More

    ಬಿಸಿಯೂಟ ಪಡಿತರ ವಿತರಣೆಗೆ ಸಿಕ್ಕಿಲ್ಲ ಅನುಮತಿ

    ವಿಜಯವಾಣಿ ವಿಶೇಷ ಚಿತ್ರದುರ್ಗ
    ಕರೊನಾ ಕಾರಣದಿಂದ ಬಂದ್ ಆಗಿರುವ ಶಾಲಾಕಾಲೇಜುಗಳನ್ನು ಆರಂಭ ಮಾಡುವ ಚರ್ಚೆ ಪ್ರಾರಂಭವಾಗಿದ್ದರೂ ಕಳೆದ ಮೇನಿಂದ ಸ್ಥಗಿತಗೊಳಿಸಿದ್ದ ಬಿಸಿಯೂಟ ಪಡಿತರ ಮರು ಪೂರೈಕೆಗೆ ರಾಜ್ಯ ಸರ್ಕಾರವಿನ್ನೂ ಮೀನ-ಮೇಷ ಎಣಿಸುತ್ತಿದೆ.
    ಕಳೆದ ಮಾರ್ಚ್ ಕೊನೆಯ ವಾರದಲ್ಲಿ ಲಾಕ್‌ಡೌನ್ ಆದರೂ ಶಿಕ್ಷಣ ಇಲಾಖೆ ಜಿಲ್ಲೆಯ 1 ರಿಂದ 10 ನೇ ತರಗತಿಯ ಸರ್ಕಾರಿ, ಅನುದಾನಸಹಿತ ಶಾಲೆಗಳ 1.68 ಲಕ್ಷ ವಿದ್ಯಾರ್ಥಿಗಳ ಮನೆಗಳಿಗೆ ಆಹಾರ ಇಲಾಖೆ ಮೂಲಕ ಅಕ್ಕಿ, ಎಣ್ಣೆ, ಬೇಳೆ, ಹಾಲಿನ ಪುಡಿಯನ್ನು ಮೇವರೆಗೆ ಪೂರೈಸಲಾಗಿದೆ.
    ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಡಿತರ ಪೂರೈಸಬೇಕೆಂದು ಇಲಾಖೆ ಬಿಸಿಯೂಟ ಯೋಜನೆ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಈ ದಿಸೆಯಲ್ಲಿ ಆಲೋಚನೆ ನಡೆಸಿರುವುದಾಗಿ ಹೇಳುತ್ತಿದೆಯಷ್ಟೆ. ಕಡತ ಅಲ್ಲಿದೆ, ಇಲ್ಲಿದೆ, ಹಣಕಾಸು ಸಚಿವಾಲಯದಲ್ಲಿದೆ ಎಂಬಿತ್ಯಾದಿ ಸಬೂಬು ಕೇಳಿಬರುತ್ತಿದೆ.
    ಬಾರದ ಗೌರವಧನ
    ಜಿಲ್ಲೆಯಲ್ಲಿ ಬಿಸಿಯೂಟ ಯೋಜನೆ 4422 ಅಡುಗೆಯವರು ಹಾಗೂ ಸಹಾಯಕಿಯರಿಗೆ ಕೊಡುವ ಗೌರವಧನವನ್ನು (2700 ಹಾಗೂ 2600 ರೂ.) ಸರ್ಕಾರ ಕಳೆದ ಎರಡು ತಿಂಗಳಿಂದ ಕೊಟ್ಟಿಲ್ಲ. ಅಲಾಟ್‌ಮೆಂಟ್ ಇಲ್ಲದೆ ವೇತನ ಪಾವತಿ ಹೇಗೆಂಬುದು ಅಧಿಕಾರಿಗಳ ಪ್ರಶ್ನೆ.
    ಸದ್ಯ ಶಾಲೆಗಳ ಅಡುಗೆ ಕೊಠಡಿಗಳ ನಿರ್ವಹಣೆ ಕೆಲಸ ಕಾಲದಿಂದ ಕಾಲಕ್ಕೆ ನಡೆದಿದೆ. ಶಾಲೆಗಳೂ ಆರಂಭವಾಗದಿದ್ದರೂ ಅಡುಗೆ ಕೋಣೆಗಳ ಶುಚಿತ್ವ ಕಾಪಾಡುವಂತೆ ಅಡುಗೆಯವರಿಗೆ ಸೂಚಿಸಿದ್ದಾಗಿ ಬಿಸಿಯೂಟ ಯೋಜನೆ ಅಧಿಕಾರಿ ಪಿ.ರಾಜಣ್ಣ ಮಾಹಿತಿ ನೀಡಿದ್ದಾರೆ.

    ಸೆಪ್ಪೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ 1 ರಿಂದ 10 ತರಗತಿಗೆ 59 ಸಾವಿರ ಬಾಲಕಿಯರು ಹಾಗೂ 56 ಸಾವಿರ ಬಾಲಕರ ಸಹಿತ ಅಂದಾಜು 1.16 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
    ರವಿಶಂಕರ ರೆಡ್ಡಿ, ಡಿಡಿಪಿಐ

    ಮೇವರೆಗೂ ಬಿಸಿಯೂಟ ಫಲಾನುಭವಿಗಳಿಗೆ ಪಡಿತರ ಅಂಗಡಿಗಳು ಆಹಾರ ಪದಾರ್ಥ ಪೂರೈಸಿವೆ. ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದ್ದರಿಂದ ಈಗ ಕೊಡುತ್ತಿಲ್ಲ. ಶಿಕ್ಷಣ ಇಲಾಖೆ ಅಲಾಟ್‌ಮೆಂಟ್ ಕೊಡಿಸಿದರೆ ಪೂರೈಸಲಾಗುವುದು. ಮಾರ್ಚ್ ನಂತರ ಹೊಸದಾಗಿ ಬಿಪಿಎಲ್ ಕಾರ್ಡ್ ಕೊಟ್ಟಿಲ್ಲ. ಸದ್ಯ ರಾಜ್ಯದಲ್ಲಿ 4.94 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿಗಳ ಪೈಕಿ 4.14 ಲಕ್ಷ ಅರ್ಜಿ ಇತ್ಯರ್ಥ ಪಡಿಸಲಾಗಿದೆ.
    ಕೆ.ಪಿ.ಮಧುಸೂದನ್ ಜಂಟಿ ನಿರ್ದೇಶಕ
    ಆಹಾರ ಮತ್ತು ನಾಗರಿಕರ ಸರಬರಾಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts