More

    ಬೀದರ್​ನಲ್ಲಿ ಲಾಕ್​ ಡೌನ್​ ಇನ್ನಷ್ಟು ಬಿಗಿಗೆ ಡಿಸಿ ಸೂಚನೆ

    ಬೀದರ್: ಜಿಲ್ಲೆಯಲ್ಲಿ 11 ಜನರಿಗೆ ಕರೊನಾ ತಗುಲಿದ ಪ್ರಕರಣ ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಲಾಕ್ಡೌನ್ ನಿಯಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಡಿಸಿ ಡಾ.ಮಹಾದೇವ ಅವರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.
    ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ವಿಡಿಯೋ ಸಂವಾದ ನಡೆಸಿ, ಈಗ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಾಕಷ್ಟು ಕಟ್ಟೆಚ್ಚರ ವಹಿಸಬೇಕು. ಜನರು ಹೊರಗೆ ಅಡ್ಡಾಡದಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ಬೈಕ್, ನಾಲ್ಕು ಚಕ್ರ ವಾಹನಗಳಲ್ಲಿ ಓಡಾಡುವುದನ್ನು ಸಂಪೂರ್ಣ ತಡೆಯಬೇಕು. ಎಲ್ಲ ಅಧಿಕಾರಿಗಳು ಸನ್ನದ್ಧರಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
    ನಗರದ ಹಳೆಯ ಬೀದರ್, ಬಸವಕಲ್ಯಾಣ ಮತ್ತು ಚಿಟಗುಪ್ಪ ತಾಲೂಕಿನ ಮನ್ನಾಎಖೇಳ್ಳಿಯ 3 ಕಿಮೀ ಪ್ರದೇಶದಲ್ಲಿ ಜನ ಮತ್ತು ವಾಹನಗಳು ಓಡಾಡದಂತೆ ನೋಡಿಕೊಳ್ಳಬೇಕು. ಈ ಪ್ರದೇಶದಲ್ಲಿನ ಜನರಿಗೆ ಸ್ಥಳೀಯ ವ್ಯಾಪಾರಿಗಳಿಂದ ಅವಶ್ಯಕ ದವಸ ಧಾನ್ಯಗಳು, ಹಾಲು ಹಣ್ಣು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
    ಗ್ರಾಮ ಲೆಕ್ಕಿಗರು, ಅಂಗನವಾಡಿ ನೌಕರರು ಮತ್ತು ಆಶಾ ಕಾರ್ಯಕರ್ತೆಯರಿಗೆ ತುರ್ತಾಗಿ ತರಬೇತಿ ನೀಡಿ, ಅವರನ್ನು 5 ಕಿಮೀ ವ್ಯಾಪ್ತಿಯ ಬಫರ್ಜೋನ್ ಪ್ರದೇಶ ಎಂದು ಗುರುತಿಸಿದ ಪ್ರದೇಶಗಳಲ್ಲಿನ ಮನೆ ಮನೆಗೆ ಕಳಿಸಿ, ಅಲ್ಲಿ ಸೋಂಕಿನ ಲಕ್ಷಣ ಕಾಣುವವರ ಆರೋಗ್ಯ ಪರೀಕ್ಷಿಸಿ, ಚಿಕಿತ್ಸೆ ಕೊಡುವಂತೆ ನಿದರ್ೇಶನ ನೀಡಿದರು. ಜನತೆಗೆ ಔಷಧ, ಹಾಲು, ಹಣ್ಣು, ಕಿರಾಣಿ, ಮೊಟ್ಟೆ, ಮಾಂಸ ಸೇರಿ ಸರಳವಾಗಿ ಅವಶ್ಯಕ ವಸ್ತುಗಳು ಸಿಗುವಂತೆ ನೋಡಿಕೊಳ್ಳಬೇಕು. ಅವಶ್ಯಕ ವಸ್ತುಗಳನ್ನು ಸಾಧ್ಯವಾದರೆ ಮನೆಗೆ ತಲುಪಿಸಲು ಕ್ರಮ ವಹಿಸಬೇಕು. ಮನೆಯಿಂದ ಒಬ್ಬೊಬ್ಬರಾಗಿ ಬಂದು ಪಡೆದುಕೊಂಡು ಹೋಗುವಂತೆ ಜನತೆಗೆ ತಿಳಿಹೇಳಬೇಕು ಎಂದು ತಿಳಿಸಿದರು. ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್ಪಿ ಡಿ.ಎಲ್.ನಾಗೇಶ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಅಕ್ಷಯ್ ಶ್ರೀಧರ್ ತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts