More

    ಬಾನು ಬೆಳಗಿದ ಆಕಾಶ ಬುಟ್ಟಿ

    ಹುಬ್ಬಳ್ಳಿ: ಕಗ್ಗತ್ತಲೆಯಲ್ಲಿಯೂ ಗಮನ ಸೆಳೆದ ಹಾರಾಡುತ್ತಿದ್ದ ದೀಪಗಳು… ಬಾನೆತ್ತರಕ್ಕೆ ಆಕಾಶ ಬುಟ್ಟಿಗಳು ತಲುಪುತ್ತಿದ್ದಂತೆಯೇ ಕೇಳಿಬಂದ ಚಪ್ಪಾಳೆ, ಸಿಳ್ಳೆಯ ಕೂಗು… ದೀಪಾವಳಿ ಅಂಗವಾಗಿ ಎಸ್​ಎಸ್​ಕೆ ಸಮಾಜದ ಯುವಕರು ಭಾನುವಾರ ರಾತ್ರಿ ಹುಬ್ಬಳ್ಳಿ ಕಮರಿಪೇಟೆಯ ಜೈ ಭಾರತ ಸರ್ಕಲ್​ನಲ್ಲಿ ಆಯೋಜಿಸಿದ್ದ ‘ಹುಬ್ಬಳ್ಳಿ ಆಕಾಶ ಬುಟ್ಟಿ’ ಕಾರ್ಯಕ್ರಮದಲ್ಲಿ ಕಂಡ ದೃಶ್ಯಗಳಿವು.

    ಬಾನಂಗಳದಲ್ಲಿ ತೇಲಾಡುತ್ತಿದ್ದ ಹಲವಾರು ಆಕಾಶಬುಟ್ಟಿಗಳು ನಗರದ ಉದ್ದಗಲಕ್ಕೂ ಹಾರಾಡುತ್ತ ಪಾದಚಾರಿಗಳು, ವಾಹನ ಸವಾರರು, ಸಾರ್ವಜನಿಕರನ್ನು ಮಂತ್ರಮುಗ್ಧರನ್ನಾಗಿಸಿದವು.

    ಆಕಾಶ ಬುಟ್ಟಿಗಳ ಹಾರಾಟಕ್ಕೂ ಮೊದಲು ಸಾಜಿದ್ ಅವರು ಸ್ಯಾಕ್ಸೋಫೋನ್​ನಲ್ಲಿ ನುಡಿಸಿದ ಬಾಲಿವುಡ್​ನ ಸುಮಧುರ ಗೀತೆಗಳು ಪ್ರೇಕ್ಷಕರ ಸಂತಸವನ್ನು ಇಮ್ಮಡಿಗೊಳಿಸಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಇಂತಹ ಹಬ್ಬಗಳು ಸಮಾಜವನ್ನು ಒಂದುಗೂಡಿಸುತ್ತವೆ. ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಎಸ್​ಎಸ್​ಕೆ ಸಮಾಜ ಮೊದಲಿನಿಂದಲೂ ಮುಂಚೂಣಿಯಲ್ಲಿದೆ ಎಂದರು.

    ಹುಬ್ಬಳ್ಳಿಯಲ್ಲಿ ಸಹಸ್ರಾರ್ಜುನ ಮಹಾರಾಜರ ದೇವಸ್ಥಾನ ನಿರ್ವಣಕ್ಕೆ ಅಗತ್ಯ ನಿವೇಶನ ಒದಗಿಸಲು ಸಿದ್ಧ ಎಂದು ಭರವಸೆ ನೀಡಿದ ಸಚಿವ ಶೆಟ್ಟರ್, ಸಮಾಜದ ಅಭಿವೃದ್ಧಿಗಾಗಿ ನಿಗಮ ರಚಿಸುವುದಕ್ಕಾಗಿ ಮುಖ್ಯಮಂತ್ರಿಯವರೊಂದಿಗೆ ರ್ಚಚಿಸುವುದಾಗಿ ತಿಳಿಸಿದರು.

    ಹಲಗಿ ಹಬ್ಬ, ಗಾಳಿಪಟ ಉತ್ಸವದ ನಂತರ ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಪ್ರಾರಂಭಗೊಂಡ ಆಕಾಶ ಬುಟ್ಟಿ ಉತ್ಸವ ಇನ್ನೂ ದೊಡ್ಡಮಟ್ಟದಲ್ಲಿ ಆಚರಿಸುವಂತಾಗಲಿ ಎಂದು ಹಾರೈಸಿದರು.

    ಇದೇ ಸಂದರ್ಭದಲ್ಲಿ ಕಲಾವಿದ ಪುನೀತ್ ಪವಾರ ಅವರು ಸ್ಥಳದಲ್ಲಿಯೇ ಸಚಿವ ಜಗದೀಶ ಶೆಟ್ಟರ್ ಅವರ ಭಾವಚಿತ್ರ ಬಿಡಿಸಿದರು.

    ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಎಸ್​ಎಸ್​ಕೆ ಬ್ಯಾಂಕ್ ಚೇರ್ಮನ್ ವಿಠ್ಠಲ ಲದ್ವಾ, ಮಾಜಿ ಶಾಸಕ ಅಶೋಕ ಕಾಟವೆ, ಮಾಜಿ ಮಹಾಪೌರ ಡಿ.ಕೆ. ಚವ್ಹಾಣ, ಮಲ್ಲಿಕಾರ್ಜುನ ಸಾವಕಾರ, ರಾಜು ಜರತಾರಘರ, ಮಂಜು ದಲಬಂಜನ, ವಿನಾಯಕ ಲದ್ವಾ, ಸೀಮಾ ಲದ್ವಾ, ಪುಷ್ಪಾ ಪವಾರ್, ರೇಣುಕಾ ಇರಕಲ್, ಶೋಭಾ ನಾಕೋಡ, ರೂಪಾ ಬುರಬುರೆ, ರಂಗಾ ಬದ್ದಿ, ಚಂದ್ರಶೇಖರ ಗೋಕಾಕ, ಪ್ರಭು ನವಲಗುಂದಮಠ, ಧರ್ಮದರ್ಶಿ ನೀಲಕಂಠ ಜಡಿ, ವೆಂಕಟೇಶ ಕಾಟವೆ, ಶಂಕರ ಮೆಹರವಾಡೆ, ಶಿವು ಮೆಣಸಿನಕಾಯಿ, ವಿಜಯ ಕಲಬುರಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts