More

    ಬೆಡಸಗಾಂವ ರಾಮಲಿಂಗೇಶ್ವರ ದೇಗುಲದಲ್ಲಿ ಉತ್ಸವ

    ಮುಂಡಗೋಡ: ತಾಲೂಕಿನ ಬೆಡಸಗಾಂವ ಶ್ರೀರಾಮಲಿಂಗೇಶ್ವರ ದೇವಾಲಯವು 8ನೇ ಶತಮಾನದ ಬಹು ಪುರಾತನ ದೇವಾಲಯವಾಗಿದ್ದು 1942ರಿಂದಲೂ ಮಹಾಶಿವರಾತ್ರಿ ಉತ್ಸವವನ್ನು ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಜನರು ಆಚರಿಸುತ್ತಾ ಬಂದಿದ್ದಾರೆ. ಫೆ. 21ರಂದು ಮಹಾಶಿವರಾತ್ರಿ ಉತ್ಸವ ಜರುಗಲಿದ್ದು ಫೆ. 22ರಂದು ಬೆಳಗ್ಗೆ 5.30ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ. 10 ಗಂಟೆಯಿಂದ ಶ್ರೀರಾಮಲಿಂಗೇಶ್ವರ ದೇವರಿಗೆ ತುಲಾಭಾರ ಮುಂತಾದ ಹರಕೆ ಸಮರ್ಪಣಾ ಕಾರ್ಯಕ್ರಮಗಳು ಜರುಗಲಿದ್ದು ನಂತರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಬೆಳಗ್ಗೆ 7ಗಂಟೆಯಿಂದ ರಾತ್ರಿ 10.30ರವರೆಗೆ ಮಹಾಮಂಗಳಾರತಿಯೊಂದಿಗೆ ಹಣ್ಣು-ಕಾಯಿ ಸಮರ್ಪಣೆ ಇರುತ್ತದೆ. ಫೆ. 23ರಂದು ಬೆಳಗ್ಗೆ ಪ್ರಾರ್ಥನೆ, ಪುಣ್ಯಾಹ, ಪ್ರಧಾನ ಸಂಕಲ್ಪ, ಕಲಶ ಸ್ಥಾಪನೆ, ಶಿವಾಧಿವಾಸ ಹೋಮ, ತತ್ವ ಕಲಾನ್ಯಾಸಾದಿಗಳು, ಕಲಶಾಭಿಷೇಕ, ರುದ್ರಾನುಷ್ಠಾನ, ಮಹಾಪೂಜೆ ನಂತರ ಸಾಯಂಕಾಲ 6.30ರ ಗೋಧೂಳಿ ಶುಭ ಮುಹೂರ್ತದಲ್ಲಿ ಲಕ್ಷ ದೀಪೋತ್ಸವ, ರಾಜೋಪಚಾರ ಮತ್ತು ಮಹಾಪ್ರಾರ್ಥನೆ ಜರುಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts