More

    ಬಿಜೆಪಿ ತೆಕ್ಕೆಗೆ ಬಾಗೇಪಲ್ಲಿ ಎಪಿಎಂಸಿ

    ಬಾಗೇಪಲ್ಲಿ : ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದು, ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೆಂಬಲಿತ ಅಭ್ಯರ್ಥಿಗೆ ಸೋಲಾಗಿದೆ.

    ಬಿಜೆಪಿ ಬೆಂಬಲಿತ ಬೋಯಿಪಲ್ಲಿ ಸೋಮಶೇಖರ್‌ರೆಡ್ಡಿ 8 ಮತ ಪಡೆದರೆ, ಪರಾಜಿತ ಅಭ್ಯರ್ಥಿ ಜಿ.ಎನ್.ರಾಮಚಂದ್ರಪ್ಪ 7 ಮತ ಪಡೆದುಕೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಕೆ.ಆರ್.ಆಂಜನಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧ ಆಯ್ಕೆಯಾದರು.

    ಒಟ್ಟು 16 ಸ್ಥಾನಗಳನ್ನು ಹೊಂದಿರುವ ಎಪಿಎಂಸಿಯಲ್ಲಿ ಸಿಪಿಎಂ ಬೆಂಬಲಿತ 3, ಕಾಂಗ್ರೆಸ್ 8, ಜೆಡಿಎಸ್ 1, ಬಿಜೆಪಿ 3 ನಾಮನಿರ್ದೇಶನ ಸೇರಿ ಒಟ್ಟು ನಾಲ್ಕು ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಕಡೇಹಳ್ಳಿ ಗಂಗಿರೆಡ್ಡಿ ಮತದಾನಕ್ಕೆ ಗೈರಾಗಿದ್ದು, ಕೊನೇ ಗಳಿಗೆಯಲ್ಲಿ ಸಿಪಿಎಂ ಬೆಂಬಲಿತ ಕೆಲ ಅಭ್ಯರ್ಥಿಗಳು ಬಿಜೆಪಿ ಕಡೆ ವಾಲಿದ್ದರಿಂದ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಬಿಜೆಪಿ ಪಾಲಾಗಿವೆ.

    ಈ ಮುಂಚೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ನ ಜಿ.ಎನ್.ರಾಮಚಂದ್ರಪ್ಪ ಅವರನ್ನು ಗೆಲ್ಲಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಬಿಜೆಪಿ ನಿರ್ದೇಶಕ ಕೆ.ಆರ್.ಆಂಜನಪ್ಪ ಅವರಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿತ್ತು. ಕೊನೇ ಗಳಿಗೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ ಅಖಾಡಕ್ಕೆ ಇಳಿದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಸೆಡ್ಡು ಹೊಡೆದು ಸಿಪಿಎಂ ಬೆಂಬಲಿತ ಸದಸ್ಯರನ್ನು ಬಿಜೆಪಿ ತೆಕ್ಕೆಗೆ ಹಾಕಿಕೊಳ್ಳಲು ಸಹಕರಿಸಿದ ಕಾರಣ ಬಿಜೆಪಿ ಗೆಲುವು ಸುಲಭವಾಯಿತು.

    ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಮಂಡಲ ಬಿಜೆಪಿ ಅಧ್ಯಕ್ಷ ಆರ್.ಪ್ರತಾಪ್, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಆರ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್, ಪ್ರಭಾಕರರೆಡ್ಡಿ, ಉಪಾಧ್ಯಕ್ಷ ಲೋಕೇಶ್, ಹಾಗೂ ಮುಖಂಡರಾದ ಜಿ.ವಿ.ಕೃಷ್ಣಯ್ಯ, ಲೋಕೇಶ್, ಚಂದ್ರಶೇಖರೆಡ್ಡಿ, ವನಜಮ್ಮ, ವೆಂಕಟಲಕ್ಷ್ಮಮ್ಮ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts