಳು 29 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದರೆ, ಬೆಳಗಾವಿ ಬಿ ತಂಡದವರು 20 ಅಂಕದೊಂದಿಗೆ ದ್ವಿತೀಯ ಮತ್ತು ಹಾವೇರಿಯವರು 18 ಅಂಕದೊಂದಿಗೆ ತೃತೀಯ ಸ್ಥಾನ ಸ್ಥಾನ ಗಳಿಸಿದರು. ಬೀದರ್ ಮತ್ತು ಧಾರವಾಡ ಜಿಲ್ಲೆ ತಂಡಗಳು ಖಾತೆ ತೆರೆಯದೆ ನಿರಾಶೆಗೊಂಡವು.

    ಪುರುಷರ ವಿಭಾಗದ 5 ಕಿ.ಮೀ. ಮ್ಯಾರಥಾನ್‌ನಲ್ಲಿ ವಿಜಯನಗರದ ಕನಕಾಚಲ ಪ್ರಥಮ, ವಿಜಯಪುರದ ಎಲ್.ಎಸ್.ಸಲಗರೆ ದ್ವಿತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದ 5 ಕಿ.ಮೀ. ಮ್ಯಾರಥಾನ್‌ನಲ್ಲಿ ಬೆಳಗಾವಿ ದಕ್ಷಿಣದ ಪುಷ್ಪಾ ಗದಾಡಿ, ಕಲಬುರಗಿಯ ರಮಾ ಅಂಬರೀಷ ದ್ವಿತೀಯ ಸ್ಥಾನ ಗಳಿಸಿದರು. ಬೆಳಗಾವಿ, ಹೊಸಪೇಟೆ ಹಾಗೂ ಕಲಬುರಗಿ ವಿಭಾಗ ವ್ಯಾಪ್ತಿಯ 16 ಜಿಲ್ಲೆಗಳ ಅಧಿಕಾರಿಗಳು, ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

    2011ರಲ್ಲಿ ಕಾಮನ್‌ವಾಲ್ತ್ ಕ್ರೀಡಾಕೂಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಅಬಕಾರಿ ಇಲಾಖೆಯ ವಿನ್ಸೆಂಟ್ ಪ್ರಕಾಶ ಕಾರ್ಲೋ ಅವರನ್ನು ಸನ್ಮಾನಿಸಲಾಯಿತು. ಅಬಕಾರಿ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ, ಬೆಂಗಳೂರಿನ ಅಬಕಾರಿ ಹೆಚ್ಚುವರಿ ಆಯುಕ್ತ ಎಲ್.ಎನ್.ಮೋಹನಕುಮಾರ್, ಬೆಂಗಳೂರಿನ ಅಬಕಾರಿ ಜಂಟಿ ಆಯುಕ್ತೆ ನಿರ್ಮಲಾ ಎನ್., ಅಬಕಾರಿ ಅಧೀಕ್ಷಕ ವಿಜಯ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts