More

    ಬಾಳೆ ತೋಟ ನೆಲಸಮ

    ಶಿರಸಿ: ‘ಬಾಳೆ ತೋಟಕ್ಕೆ ಲಕ್ಷಾಂತರ ರೂಪಾಯಿ ಹಾಕಿದ್ವಿ, ಈಗ್ ನೋಡಿದ್ರೆ ಕಾಯಿಗೆ ಕನಿಷ್ಠ ದರವೂ ಇಲ್ಲ. ಗೊನೆ ಕಟಾವು ಮಾಡಿದ್ರೆ ಕೂಲಿ ದರ ಕೂಡ ಹುಟ್ಟೊದಿಲ್ಲ. ಹಾಗಾಗಿ ಇಡೀ ತೋಟ ನೆಲಸಮ ಮಾಡೋದೊಂದೇ ದಾರಿ’ ಎಂಬುದು ಬನವಾಸಿ ಹೋಬಳಿಯ ಪ್ರತಿಯೊಬ್ಬ ಬಾಳೆಬೆಳೆಗಾರನ ಮಾತಾಗಿದೆ.

    ಹೌದು! ಬಾಳೆ ಕಾಯಿಗೆ ಬೇಡಿಕೆ ಕುಸಿತದ ಜತೆ ಪಾತಾಳ ಕಂಡ ದರದ ಪರಿಣಾಮ ಹಾಕಿದ ಬಂಡವಾಳ ಹುಟ್ಟುವ ವಿಶ್ವಾಸವಿಲ್ಲದ ಬಾಳೆ ಬೆಳೆಗಾರರು ಕಟಾವಿಗೆ ಬಂದಿರುವ ಜಿ-9 ಬಾಳೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡುತ್ತಿದ್ದಾರೆ. ತಾಲೂಕಿನ ಪೂರ್ವಭಾಗ ಬನವಾಸಿ ಹೊಬಳಿಯ ವಿವಿಧ ಕಡೆ ನೂರಾರು ಎಕರೆ ಪ್ರದೇಶದಲ್ಲಿ ಜಿ-9 ಬಾಳೆ ಬೆಳೆದಿದ್ದು, ಪ್ರಸಕ್ತ ಸಾಲಿನಲ್ಲಿ ದರ ನೆಲಕಚ್ಚಿದ್ದರಿಂದ ಗೊನೆ ಸಹಿತ ಬಾಳೆಯ ಮರವನ್ನೇ ಕಿತ್ತೊಗೆಯುತ್ತಿದ್ದಾರೆ. ಪ್ರತಿ ವರ್ಷ ಈ ವೇಳೆಗೆ 10ರಿಂದ 12 ರೂ. ಇರುತ್ತಿದ್ದ ದರ ಈ ವರ್ಷ ಕೆಜಿಯೊಂದಕ್ಕೆ 1ರಿಂದ 2 ರೂ.ಗೆ ಕುಸಿದಿದೆ. ಇದಕ್ಕೆ ಗೋವಾ ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗಿರುವುದು ಕಾರಣ.

    ಲಕ್ಷಾಂತರ ರೂ. ಖರ್ಚು: ತಾಲೂಕಿನ ಅಂಡಗಿ, ಹೆಬ್ಬತ್ತಿ, ರಾಮಾಪುರ, ಕಲಕರಡಿ ಹಾಗೂ ಕಿರವತ್ತಿ ಭಾಗದಲ್ಲಿ ಸರಾಸರಿ 500 ಹೆಕ್ಟೇರ್ ಪ್ರದೇಶದಲ್ಲಿ ಅಂಗಾಂಶ ಮಾದರಿಯ ಜಿ-9 ಸಸಿ ಹೇರಳವಾಗಿ ಬೆಳೆಯಲಾಗಿದೆ. ಒಂದು ಎಕರೆ ಬಾಳೆ ಬೆಳೆಯಲು ಗೊಬ್ಬರ, ಔಷಧ, ಕೂಲಿಯಾಳು ಸೇರಿ ಅಂದಾಜು 1.5 ಲಕ್ಷ ರೂ.ದಿಂದ 2 ಲಕ್ಷ ರೂ. ಖರ್ಚಾಗುತ್ತಿದೆ. ಕೆಜಿಗೆ ಕನಿಷ್ಠ 15 ರೂ. ಇದ್ದರೆ ಹಾಕಿದ ಬಂಡವಾಳಕ್ಕೆ ಮೋಸವಾಗುವುದಿಲ್ಲ. ಆದರೆ, ಈಗಿರುವ ದರ ರೈತರ ನಿದ್ದೆಗೆಡಿಸಿದೆ. ಖರೀದಿದಾರರು ಸಹ ಮುಂದೆ ಬರುತ್ತಿಲ್ಲ.

    ಬನವಾಸಿ ಹೋಬಳಿಯ ಬಹುತೇಕ ಕಡೆ ಜಿ-9 ಬಾಳೆಯನ್ನು ಹೇರಳವಾಗಿ ಬೆಳೆಯಲಾಗಿದೆ. ಇಷ್ಟು ವರ್ಷ ರೈತರ ಕೈಹಿಡಿದಿದ್ದ ಬಾಳೆಗೆ ಈ ಬಾರಿ ದರ ಕುಸಿದಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಯೂ ಇಲ್ಲ, ಯೋಗ್ಯ ದರವೂ ಇಲ್ಲ. ಸಾಲ ಮಾಡಿ ತೋಟ ಮಾಡಿದ್ದು, ಇದೀಗ ನಷ್ಟವನ್ನು ಭರಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ.

    | ತಿಮ್ಮಾ ನಾಯ್ಕ ಬಾಳೆ ಬೆಳೆಗಾರ

    ಕಳೆದೊಂದು ವಾರದಿಂದ ಹೆಬ್ಬತ್ತಿ, ಕಿರವತ್ತಿ, ರಾಮಾಪುರ ಭಾಗದಲ್ಲಿ ಬಾಳೆಕಾಯಿ ಖರೀದಿಸುವವರು ಇಲ್ಲದೆ ರೋಸಿ ಹೋಗಿ ಜೆಸಿಬಿ ಮೂಲಕ ಕಿತ್ತೊಗೆಯುತ್ತಿದ್ದೇವೆ. ಮಾರುಕಟ್ಟೆಗೆ ಸಂಬಂಧಿಸಿ ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳು ಸಹ ಕಣ್ತೆರೆದು ನೋಡುತ್ತಿಲ್ಲ. ಸರ್ಕಾರ ಸೂಕ್ತ ದರ ನಿಗದಿಪಡಿಸಬೇಕು. ಇಲ್ಲವಾದರೆ ರೈತರಿಗೆ ಪರಿಹಾರ ನೀಡಬೇಕು.

    | ಸುದರ್ಶನ ನಾಯ್ಕ- ಬಾಳೆ ಬೆಳೆಗಾರ

    ನಷ್ಟದ ಭೀತಿಯಲ್ಲಿರುವ ರೈತರು ಹಾಪ್​ಕಾಮ್್ಸ ಸಂರ್ಪಸಿದರೆ ಅನುಕೂಲ ಆಗಲಿದೆ. ಜತೆ ಹಾಪ್​ಕಾಮ್್ಸ ಅಧಿಕಾರಿಗಳು ಖರೀದಿಗೆ ಮುಂದೆ ಬಂದರೆ ರೈತರು ಬಾಳೆಕಾಯಿಯನ್ನು ಮಾರುವುದು ಉತ್ತಮ. ಅಗತ್ಯವಿರುವ ರೈತರು ಈ ವಿಷಯವನ್ನು ತೋಟಗಾರಿಕೆ ಇಲಾಖೆ ಗಮನಕ್ಕೆ ತಂದಲ್ಲಿ ಹಾಪ್​ಕಾಮ್ಸ್​ಗೆ ತಿಳಿಸಿ ಖರೀದಿ ವ್ಯವಸ್ಥೆ ಮಾಡಿಸಲಾಗುವುದು.

    | ಸತೀಶ ಹೆಗಡೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts