More

    ಬಿಜೆಪಿ ಮುಖಂಡ ಸಾಕಿದ ಆನೆ ಮೃತ, ಪೂಜೆ ಸಂದರ್ಭದಲ್ಲೇ ಪ್ರಾಣ ಬಿಟ್ಟ ಗಜೇಂದ್ರ, ಅಂತಿಮ ಸಂಸ್ಕಾರ ವೇಳೆ ಆಕ್ರಂದನ, ಗೌಡರ ಗಜ ಪ್ರೀತಿಗೆ ನೆಟ್ಟಿಗರು ಫಿದಾ !

    ವಿಜಯಪುರ: ಭಾರತೀಯ ಜನತಾ ಪಕ್ಷದ ಮುಖಂಡನೋರ್ವನ ಗಜ ಕಾಳಜಿಗೆ ನೆಟ್ಟಿಗರು ಫಿದಾ ಆಗಿದ್ದಾರೆ !
    ಕಳೆದ 35 ವರ್ಷಗಳಿಂದ ಸಾಕಿದ ಆನೆ ಆಕಸ್ಮಿಕವಾಗಿ ಅಸುನೀಗಿದ್ದು ಅದರ ಅಂತ್ಯಸಂಸ್ಕಾರದ ದೃಶ್ಯಾವಳಿಗಳು ಮನಕಲಕುತ್ತಿವೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಜೇಂದ್ರ ಇಹಲೋಕ ತ್ಯಜಿಸಿದ್ದಕ್ಕೆ ಇಡೀ ಕುಟುಂಬ ಸದಸ್ಯರು ಮುಗಿಲು ಮುಟ್ಟುವಂತೆ ಆಕ್ರಂದಿಸಿದ್ದು ನೆಟ್ಟಿಗರ ಕಣ್ಣಾಲೆಯಲ್ಲಿ ಹನಿ ಜಿನುಗುವಂತೆ ಮಾಡಿವೆ. ಅಂದಹಾಗೆ ಆ ಬಿಜೆಪಿ ಮುಖಂಡ ಬೇರೆ ಯಾರೂ ಅಲ್ಲ, ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ಹಿಂದಿನ ಅಭ್ಯರ್ಥಿ ವಿಜುಗೌಡ ಪಾಟೀಲ.
    ನ. 16 ರಂದು ಮುಧೋಳದ ಚಿಪ್ಪಲಕಟ್ಟಿ ಗ್ರಾಮದಲ್ಲಿ ಲಕ್ಷ್ಮಿ ಪೂಜೆ ಸಂದರ್ಭ ಆನೆ ಅಸುನೀಗಿದೆ. 58 ವರ್ಷದ ಈ ಆನೆ ಮುಧೋಳದ ಮಠದಿಂದ ತರಲಾಗಿತ್ತು. ವಿಜುಗೌಡ ಪಾಟೀಲರ ವಿಜಯಪುರದ ತೋಟದ ಮನೆಯಲ್ಲಿಯೇ ಹೆಚ್ಚಾಗಿ ಇರುತ್ತಿತ್ತು. ಗೌಡರ ಪುತ್ರ ಸಮರ್ಥ ಹಾಗೂ ಶಾಶ್ವತ್ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಆಗಾಗ ಚಿಪ್ಪಲಕಟ್ಟಿಗೆ ಆನೆಯನ್ನು ಕಳುಹಿಸಿಕೊಡಲಾಗುತ್ತಿತ್ತು. ಕೆಲ ದಿನಗಳ ಹಿಂದೆ ಕಾಲಿಗೆ ಸಣ್ಣ ಗಾಯವಾಗಿತ್ತು. ವಿಜುಗೌಡ ಪಾಟೀಲರೇ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದ್ದರು. ನ. 16 ರಂದು ಪೂಜೆ ಸಂದರ್ಭ ಶಾಶ್ವತವಾಗಿ ಕಣ್ಮುಚ್ಚಿದ್ದು ಗ್ರಾಮಸ್ಥರಲ್ಲಿ ದುಃಖದ ಜೊತೆಗೆ ಪೂಜ್ಯನೀಯ ಭಾವ ಹೆಚ್ಚಿಸಿತ್ತು.
    ಹಿಂದೂ ಧರ್ಮದ ಸಾಂಪ್ರದಾಯಕ ಪೂಜೆ-ಪುನಸ್ಕಾರ ಹಾಗೂ ವಿಧಿ-ವಿಧಾನಗಳ ಪ್ರಕಾರ ಚಿಪ್ಪಲಕಟ್ಟಿಯಲ್ಲಿಯೇ ಗಜೇಂದ್ರನ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ನೂರಾರು ಜನರ ಸಮ್ಮುಖದಲ್ಲಿ ನಡೆದ ಅಂತ್ಯಸಂಸ್ಕಾರದ ವೇಳೆ ವಿಜುಗೌಡರ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯಗಳು ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಜುಗೌಡ ಪಾಟೀಲರ ಗಜ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts