More

    ಬೀಜ ಬಿತ್ತನೆ ಕಾರ್ಯಕ್ಕೆ ಎನ್‌ಟಿಆರ್ ಪ್ರೇರಣೆ

    ಕೋಲಾರ/ಶ್ರೀನಿವಾಸಪುರ: ಆಂಧ್ರ ಪ್ರದೇಶದ ವಾಜಿ ಮುಖ್ಯಮಂತ್ರಿ, ದಿವಂಗತ ಎನ್.ಟಿ.ರಾಮರಾವ್ ಅವರ ಪ್ರೇರಣೆಯಿಂದಾಗಿ ಶ್ರೀನಿವಾಸಪುರ ತಾಲೂಕಿನಲ್ಲಿ ಬೀಜ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುವಾರ್ ಹೇಳಿದರು.
    ಶ್ರೀನಿವಾಸಪುರ ತಾಲೂಕಿನ ಸುಣ್ಣದ ಕಲ್ಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಜಿಲ್ಲಾ ಆಡಳಿತ, ತಾಲೂಕು ಆಡಳಿತ, ಅರಣ್ಯ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಬೀಜ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿ, 1983-85ರ ಕಾಲಟ್ಟದಲ್ಲಿ ಎನ್.ಟಿ.ರಾಮರಾವ್ ತಿರುಪತಿ ಬೆಟ್ಟದಲ್ಲಿ ಬೀಜ ಬಿತ್ತನೆ ಕಾರ್ಯ ನಡೆಸಿದ ಪರಿಣಾಮ ತಿರುಮಲ ಬೆಟ್ಟ ಹಸಿರಿನಿಂದ ಕಂಗೊಳಿಸುವಂತಾಗಿದೆ ಎಂದರು.

    ತಿರುಪತಿ ಬೆಟ್ಟ ಮುಂಚೆ ಬೋಳಾಗಿತ್ತು, ಎನ್‌ಟಿಆರ್ ಶ್ರಮದಿಂದ ಹಸಿರು ತಾಣವಾಗಿದೆ, ಅದೇ ರೀತಿ ಕೋಲಾರ ಜಿಲ್ಲೆಯ ಬೆಟ್ಟ-ಗುಡ್ಡಗಳು ಕಾಣಬೇಕೆಂಬ ಆಸೆ ನನ್ನದು ಎಂದರು. ನಮ್ಮ ಜಿಲ್ಲೆಯಲ್ಲೂ ಸಾಕಷ್ಟು ಬೆಟ್ಟ-ಗುಡ್ಡಗಳಿವೆ, ಮಳೆ ಅಭಾವದಿಂದ ಗಿಡ ಬೆಳೆಸಲಾಗದೆ ಬೋಳಾಗಿ ಕಾಣುತ್ತಿದ್ದು, ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಜನರ ಸಹಭಾಗಿತ್ವದಲ್ಲಿ ಬೀಜ ಬಿತ್ತನೆ ಆಂದೋಲನಕ್ಕೆ ಚಾಲನೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಈ ಕಾರ್ಯ ಜಿಲ್ಲಾದ್ಯಂತ ವಿಸ್ತರಿಸಲು ಪ್ರಯತ್ನಿಸುವೆ ಎಂದರು.

    ಸುಣ್ಣದ ಕಲ್ಲು ಬೆಟ್ಟ 9 ಸಾವಿರ ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಮೊದಲ ಹಂತದಲ್ಲಿ 1500 ಕೆಜಿ ಬೀಜದ ಉಂಡೆಗಳನ್ನು ಗ್ಲೈಡರ್ ಮೂಲಕ ಬಿತ್ತನೆ ವಾಡಲಾಗುತ್ತಿದೆ. ಒಂದು ಗ್ಲೈಡರ್‌ಗೆ 95 ಸಾವಿರ ರೂ. ಖರ್ಚಾಗಲಿದೆ ಎಂದರು. ಗಮನ ಸೆಳೆದ ಶ್ವೇತ ವಸ್ತ್ರಧಾರಿಗಳು: ಬೀಜ ಬಿತ್ತನೆ ಕಾರ್ಯಕ್ರಮಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆಯಾದರೂ 16ಕ್ಕೂ ಹೆಚ್ಚು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಂದ 20 ಸಾವಿರಕ್ಕೂ ಅಧಿಕ ಜನರು ಪಕ್ಷಾತೀತ, ಜಾತ್ಯತೀತವಾಗಿ ಪಾಲ್ಗೊಂಡು ಹಬ್ಬದ ವಾತಾವರಣ ಸಷ್ಟಿಸಿದ್ದಾರೆ. ಬಹುತೇಕರು ಪೂರ್ವಿಕರ ಸಂಪ್ರದಾಯ ಗೌರವಿಸುವ ಸಲುವಾಗಿ ಬಿಳಿ ಪಂಚೆ, ಬಿಳಿ ಶರ್ಟ್ ಧರಿಸಿ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

    ಬಳ್ಳಿ ವಿಸ್ತರಣೆಗಾಗಿ ಪದ್ಧತಿ: ಈ ಹಿಂದೆ ಪಾಲಕರು ಮಗಳ ಮದುವೆ ಸಮಯದಲ್ಲಿ ತಲೆಗೆ ರುವಾಲು ಕಟ್ಟಿಕೊಂಡು ವಧುವರನ ಕೈಗೆ ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ ಕೊಟ್ಟು ಅದರ ಮೇಲೆ ಹಾಲು ಎರೆದು ಕನ್ಯಾದಾನ ವಾಡುತ್ತಿದ್ದರು, ಇದರ ಉದ್ದೇಶ ತವರು ಮನೆಯಲ್ಲಿ ಬೆಳೆದ ಮಗಳು ಗಂಡನ ಮನೆಯಲ್ಲೂ ಬಳ್ಳಿಯಂತೆ ವಿಸ್ತಾರಗೊಂಡು ಆ ಮನೆಗೆ ಸಿರಿ ಸಂಪತ್ತು ತಂದುಕೊಡಲಿ ಎಂಬುದಾಗಿತ್ತು, ಈಗ ನಾವು ತಲೆಗೆ ರುವಾಲು ಧರಿಸಿ ಭೂತಾಯಿ ಮಡಲಿಗೆ ಬೀಜ ಬಿತ್ತನೆ ವಾಡುವ ಮೂಲಕ ಪರಿಸರ ಉಳಿಸಲು ಮುಂದಾಗಿದ್ದೇವೆ ಎಂದರು.
    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ನಿರ್ದೇಶಕ ಅನಿಲ್ ಕುವಾರ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಚಂಜಿಮಲೆ ರಮೇಶ್, ಕೋಚಿಮುಲ್ ವಾಜಿ ಅಧ್ಯಕ್ಷ ಬ್ಯಾಟಪ್ಪ, ಜಿಪಂ ವಾಜಿ ಅಧ್ಯಕ್ಷ ಜನ್ನಟ್ಟ ವೆಂಕಟಮುನಿಯಪ್ಪ, ಶ್ರೀನಿವಾಸಪುರ ತಾಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಜಿಪಂ ವಾಜಿ ಸದಸ್ಯ ವ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ರಮೇಶ್ ಕುವಾರ್ ಅವರ ಪುತ್ರ ಹರ್ಷ, ವಲಯ ಅರಣ್ಯಾಧಿಕಾರಿ ಸುರೇಶ್ ಬಾಬು, ತಹಸೀಲ್ದಾರ್ ಶ್ರೀನಿವಾಸ್, ಪರಿಸರ ಪ್ರೇಮಿ ತ್ಯಾಗರಾಜ್ ಇದ್ದರು.

    ನನಗೆ ಜನರ ತೀರ್ಪು ಮುಖ್ಯ: ಬೀಜ ಬಿತ್ತನೆ ಹಬ್ಬಕ್ಕೆ ಬಂದಿರುವ ಜನರು ಸ್ವಂತ ಖರ್ಚಿನಲ್ಲಿ ತಮಗೆ ಬೇಕಾದ ಭಕ್ಷ್ಯಭೋಜನ ತಯಾರಿಸಿ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ, ಈ ರೀತಿಯ ಹಬ್ಬವನ್ನು ಜಿಲ್ಲೆಯ ಬೇರೆಡೆ ಹಮ್ಮಿಕೊಳ್ಳಲಾಗುವುದು, ಕೆಸಿ ವ್ಯಾಲಿಯ ನೀರು ಈಗಾಗಲೆ 104 ಕೆರೆಗಳಿಗೆ ಹರಿದಿದೆ, ಇನ್ನೆರಡು ವರ್ಷದಲ್ಲಿ ಉಳಿದ ಕೆರೆಗಳಿಗೆ ನೀರು ತುಂಬಿಸುವುದು ನನ್ನ ಸಂಕಲ್ಪ. ಟೀಕೆಗಳಿಗೆ ಅಂಜುವುದಿಲ್ಲ, ನನಗೆ ಜನರ ತೀರ್ಪು ಮುಖ್ಯ ಎಂದು ರಮೇಶ್‌ಕುಮಾರ್ ವಿರೋಧಿಗಳಿಗೆ ಟಾಂಗ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts