More

    ಬಿಪಿಎಲ್ ಕಾರ್ಡ್ ಹಿಂಪಡೆಯುವುದು ಖಂಡನೀಯ

    ಬಾಗೇಪಲ್ಲಿ : ಕೃಷಿ ಚಟುವಟಿಕೆಗೆ ಅವಶ್ಯಕವಿರುವ ಟ್ರ್ಯಾಕ್ಟರ್ ಹೊಂದಿರುವ ಕೃಷಿಕರ ಬಿಪಿಎಲ್ ಕಾರ್ಡ್‌ನ್ನು ವಾಪಸ್ಸು ಪಡೆಯುವಂತೆ ಆದೇಶಿಸಿರುವ ರಾಜ್ಯ ಸರ್ಕಾರದ ನಿಲುವು ಖಂಡನೀಯ ಎಂದು ಸಮಾಜಸೇವಕ ಗುಂಜೂರು ಆರ್.ಶ್ರೀನಿವಾಸರೆಡ್ಡಿ ಬೇಸರ ವ್ಯಕ್ತಪಡಿಸಿದರು.

    ತಾಲೂಕಿನ ಗೂಳೂರು ಹೋಬಳಿ ಡಿ.ಕೊತ್ತಪಲ್ಲಿಯಲ್ಲಿ ಸಾಲಭಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ ಮೃತ ರೈತ ರವಣಪ್ಪ ಕುಟುಂಬದವರಿಗೆ 50 ಸಾವಿರ ರೂಗಳ ಸಹಾಯಧನದ ಚೆಕ್ ವಿತರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಬೆಳೆಯುತ್ತಿರುವ ಕೃಷಿ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದೆ ಸಂಕಷ್ಠದ ಜೀವನ ನಡೆಸುತ್ತಿದ್ದಾರೆ. ರೈತರ ಬಳಿಯಿಂದ ಬಿಪಿಎಲ್ ಕಾರ್ಡ್ ವಾಪಸ್ಸು ಪಡೆದುಕೊಳ್ಳುವ ಸರ್ಕಾರದ ತೀರ್ಮಾನ ಅವೈಜ್ಞಾನಿವಾಗಿದೆ. ಟ್ರ್ಯಾಕ್ಟರ್ ಖರೀಧಿಗೆ ಸರ್ಕಾರವೇ ಪ್ರೋತ್ಸಾಹ ನೀಡಿ ಕೃಷಿಗೆ ಬೆಂಬಲಿಸಿದೆ, ಅದರೇ ಇದೀಗ ಟ್ರ್ಯಾಕ್ಟರ್ ಖರೀದಿಗೆ ಪ್ರೋತ್ಸಾಹ ನೀಡಿರುವ ರಾಜ್ಯ ಸರ್ಕಾರವೇ ರೈತರ ಬಿಪಿಎಲ್ ಕಾರ್ಡ್ ಹಿಂಪಡೆದು ರೈತರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ರೈತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರು ದೇಶಕ್ಕೆ ಅನ್ನ ನೀಡುತ್ತಿರುವ ಅನ್ನದಾತನ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಟ್ರ್ಯಾಕ್ಟರ್ ಹೊಂದಿರುವ ರೈತರ ಬಿಪಿಎಲ್ ಕಾರ್ಡ್ ಹಿಂಪಡೆದುಕೊಳ್ಳುವ ರಾಜ್ಯ ಸರ್ಕಾರದ ತೀರ್ಮಾನವನ್ನು ತಕ್ಷಣವೇ ಹಿಂಪಡೆದುಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಟಿ.ಎನ್.ರವಿಚಂದ್ರರೆಡ್ಡಿ ಮಾತನಾಡಿ, ಕೋವಿಡ್ 19 ಲಾಕ್‌ಡೌನ್ ನಿಂದ ರೈತರ ಬೆಳೆಗಳಿಗೆ ಸೂಕ್ತ ಸಾರಿಗೆ ಮತ್ತು ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಬೆಳೆದ ತರಕಾರಿ ಬೆಳೆಗಳಿಗೆ ಬೆಳೆ ಸಿಗದೆ ಜಮೀನಿನಲ್ಲೆ ಬಿಟ್ಟಿದ್ದಾರೆ. ಇಂತಹ ಸಂಕಷ್ಠದಲ್ಲಿ ರಾಜ್ಯ ಸರ್ಕಾರ 1 ಹೆಕ್ಟೇರ್‌ಗೆ 15 ಸಾವಿರ ರೂ ನಷ್ಠ ಪರಿಹಾರ ಘೋಷಿಸಿದೆ. 1 ಹೆಕ್ಟೇರ್ ಜಮೀನನಲ್ಲಿ ತರಕಾರಿ ಬೆಳೆ ಬೆಳೆಯಬೇಕಾದರೆ ರೈತರಿಗೆ ಕನಿಷ್ಠ 1 ಲಕ್ಷ ರೂ ಕರ್ಚು ಆಗುತ್ತದೆ. ಆದರೇ ಸರ್ಕಾರ ನೀಡುತ್ತಿರುವ ನಷ್ಠ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ನಷ್ಠ ಪರಿಹಾರ ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದರು.

    ಗಾಪಂ ಉಪಾಧ್ಯಕ್ಷ ಸೂರಿ, ಸದಸ್ಯ ಸಾಯಿನಾಥ್‌ರೆಡ್ಡಿ, ಗ್ರಾಮಸ್ಥರಾದ ರಂಗಪ್ಪ, ಲಕ್ಷ್ಮೀನಾರಾಯಣ, ಎನ್.ಶಂಕರ, ಎಂ.ನರಸಿಂಹಪ್ಪ, ಎಂ.ನಾರಾಯಣಸ್ವಾಮಿ, ಕೃಷ್ಣಪ್ಪ, ರಾಜು, ಶ್ರೀರಾಮಪ್ಪ, ರವಣಪ್ಪ, ನಾಗಮುನಿಯಪ್ಪ, ಆರ್.ಭಾಸ್ಕರ್, ಮುಖಂಡರಾದ ಗೂಳೂರು ವಿನೋದ್, ಅರುಣ್, ಜಿ.ಆರ್.ಅಂಬರೀಷ್, ಎ.ಕಾರ್ತಿಕ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts