More

    ಬಿಎಸ್‌ವೈ ಸಾರಥ್ಯದಲ್ಲೇ ಬಿಜೆಪಿ ಮುಂದುವರಿಯಲಿ

    ಕಿತ್ತೂರು (ಬೆಳಗಾವಿ): ಕರೊನಾ ವೈರಸ್ ಸೇರಿದಂತೆ ರಾಜ್ಯದಲ್ಲಿ ಎದುರಾದ ವಿವಿಧ ಅಸ್ಥಿರತೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅನೇಕ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡು ಎಲ್ಲ ವರ್ಗದವರಿಗೆ ನೆರವಾಗಿದ್ದಾರೆ. ಮುಂದಿನ ಎರಡು ವರ್ಷ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಪಟ್ಟಣದ ಕಲ್ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಾರಿ ತಪ್ಪಿದಾಗ ತಿದ್ದಿ-ಬುದ್ಧಿ ಹೇಳುವುದು ಸ್ವಾಮೀಜಿಗಳಾದವರ ಕರ್ತವ್ಯ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದರು.

    ಯಡಿಯೂರಪ್ಪ ಅವರು ಕಿತ್ತೂರು ಪ್ರಾಧಿಕಾರ ನಿರ್ಮಾಣ ಮಾಡಿ ಸಾಕಷ್ಟು ಅನುದಾನ ನೀಡುವ ಮೂಲಕ ನಾಡಿನ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ದಕ್ಷ ಮುಖ್ಯಮಂತ್ರಿಯಾಗಿರುವ ಅವರ ಕುರ್ಚಿ ಕಸಿದುಕೊಳ್ಳಲು ತೆರೆಮರೆಯಲ್ಲಿ ನಡೆಯುತ್ತಿರುವ ಪ್ರಸಕ್ತ ಹುನ್ನಾರವನ್ನು ನಾವು ಖಂಡಿಸುತ್ತೇವೆ.

    ಲಿಂಗಾಯತ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದರೆ ತಪ್ಪೇನು? ಅಧಿಕಾರಕ್ಕೆ ಬರುವಾಗ ಕಾಲು ಹಿಡಿಯುವ ವಿರೋಧಿಗಳು ನಂತರ ಬಾಲ ಬಿಚ್ಚುವುದೇಕೆ ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು. ಹೊಸೂರು ಸಸಸಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ದೇಗುಲಹಳ್ಳಿಯ ವೀರೇಶ್ವರ ಸ್ವಾಮೀಜಿ, ಬುಡರಕಟ್ಟಿಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬಿಜೆಪಿ ಹೈಕಮಾಂಡ್ ನಡೆಗೆ ಬೇಸರ ವ್ಯಕ್ತಪಡಿಸಿದರು.

    ಯುಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಆಗಿ ಮುಂದುವರಿಸಲು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತೇವೆ ಎಂದು ತಿಳಿಸಿದರು. ದೇಮಟ್ಟಿಯ ಗುರುಸಿದ್ದಯ್ಯ ಸ್ವಾಮೀಜಿ, ವಿಜಯ ಮಹಾಂತೇಶ ದೇವರು, ಗಂಗಣ್ಣ ಕರೀಕಟ್ಟಿ, ಬಿ.ಡಿ. ಪಾಟೀಲ ಇತರರಿದ್ದರು.

    ರಾಜಕೀಯದಲ್ಲಿ ಭಾಗವಹಿಸಬೇಡಿ ಎನ್ನಲು ನೀವ್ಯಾರು?

    ಆರ್‌ಎಸ್‌ಎಸ್ ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಆಡಳಿತ ಸೂತ್ರವನ್ನು ತಮ್ಮ ಕೈಯಲ್ಲಿ ಹಿಡಿಯುವ ಸಲುವಾಗಿ ಲಿಂಗಾಯತ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಲಿಪಶು ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಮಠಕ್ಕೆ ಬಂದು ಲಿಂಗಾಯತ ಮತಗಳನ್ನು ಬಿಜೆಪಿಗೆ ಕೊಡಿಸಿರಿ ಎಂದು ಕಾಲಿಗೆ ಬೀಳುವ ಇವರು ಚುನಾವಣೆ ನಂತರ ಸ್ವಾಮೀಜಿಗಳು ರಾಜಕೀಯದಲ್ಲಿ ಭಾ ಗವಹಿಸಬೇಡಿ ಎನ್ನಲು ನೀವ್ಯಾರು? ಅಧಿಕಾರದ ಗದ್ದುಗೆ ಅಲುಗಾಡಿದಾಗ ಮತ್ತೆ ಇವರು ಮೊರೆ ಹೋಗುವುದು ಸುತ್ತೂರಿನ ಮಠಕ್ಕೆ. ಬಹುಸಂಖ್ಯಾತ ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡಿದರೆ, ಮುಂಬರುವ ಚುನಾವಣೆಗಳಲ್ಲಿ ಬುದ್ಧಿ ಕಲಿಸಬೇಕಾಗುತ್ತದೆ.
    | ಪಂಚಾಕ್ಷರಿ ಸ್ವಾಮೀಜಿ ನಿಚ್ಚಣಕಿ ಮಡಿವಾಳೇಶ್ವರ ಮಠ, ಕಿತ್ತೂರು

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts