More

    ಬಾಲ್ಯವಿವಾಹ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತದೆ : ನ್ಯಾಯಾಧೀಶ ಎನ್.ಆರ್.ಲೋಕಪ್ಪ ಕಳವಳ


    ಚಾಮರಾಜನಗರ : ಬಾಲ್ಯವಿವಾಹ ಹೆಣ್ಣು ಮಕ್ಕಳ ಬಾಲ್ಯ ಕಸಿದುಕೊಳ್ಳುವುದರ ಜತೆಗೆ ಅವರ ಯೋಗಕ್ಷೇಮಕ್ಕೂ ತೊಂದರೆಯಾಗುತ್ತದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಆರ್.ಲೋಕಪ್ಪ ಕಳವಳ ವ್ಯಕ್ತಪಡಿಸಿದರು.

    ಕೊಳ್ಳೇಗಾಲ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ವತಿಯಿಂದ ಪಟ್ಟಣದ ಸಂತ ಫ್ರಾನ್ಸಿಸ್ ಅಸ್ಸಿಸ್ಸಿ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಬಾಲ್ಯವಿವಾಹ ನಿಷೇಧ ಪದ್ಧತಿ, ಪೋಕ್ಸೋ ಹಾಗೂ ಮಾದಕ ವ್ಯಸನ ನಿರ್ಮೂಲನೆ ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.


    18 ವರ್ಷಕ್ಕಿಂತ ಮೊದಲು ಮದುವೆಯಾಗುವವರು ಕೌಟುಂಬಿಕ ಹಿಂಸೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಬಾಲ್ಯ ವಿವಾಹ ತೊಡೆದು ಹಾಕಲು ಪ್ರಸ್ತುತ ಅನೇಕ ಕಾನೂನುಗಳಿದ್ದು, ಪುರುಷರು ಮತ್ತು ಮಹಿಳೆಯರ ವಿವಾಹದ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದ್ದು, ಕಾನೂನು ಉಲಂಘಿಸಿಸುವವರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದರು.


    ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್.ನಂದಿನಿ, ಅಪರ ಸಿವಿಲ್ ನ್ಯಾಯಾಧೀಶ ರಘು, ವಕೀಲ ಸಂಘದ ಅಧ್ಯಕ್ಷ ಡಿ.ಎಸ್. ಬಸವರಾಜು, ಉಪಾಧ್ಯಕ್ಷೆ ಸೀಮಾ ತಾಸಿನ್ ಸುಲ್ತಾನಾ, ಕಾರ್ಯದರ್ಶಿ ಮೋಹನ್ ಕುಮಾರ್, ವಕೀಲ ಎಂ.ಮಲ್ಲಿಕಾರ್ಜುನ, ಸಿ.ಆರ್. ನಿರ್ಮಲಾ, ಸಂತ ಫ್ರಾನ್ಸಿಸ್ ಅಸಿಸ್ಸಿ ಪದವಿಪೂರ್ವ ಕಾಲೇಜಿನ ಫಾದರ್ ಜಾನ್ ಪೀಟರ್ ರೇಗು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts