More

    ಬಾಗಿಲು ತೆರೆದ ಖಾಸಗಿ ಕ್ಲಿನಿಕ್

    ರೋಣ: ಕರೊನಾ ಸೋಂಕು ಹರಡುವ ಭೀತಿಯಿಂದಾಗಿ ಪಟ್ಟಣದಲ್ಲಿ ಬಂದ್ ಮಾಡಲಾಗಿದ್ದ ಖಾಸಗಿ ಕ್ಲಿನಿಕ್​ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಸಾರ್ವಜನಿಕರು, ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ.

    ಕರೊನಾ ಸೋಂಕಿನ ಭೀತಿ ಹೆಚ್ಚುತ್ತಿದ್ದಂತೆ ತಾಲೂಕಿನಾದ್ಯಂತ ಖಾಸಗಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್​ಗಳು ಬಾಗಿಲು ಮುಚ್ಚಿದ್ದವು. ಇದರಿಂದಾಗಿ ಗ್ರಾಮೀಣ ಹಾಗೂ ನಗರ ಜನತೆ ಚಿಕಿತ್ಸೆಗಾಗಿ ಪರದಾಡುವಂತಾಗಿತ್ತು. ಈ ಕುರಿತು ವಿಜಯವಾಣಿ ಮಾರ್ಚ್ 31ರಂದು ‘ಸೋಂಕು ಭೀತಿಗೆ ಕ್ಲಿನಿಕ್ ಬಂದ್’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಗದಗ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಶ್ಯಾಳ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಖಾಸಗಿ ಕ್ಲಿನಿಕ್​ಗಳಿಗೆ ಲಾಕ್​ಡೌನ್ ಅನ್ವಯಿಸುವುದಿಲ್ಲ. ಜನತೆ ತೊಂದರೆಯಾಗಬಾರದು ಹೀಗಾಗಿ ತಕ್ಷಣವೇ ಖಾಸಗಿ ಕ್ಲಿನಿಕ್ ಪ್ರಾರಂಭಗೊಳಿಸುವಂತೆ ವೈದ್ಯಾಧಿಕಾರಿಗಳ ಸಂಘಕ್ಕೆ (ಐಎಂಎ) ರೋಣ ತಾಲೂಕು ಘಟಕದ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದರು. ಇದಕ್ಕೆ ಸ್ಪಂದಿಸಿದ ರೋಣ ತಾಲೂಕು ಐಎಂಎ ಘಟಕ ಸಾರ್ವಜನಿಕ ಸೇವೆಗೆ ಮುಂದಾಗುವಂತೆ ನೀಡಿದ ಸೂಚನೆಯ ಮೇರೆಗೆ ವೈದ್ಯರು ಸೇವೆ ಆರಂಭಿಸಿದ್ದಾರೆ.

    ಗದಗ ಉಪ ವಿಭಾಗಾಧಿಕಾರಿ ಹುಣಸ್ಯಾಳ ಅವರು, ನಮಗೆ ನೀಡಿದ ಸೂಚನೆ ಮೇರೆಗೆ ಐಎಂಎ ರೋಣ ತಾಲೂಕು ಘಟಕದಿಂದ ತಾಲೂಕಿನ ಎಲ್ಲಾ ವೈದ್ಯರು ತಮ್ಮ ಕ್ಲಿನಿಕ್​ಗಳನ್ನು ತೆಗೆದು ಸೇವೆ ಸಲ್ಲಿಸುವಂತೆ ಸೂಚಿಸಿದ್ದೇವೆ. ಅದರಂತೆ 70 ವರ್ಷಕ್ಕಿಂತ ಮೇಲ್ಪಟ್ಟ ವೈದ್ಯರನ್ನು ಹೊರತುಪಡಿಸಿ ಉಳಿದ ವೈದ್ಯರು ಕ್ಲಿನಿಕ್​ಗಳನ್ನು ತೆಗೆದು ಸೇವೆಗೆ ಮುಂದಾಗಿದ್ದಾರೆ.

    | ಡಾ ಆರ್.ಜಿ. ಮಲ್ಲಾಪೂರ ಅಧ್ಯಕ್ಷ, ಐಎಂಎ ತಾಲೂಕು ಘಟಕ, ರೋಣ

    ಕರೊನಾ ಹೆಮ್ಮಾರಿ ಸೋಂಕು ಹರಡುವಿಕೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ಸೇವೆ ಸಲ್ಲಿಸುವುದು ಕಷ್ಟಸಾಧ್ಯ. ಅಂಥದರಲ್ಲಿಯೂ ನಾವು ಸೇವೆ ಸಲ್ಲಿಸುತ್ತೇವೆ. ಆದರೆ, ಸರ್ಕಾರ ನಮಗೆ ಸರ್ಕಾರಿ ವೈದ್ಯರಿಗೆ ಒದಗಿಸುವ ಕೆಲ ಅಗತ್ಯ ಸಾಮಗ್ರಿಗಳನ್ನು ಪೂರೈಸಬೇಕು.

    | ಡಾ ಎಲ್.ಡಿ. ಬಾಕಳೆ ಪ್ರಧಾನ ಕಾರ್ಯದರ್ಶಿ ಐಎಂಎ ತಾಲೂಕು ಘಟಕ ರೋಣ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts