More

    ಬಿಎಸ್ಪಿಯಿಂದ ಏ.2 ರಂದು ನಾಮಪತ್ರ ಸಲ್ಲಿಕೆ:ಜಿಲ್ಲಾಧ್ಯಕ್ಷ ಹರೀಶ್ ಅತ್ನಿ

    ಹಾಸನ: ಲೋಕಾಸಭೆ ಚುನಾವಣೆಗೆ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಯಾಗಿರುವ ಗಂಗಾಧರ್ ಬಹುಜನ್ ಅವರು ಏ.2 ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಹರೀಶ್ ಅತ್ನಿ ತಿಳಿಸಿದರು.
    ಬಿ.ಎಸ್.ಪಿ. ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಗಂಗಾಧರ್ ಬಹುಜನ್ ಅವರನ್ನು ಈ ಬಾರಿಯ ಲೋಕಸಭೆಯ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಪ್ರಸ್ತೂತ ಚುನಾವಣೆಗಳು ಉದ್ಯಮವಾಗಿದೆ . ಈ ಚುನಾವಣೆಯಲ್ಲಿ ಜೆಡಿಎಸ್‌ನವರು ಸೋತರೆ ಮಾಜಿ ಪ್ರಧಾನಿಗಳಿಗೆ ಅವಮಾನ ಆಗುತ್ತದೆ ಎಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇನ್ನೊಬ್ಬರೂ ಕಳೆದ ಚುನಾವಣೆಯಲ್ಲಿ ಹಣ ಕಳೆದುಕೊಂಡಿದ್ದೇನೆ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಆದರೆ ನಮ್ಮ ಪಕ್ಷದ ಅಭ್ಯರ್ಥಿ ಗಂಗಾಧರ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಯಾವುದೇ ಹಣಕ್ಕೆ, ಆಮಿಷಕ್ಕೆ ಬಲಿಯಾಗದೇ ಪ್ರಾಮಾಣೀಕ ವ್ಯಕ್ತಿಯಾಗಿ ಕೆಸ ಮಾಡುತ್ತ ಬರುತ್ತಿದ್ದಾರೆ ಅವರನ್ನು ಜಿಲ್ಲೆಯ ಜನರು ಬೆಂಬಲಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
    ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಹಾಗೂ ಅಭ್ಯರ್ಥಿ ಗಂಗಾಧರ್ ಬಹುಜನ್ ಮಾತನಾಡಿ, ಇದುವರೆಗೂ ಬಂದ ಸರಕಾರಗಳಲ್ಲಿ ಯಾವುದೇ ಕೈಗಾರಿಕೆಗಳು ಸ್ಥಾಪನೆ ಮಾಡಲಿಲ್ಲ, ಕೃಷಿ ಕಾರ್ಮಿಕರ ಬದುಕು ಅಸನ ಆಗಲಿಲ್ಲ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಳೆ ಸಿಗಲಿಲ್ಲ. ಬೆಲೆ ನಿಗಧಿ ಮಾಡುವಲ್ಲಿ ಅವರು ವಿಫಲವಾಗಿದ್ದಾರೆ. ಕಾಡಾನೆ ಸಮಸ್ಯೆಗೆ ಶಶ್ವತ ಪರಿಹಾರ ಕಂಡುಹಿಡಿಯಲಿಲ್ಲ. ಇಲ್ಲಿ ಅಣೆಕಟ್ಟು ಇದ್ದರೂ ಇಲ್ಲಿಗೆ ನೀರು ಸಹ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಆದರೇ ಮತ್ತೊಂದು ಕುಟುಂಬ ಇಲ್ಲಿ ಯಾರು ಜೀವಂತವಾಗಿಲ್ಲವೇ ಎಂಬುವುದರ ಬಗ್ಗೆ ಯೋಚನೆ ಮಾಡಲಾಗುತ್ತಿದೆ. ಬಹುಜನ ಸಮಾಜ ಪಾರ್ಟಿ ಇವರೆಡರ ನಡುವೆ ಅಂತರ ಕಾಯಿದುಕೊಂಡು ಮೂರನೇ ಶಕ್ತಿಯಾಗಿ ಹೊರಬರಬೇಕು ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮ ಪಕ್ಷವನ್ನು ಬೆಂಬಲಿಸಬೇಕು. ನಾನು ಕಳೆದ 25 ವರ್ಷಗಳಿಂದಲೂ ಬಡವರ ಪರವಾಗಿ, ಸಮಸ್ಯೆ ಬಂದಾಗ ನಿಲ್ಲುವ ವ್ಯಕ್ತಿಯಾಗಿ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈಗಿರುವ ಸರಕಾರಗಳು ನೀಡಿರುವ ಎಲ್ಲಾ ಭರವಸೆಗಳು ಸುಳ್ಳಾಗಿದೆ ಎಂದು ದೂರಿದರು.
    ಇಂತಹ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಗೆ ಮತ ಹಾಕುವುದರ ಮೂಲಕ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಇನ್ನು ಲೋಕಾಸಭೆ ಅಭ್ಯರ್ಥಿಯಾಗಿ ನಾನು ಏಪ್ರಿಲ್ 2 ರಂದು ನಾಮಪತ್ರವನ್ನು ಸಲ್ಲಿಸುವುದಾಗಿ ಹೇಳಿದರು.
    ಪತ್ರಿಕಾಗೋಷ್ಠಿಯಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯರ್ಶಿ ಶಿವಮ್ಮ, ಜಿಲ್ಲಾ ಸಂಯೋಜಕರಾದ ಲಕ್ಷ್ಮಣ್ ಕೀರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಲೋಹಿತ್, ಕಛೇರಿ ಕಾರ್ಯದರ್ಶಿ ಸುರೇಂದ್ರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts