More

    ಬಿಆರ್​ಸಿಯಲ್ಲೊಂದು ಸುಂದರ ಉದ್ಯಾನ

    ಬೀದರ್: ನೌಬಾದ್​ನ ಕ್ಷೇತ್ರ ಸಂಪನ್ಮೂಲ ಕೇಂದ್ರ(ಬಿಆರ್​ಸಿ)ದ ಆವರಣ ಉದ್ಯಾನವಾಗಿ ಬದಲಾಗಿದೆ.

    ಕೇಂದ್ರದ ಸಮನ್ವಯಾಧಿಕಾರಿ ವಿಜಯಕುಮಾರ ವಿ.ಬೆಳಮಗಿ ಆಸಕ್ತಿ ಲವಾಗಿ ಮೂರೂವರೆ ತಿಂಗಳಲ್ಲೇ ಸುಂದರ ಉದ್ಯಾನ ನಿಮರ್ಾಣಗೊಂಡಿದೆ. ಹೂವಿನ ಗಿಡ, ಹುಲ್ಲು ಹಾಸು, ಪಾದಚಾರಿ ಮಾರ್ಗ, ಧ್ವಜ ಕಟ್ಟೆ ಮೊದಲಾದವು ಕೇಂದ್ರಕ್ಕೆ ಭೇಟಿ ನೀಡುವವರ ಕಣ್ಮನ ಸೆಳೆಯುತ್ತಿವೆ.

    ವಿ.ಎಂ. ರಾಂಪುರೆ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಮಹೇಶ ಎಸ್.ರಾಂಪುರೆ ಮುಂದಾಳತ್ವದಲ್ಲಿ ದಿನೇಶ ಸೋನಿ, ದರ್ಶನ್ ಶರ್ಮಾ, ಅಪ್ರೋಜ್, ವಿಶ್ವನಾಥ ಶೀಲವಂತ ಇತರರು ಸೇರಿ ವಿನೂತನ ವಿನ್ಯಾಸದಲ್ಲಿ ಉದ್ಯಾನ ನಿರ್ಮಿಸಿದ್ದಾರೆ. ಉದ್ಯಾನದಲ್ಲಿ 315 ಸ್ಕ್ವಾಯರ್ ಫೀಟ್ ಹುಲ್ಲು ಹಾಸಲಾಗಿದ್ದು, ಪಾಕರ್ಿಂಗ್ ಟೈಲ್ಸ್ ಅಳವಡಿಸಲಾಗಿದೆ. ಆಕರ್ಷಕ ಧ್ವಜ ಕಟ್ಟೆ ನಿರ್ಮಿಸಿದ್ದು, ಗ್ರಾಸ್, ಗೋಲ್ಡಿ ಸೇರಿ ವಿವಿಧ ಹೂವಿನ ಗಿಡಗಳನ್ನು ನೆಡಲಾಗಿದೆ.

    ಕೇಂದ್ರವನ್ನು ಆಕರ್ಷಕ ಮತ್ತು ಹಸಿರುಮಯ ಮಾಡಬೇಕು ಎಂಬುದು ಬೆಳಮಗಿ ಅಪೇಕ್ಷೆಯಾಗಿತ್ತು. ಅದರಂತೆ ಅವರು ಉದ್ಯಾನಕ್ಕೆ ಬಹಳಷ್ಟು ಸಮಯ ನೀಡಿ ಸಸಿಗಳಿಗೆ ಸ್ವತಃ ನೀರುಣಿಸಿದ್ದಾರೆ. ಇದಕ್ಕಾಗಿ ವೈಯಕ್ತಿಕ ಹಣ ಖರ್ಚು ಮಾಡಿದ್ದಾರೆ. ಅನೇಕ ಸಂಘ-ಸಂಸ್ಥೆಗಳು, ಬಿಆರ್ಪಿ, ಸಿಆರ್​ಪಿ, ಬಿಐಇಆರ್ಟಿ, ಬಿಆರ್ಸಿ ಸಿಬ್ಬಂದಿ, ಶಿಕ್ಷಕ-ಶಿಕ್ಷಕಿಯರು, ಶಿಕ್ಷಣ ಪ್ರೇಮಿಗಳು ಹಾಗೂ ಸಾರ್ವಜನಿಕರ ನೆರವಿನೊಂದಿಗೆ 1.50 ಲಕ್ಷ ರೂ. ವೆಚ್ಚದಲ್ಲಿ ನಿಮರ್ಿಸಲಾಗಿದೆ.

    ಉದ್ಯಾನವು ಕೇಂದ್ರದ ಸಿಬ್ಬಂದಿ ಜತೆಗೆ ಇಲ್ಲಿ ಬಂದು ಹೋಗುವವರಿಗೂ ನೆಮ್ಮದಿ ಭಾವ ಮೂಡಿಸುತ್ತಿದೆ. ಸಂಜೆ ಆಹ್ಲಾದಕರ ವಾತಾವರಣದಲ್ಲಿ ಉದ್ಯಾನದಲ್ಲಿ ವಾಯು ವಿಹಾರ ಮಾಡಬಹುದು. ಕಾಂಕ್ರೀಟ್ ಚೂರು ಹಾಕಿರುವ ಪಾದಚಾರಿ ಮಾರ್ಗದಲ್ಲಿ ಬರಿಗಾಲಲ್ಲಿ ಓಡಾಡಿದರೆ ಸುಗಮ ರಕ್ತ ಸಂಚಾರಕ್ಕೆ ನೆರವಾಗಲಿದೆ ಎನ್ನುತ್ತಾರೆ ಮಹೇಶ ರಾಂಪುರೆ.

    ಉದ್ಘಾಟನೆ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಣಪತಿ ಬಾರಾಟಕೆ ಉದ್ಯಾನವನ್ನು ಶನಿವಾರ ಉದ್ಘಾಟಿಸಿದರು. ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ, ಡಯಟ್ ಪ್ರಾಚಾರ್ಯ ದಿಗಂಬರ ಬಿ.ಕೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts