More

    ಬಿಬಿಎಂಪಿ ಕಸ ವಿಲೇವಾರಿ ಘಟಕದ ಕಸದ ರಾಶಿಗೆ ಬೆಂಕಿ

    ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲ ಹೋಬಳಿಯ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ಕಸದ ರಾಶಿಗಳಿಗೆ ಬುಧವಾರ ಬೆಂಕಿ ಬಿದ್ದಿದೆ. ನಾಲ್ಕು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದ್ದು ರಾತ್ರಿಯೂ ಮುಂದುವರಿದಿದೆ.

    ಬಿಬಿಎಂಪಿ ವ್ಯಾಪ್ತಿಯಿಂದ ಪ್ರತಿದಿನ ನೂರಾರು ಲಾರಿಗಳಲ್ಲಿ ಕಸ ತಂದು ಹಾಕಲಾಗುತ್ತಿದೆ. ಕಸದ ರಾಶಿಗಳಿಗೆ ತಗುಲಿದ್ದ ಬೆಂಕಿ ನಂದಿದೆಯಾದರೂ, ದಟ್ಟ ಹೊಗೆ ಕಸ ವಿಲೇವಾರಿ ಘಟಕದ ಸುತ್ತಲಿನ ಮಾವಿನಕುಂಟೆ, ತಿಪ್ಪೇನಹಳ್ಳಿ, ತಣ್ಣೀರನಹಳ್ಳಿ, ಬರಗೂರು, ಎಲಚಗೆರೆ, ಕರ್ಮಾರನಹಳ್ಳಿ, ಮುಡ್ಲಕಾಳೇನಹಳ್ಳಿ ಗ್ರಾಮಗಳನ್ನು ಆವರಿಸಿದೆ.

    ಈ ಹಿಂದೆಯೂ ಇದೇ ರೀತಿ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಗ್ರಾಮದ ಸಮೀಪದ ಟೆರ‌್ರಾ ಫರ್ಮಾ ಬಿಬಿಎಂಪಿ ಕಸ ವಿಲೇವಾರಿ ಘಟಕದಲ್ಲ್ಲಿ ಕಸದ ರಾಶಿಗೆ ಪದೇಪದೆ ಬೆಂಕಿ ಬಿದ್ದು ಸುತ್ತಮುತ್ತಲಿನ ಗ್ರಾಮಗಳ ಜನರು ನರಕಯಾತನೆಪಡುವಂತಾಗಿತ್ತು.

    ಇದರಿಂದ ರೊಚ್ಚಿಗೆದ್ದ ಜನರು ನಿಯಮ ಮೀರಿ ಕಸ ಸಂಗ್ರಹ ಮಾಡುತಿದ್ದ ಟೆರ‌್ರಾ ಫರ್ಮಾ ಘಟಕವನ್ನೇ ಬಂದ್ ಮಾಡಿಸಿದ್ದಾರೆ. ಈಗ ಇದೇ ಹಾದಿಯಲ್ಲಿ ಸಾಗಿರುವ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಿಂದಲೂ ಹೊರ ಬರುತ್ತಿರುವ ಹೊಗೆಯಿಂದಾಗಿ ಈ ಭಾಗದ ಜನ, ಜಾನುವಾರುಗಳು ಉಸಿರಾಟದ ತೊಂದರೆಗೆ ಸಿಲುಕುವಂತಾಗಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts