More

  6ನೇ ಗ್ಯಾರಂಟಿಯನ್ನು ಶೀಘ್ರ ಕಾರ್ಯರೂಪಕ್ಕೆ ತನ್ನಿ

  ಭದ್ರಾವತಿ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸರ್ಕಾರವು ೬ನೇ ಗ್ಯಾರಂಟಿಯಾಗಿ ಗೌರವಧನ ಹೆಚ್ಚಳ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ -ೆಡರೇಷನ್ ತಾಲೂಕು ಶಾಖೆ ಅಧ್ಯಕ್ಷೆ ಆರ್.ವೇದಾವತಿ ಒತ್ತಾಯಿಸಿದರು.
  ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಽ 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನವನನ್ನು 15 ಸಾವಿರ ರೂ. ಹಾಗೂ ಸಹಾಯಕಿಯರಿಗೆ 10 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ ಅವರ ಘೋಷಣೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ನಿವೃತ್ತರಿಗೆ 3 ಲಕ್ಷ ರೂ. ಇಡುಗಂಟು ನೀಡುವ ಭರವಸೆ ಸಹ ಹುಸಿಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
  ಅಂಗನವಾಡಿ ಕಾರ್ಯಕರ್ತೆಯರಿಗೆ 49 ವರ್ಷಗಳಿಂದ ಕೈತುಂಬಾ ಸಂಬಳ ಕೊಡದೆ, ಕೇವಲ ಗೌರವಧನ ನೀಡಲಾಗುತ್ತಿದೆ. ಈಗಿರುವ ಗೌರವಧನದಿಂದ ಜೀವನ ನಡೆಸುವುದು ಕಷ್ಟವಾಗಿದೆ. ಗೃಹಲಕ್ಷಿ÷್ಮ ಯೋಜನೆಯ 2 ಸಾವಿರ ರೂ.ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ನೀಡದಿದ್ದರೂ ೬ನೇ ಗ್ಯಾರಂಟಿಯನ್ನು ಶೀಘ್ರ ಕಾರ್ಯರೂಪಕ್ಕೆ ತನ್ನಿ. ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್‌ಗೆ ಅನುಮೋದನೆ ಪಡೆಯುವ ಮುನ್ನವೇ ಅಂಗನವಾಡಿಯಲ್ಲಿ ದುಡಿಯುತ್ತಿರುವ ಮಹಿಳಾ ಸಮುದಾಯಕ್ಕೆ ಗೌರವ ಧನ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
  ಸಂಘದ ಗೌರವಾಧ್ಯಕ್ಷೆ ಸುಶೀಲಾ ಬಾಯಿ ಮಾತನಾಡಿ, ಸರ್ಕಾರಗಳು ಆಸೆ ತೋರಿಸಿ ನಮ್ಮನ್ನು ಮೂರ್ಖರನ್ನಾಗಿಸುವ ಕೆಲಸ ಮಾಡುತ್ತಿವೆ. ನುಡಿದಂತೆ ನಡೆಯದೆ ಹೆಣ್ಣುಮಕ್ಕಳನ್ನು ಬೀದಿಗೆ ತಳ್ಳುತ್ತಿದ್ದಾರೆ. ಸರ್ಕಾರಕ್ಕೆ ನಮ್ಮ ಬಗ್ಗೆ ಗೌರವವಿದ್ದರೆ ಅಂಗನವಾಡಿ ಕಾರ್ಯಕರ್ತೆಯರ ಜೀವನೋಪಾಯಕ್ಕೆ ದಾರಿ ಮಾಡಿಕೊಡಬೇಕು ಎಂದರು.
  ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವಿಶಾಲಾ, ಹೇಮಾವತಿ, ಪ್ರಮಿಳಾ, ರೇಖಾ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts