More

    ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

    ಕಳಸ: ವಿಶ್ವ ಹಿಂದು ಪರಿಷತ್, ಬಜರಂಗದಳ ಕರೆ ನೀಡಿದ್ದ ಕಳಸ ತಾಲೂಕು ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ಕಾರಿ ಕಚೇರಿ, ಬ್ಯಾಂಕ್, ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.  ಸಂಸೆ, ಹಿರೇಬೈಲು, ಬಾಳೆಹೊಳೆ ಸೇರಿ ಗ್ರಾಮೀಣ ಭಾಗದಲ್ಲೂ ಬೆಂಬಲ ವ್ಯಕ್ತವಾಯಿತು. ಪಟ್ಟಣದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಹತ್ಯೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಜಿಲ್ಲಾ ಗೋ ರಕ್ಷಕ ಪ್ರಮುಖ್ ಅಜಿತ್ ಕುಳಾಲ್ ಮಾತನಾಡಿ, ಹಿಂದು ಕಾರ್ಯಕರ್ತರ ಮತ, ಶ್ರಮದಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿಯಿಂದ ಹಿಂದುಗಳಿಗೇ ರಕ್ಷಣೆ ಸಿಗುತ್ತಿಲ್ಲ. ನಾವು ಹಿಂದುತ್ವದ ಪರವಾಗಿದ್ದೇವೆಯೇ ಹೊರತು ಪಕ್ಷದ ಪರ ಅಲ್ಲ. ಸರ್ಕಾರಕ್ಕೆ ತಾಕತ್ತಿದ್ದಲ್ಲಿ ಪಿಎಫ್​ಐ ಸಂಘಟನೆಯನ್ನು ನಿಷೇಧಿಸಲಿ, ಹಿಂದುಗಳ ಮೇಲೆ ದಾಳಿ ಮಾಡುವವರನ್ನು ಎನ್​ಕೌಂಟರ್ ಮಾಡಲಿ ಎಂದು ಆಗ್ರಹಿಸಿದರು. ಮುಖಂಡ ಬಿ.ಕೆ.ಮಹೇಶ್ ಮಾತನಾಡಿ, ನಮಗೆ ಪಕ್ಷಕ್ಕಿಂತ ಹಿಂದುತ್ವವೇ ಮುಖ್ಯ. ಆದ್ದರಿಂದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದು ಹಿಂದುತ್ವದ ಉಳಿವಿಗೆ ಕೆಲಸ ಮಾಡುತ್ತೇವೆ. ಹಿಂದುಗಳ ಮತದಿಂದ ಅಧಿಕಾರ ಅನುಭವಿಸುತ್ತಿರುವವರು ಅವರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಹೊರಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪ ತಾಲೂಕು ಸಂಚಾಲಕ ರಾಕೇಶ್, ಗೋರಕ್ಷಕ ಪ್ರಮುಖ್ ವಿಜಯ್, ತಾಲೂಕು ಸಂಚಾಲಕ ಸಂತೋಷ್, ಸಹ ಸಂಯೋಜಕ ಚೇತನ್, ಸುರಕ್ಷಾ ಪ್ರಮುಖ್ ಪ್ರದೀಪ್, ಮುಖಂಡರಾದ ಸುಜಯಾ ಸದಾನಂದ, ಗಿರೀಶ್ ಹೆಮ್ಮಕ್ಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts