More

    ಬಿಜೆಪಿಯಿಂದ ಸಶಕ್ತ ಭಾರತ ನಿರ್ಮಾಣ, ಮಾಜಿ ಶಾಸಕ ಎಂ.ವಿ.ನಾಗರಾಜು ಅಭಿಪ್ರಾಯ, ಬಿಜೆಪಿ ಕಾರ್ಯಕರ್ತರಿಂದ ಬೈಕ್ ರ‌್ಯಾಲಿ

    ನೆಲಮಂಗಲ: ಸಶಕ್ತ ಭಾರತ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜು ಅಭಿಪ್ರಾಯಪಟ್ಟರು.

    ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ತಾಲೂಕಿನ ಬೈರಶೆಟ್ಟಿಹಳ್ಳಿಯ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

    ನರೇಂದ್ರ ಮೋದಿ ದೇಶದ ಬಹುದೊಡ್ಡ ಶಕ್ತಿಯಾಗಿದ್ದಾರೆ. ಕರೊನಾ ಸಂದರ್ಭದಲ್ಲಿ 2 ಬಾರಿ ಉಚಿತವಾಗಿ ವಿತರಣೆ ಮಾಡಿ ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿದರು. ದೇಶದ ಅಭಿವೃದ್ಧಿ ವಿಚಾರವಾಗಿ ಅನೇಕ ಸವಾಲು ಎದುರಿಸಿ ಯಶಸ್ವಿಯಾಗಿ 8 ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

    ಕ್ಷೇತ್ರ ಬಿಜೆಪಿ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಕಳೆದೆರೆಡು ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ದೇಶದ ಜನತೆ ಬೆಂಬಲಿಸಿದ್ದಾರೆ. ಮೇ 30ಕ್ಕೆ ನರೇಂದ್ರಮೋದಿ ಪ್ರಧಾನಿಯಾಗಿ 8 ವರ್ಷವಾಗಲಿರುವ ವಿಚಾರವನ್ನು ಕ್ಷೇತ್ರದ ಜನತೆಗೆ ತಿಳಿಸುವ ಉದ್ದೇಶದಿಂದ ಬೈಕ್ ರ‌್ಯಾಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ದೇವರ ದರ್ಶನ: ತಾಲೂಕಿನ ಬೈರಶೆಟ್ಟಿಹಳ್ಳಿಯ ಶ್ರೀ ಬೈಲಾಂಜನೇಯ ಸ್ವಾಮಿ, ಬಸವನಹಳ್ಳಿ ಲಕ್ಷ್ಮೀ ವೆಂಕಟರಮಣ, ವಾಜರಹಳ್ಳಿ ಮಾರಮ್ಮದೇವಿ, ಭಿನ್ನಮಂಗಲದ ಶ್ರೀ ಆಂಜನೇಯ ಸ್ವಾಮಿ, ಅರಿಶಿಣಕುಂಟೆಯ ಶ್ರೀ ಆಂಜನೇಯ ಸ್ವಾಮಿ, ಜಕ್ಕಸಂದ್ರದ ಶ್ರೀ ಆಂಜನೇಯ ದೇಗುಲಗಳಲ್ಲಿ ನರೇಂದ್ರಮೋದಿ ಅವರ ಆಯುಷ್ಯ ವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

    ಬೃಹತ್ ಬೈಕ್ ರ‌್ಯಾಲಿ: ತಾಲೂಕಿನ ಬೈರಶೆಟ್ಟಿಹಳ್ಳಿಯಿಂದ ಬೃಹತ್ ಬೈಕ್ ರ‌್ಯಾಲಿ ಆರಂಭಗೊಂಡಿತು. ನಗರಸಭೆ ವ್ಯಾಪ್ತಿಯ ಬಸವನಹಳ್ಳಿ, ರೇಣುಕಾ ನಗರ ಹಾಗೂ ನಗರದ ಮುಖ್ಯ ರಸ್ತೆ ಮೂಲಕ ಪೇಟೆ ಬೀದಿ, ವಾಜರಹಳ್ಳಿ ಭಕ್ತನಪಾಳ್ಯ, ಭಿನ್ನಮಂಗಲ ಅರಿಶಿಣಕುಂಟೆವರೆಗೂ ಸಂಚರಿಸಿತು. ಬಳಿಕ ನಗರದ ಮುಖ್ಯ ರಸ್ತೆಯ ಮೂಲಕ ಕುಣಿಗಲ್ ವೃತ್ತ ತಲುಪಿ ಜಕ್ಕಸಂದ್ರ ಗ್ರಾಮದಲ್ಲಿ ಮುಕ್ತಾಯಗೊಳಿಸಲಾಯಿತು. ಕಾರ್ಯಕರ್ತರಿಗೆ ಪುರಸಭೆ ಮಾಜಿ ಸದಸ್ಯ ಕೇಶವಮೂರ್ತಿ ಊಟದ ವ್ಯವಸ್ಥೆ ಮಾಡಿದ್ದರು.

    ಬಿಎಂಟಿಸಿ ನಿರ್ದೇಶಕ ಕೆ.ಪಿ.ಬೃಂಗೇಶ್, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್.ರಾಮ್, ನಗರಸಭೆ ಸದಸ್ಯರಾದ ಎನ್.ಗಣೇಶ್, ಪೂರ್ಣಿಮಾ ಸುಗ್ಗರಾಜು, ಹೆಚ್ಚುವರಿ ಕೌನ್ಸಿಲರ್ ಆಂಜಿನಮೂರ್ತಿ, ಮುನಿರಾಜು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸೌಮ್ಯಾ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರವಿ, ಮಂಜುನಾಥ್, ನಗರ ಘಟಕ ಅಧ್ಯಕ್ಷ ರವಿ, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಸೈಯದ್ ಅಹ್ಮದ್, ಬಿಜೆಪಿ ಮಾಜಿ ಅಧ್ಯಕ್ಷ ಸುಬ್ಬಣ್ಣ, ತಾಲೂಕು ಯುವಮೋರ್ಚಾ ಅಧ್ಯಕ್ಷ ವಿಜಯ್ ಕುಮಾರ್, ಮಾಜಿ ಅಧ್ಯಕ್ಷ ಹ್ಯಾಡಾಳ್‌ಸತೀಶ್, ರೈಲ್ವೆಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಸೌಭಾಗ್ಯಾ, ಸದಸ್ಯರಾದ ಜಗದಾಂಬಾ, ಅನಸೂಯಾ, ಮುಖಂಡರಾದ ಎನ್.ಸತೀಶ್, ಆಂಜಿನಪ್ಪ, ಸ್ಟುಡಿಯೋ ಮಂಜುನಾಥ್, ಪುಟ್ಟಸ್ವಾಮಿ, ಗೋವಿಂದರಾಜು, ಅರಿಶಿಣಕುಂಟೆ ರವಿ, ವಕೀಲರಾದ ಶಂಕರೇಗೌಡ, ವಸಂತ್, ಬಜರಂಗದಳ ಕಾರ್ಯಕರ್ತ ಶಶಿಕಿರಣ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts