More

    ಬಿಜೆಪಿ, ಸಂಘ ಪರಿವಾರದಿಂದ ಸೌಹಾರ್ದತೆಗೆ ಧಕ್ಕೆ

    ಶಹಾಪುರ: ಉಡುಪಿ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಿದ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಮುಸ್ಲಿಂ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಹೊಸ ಬಸ್ನಿಲ್ದಾಣದಿಂದ ಬಸವೇಶ್ವರ ಸರ್ಕಲ್ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಒಕ್ಕೂಟದ ಮುಖ್ಯಸ್ಥೆ ಫಿರ್ದೋಸ್ ಖಾತೂನ್ ಮಾತನಾಡಿ, ಹಿಜಾಬ್ ಮುಸ್ಲಿಂರ ಸಾಂವಿಧಾನಿಕ ಹಕ್ಕು. ನಮ್ಮ ದೇಶದಲ್ಲಿ ಹಲವು ಜಾತಿ, ಧರ್ಮದ ಜನರು ಕೋಮು ಸೌಹಾರ್ದತೆಯಿಂದ ಹಾಗೂ ತಮ್ಮ ಧರ್ಮಕ್ಕೆ ಅನುಸಾರವಾಗಿ ಜೀವಿಸುತ್ತಿದ್ದಾರೆ. ಆದರೆ ಬಿಜೆಪಿ, ಸಂಘ ಪರಿವಾರ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಭಂಗ ತಂದು ಜನರಲ್ಲಿ ಜಾತಿ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಸ್ಲಿಂ ಮಹಿಳೆಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಕುತಂತ್ರ ಸಂಘಪರಿವಾರ ನಡೆಸುತ್ತಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಹಿಜಾಬ್ ಮುಂದಿಟ್ಟುಕೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ಸಕರ್ಾರ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

    ನಮ್ಮ ಧರ್ಮದಲ್ಲಿ ಹಿಜಾಬ್ ಧರಿಸುವುದು ಕಡ್ಡಾಯ. ಇದು ತಲತಲಾಂತರದಿಂದ ಬಂದ ಸಂಪ್ರದಾಯ. ಹಿಜಬ್ ನಮ್ಮ ಹಕ್ಕು. ನಾವು ಪ್ರಾಣ ಬೇಕಾದರೆ ಕೊಡುತ್ತೇವೆ. ಆದರೆ ಹಿಜಾಬ್ ಧರಿಸುವುದು ಬಿಡುವುದಿಲ್ಲ. ಇದರಲ್ಲಿ ರಾಜಕೀಯ ಮಾಡಿ, ವಿವಾದ ಸೃಷ್ಠಿಸಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಪ್ರತಿಭಟನೆಯಲ್ಲಿ ಶಕೀರಾ ಬೇಗಂ, ತಸ್ಲಿಮಾ, ಸಲ್ಮಾ, ಹಾಜರಬೀ, ಕನೀಜ್ ಫಾತಿಮಾ, ರತ್ಅಜ್ಜು, ಶಾಹೀನ್, ಫಾತಿಮಾ ಜೀನತ್, ನಿಲೋರ್ ಬೇಗಂ, ಸೈಯದ್ ಅಫ್ರಿನ್, ಸಾಮ್ರಾನ್ ನೂರಾರು ಮಹಿಳೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts