More

    ಬಾಗಲಕೋಟೆ ಜನರ ಆಶಿರ್ವಾದಿಂದ ಗೆಲುವು ಶತಸಿದ್ದ

    ಬಾಗಲಕೋಟೆ: ನನ್ನ ಪ್ರಾಮಾಣಿಕ ಸೇವೆ, ಹಾಗೂ ಮೋದಿಯವರ ಅಭಿವೃದ್ಧಿ ಮತ್ತು ದೇಶದ ಹಿತಕ್ಕಾಗಿ ಬಾಗಲಕೋಟೆ ಜನ ಬಿಜೆಪಿಗೆ ಬೆಂಬಲ ನೀಡುತ್ತಾರೆ, ಅವರ ಆಶಿರ್ವಾದಿಂದ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಶತಸಿದ್ದವಾಗಿದೆ ಎಂದು ನಾನು ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹೇಳಿದರು.

    ಅವರು ಶನಿವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ನಗರದಲ್ಲಿ ಹಮ್ಮಿಕೊಂಡ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಭಾಗವಹಿಸಿ ಮತಯಾಚನೆ ಮಾಡಿ ಮಾತನಾಡಿದರು.


    ಕಳೆದು 20 ದಿನಗಳಿಂದ ಮತಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವೆ ಎಲ್ಲೆಡೆ ಒಂದೆ ಮಾತು ನಾವು ನಿಮ್ಮ ಜೋತೆಗೆ ಇದ್ದವೆ, ನಮಗೆ ದೇಶದ ಹಿತ ಮುಖ್ಯ, ಮೋದಿಯರ ಕಲ್ಪನೆ ಭಾರತದ ಭವಿಷ್ಯ ಮುಖ್ಯ, ನಿಮ್ಮ ಪ್ರಾಮಾಣಿಕತೆ ನಿಮ್ಮನ್ನು ಗೆಲ್ಲಿಸುತ್ತದೆ ಎಂದು ಜನ ಹೇಳತಾ ಇದ್ದಾರೆ, ಕ್ಷೇತ್ರದ್ದೂದ್ದಕ್ಕು ಉತ್ತಮ್ಮ ಜನ ಬೇಂಬಲ ವ್ಯೆಕ್ತವಾಗಿದೆ, ಬಾಗಲಕೋಟೆ ಅಪ್ಪಟ ದೇಶಭಕ್ತರ ಬಿಡಾಗಿದ್ದು, ತಮಗಿಂದ ದೇಶ ಮುಖ್ಯ ಎಂದು ಹೋರಾಡಿ ತ್ಯಾಗಗಳನ್ನು ಮಾಡಿದ ನಾಡು, ನಾನೂ ಕೂಡಾ ಜನಸಾಮಾನ್ಯರಿಗೆ ಪ್ರಾಮಾಣಿಕ ಸೇವೆ ಸಿಗಬೇಕು ಎಂದು ರಾಜಕಾರಣದಲ್ಲಿದ್ದೆನೆ, ಬಾಗಲಕೋಟೆ ಜಿಲ್ಲೆಗೆ ಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆನೆ, ಜಿಲ್ಲೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗತ್ತಾರೆ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಅಚಲ ವಿಶ್ವಾಸ ಜನರಲ್ಲಿದೆ ಎಂದರು.

    ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹಾಗೂ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮನೆ ತೆರಳಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದಿನ ಭಾರತದ ಭವಿಷ್ಯದ ನೀಲನಕ್ಷೆ ಬಿಜೆಪಿ ಸಂಕಲ್ಪದ ಬಗ್ಗೆ ಜನರಿಗೆ ತಿಳಿಸಿ, ದೇಶದ ಸುರಕ್ಷತೆ ಬಿಜೆಪಿಯಿಂದ ಮಾತ್ರ ಸಾದ್ಯ ಎಂದು ಮತಯಾಚನೆ ಮಾಡಿದರು.

    ನಗರದ 1 ಮತ್ತು 3 ನೇ ವಾರ್ಡಿನಲ್ಲಿ ಶ್ರೀ ಸತ್ಯ ನಾರಾಯಣ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ದೀಪಂ ಕಾಲೋನಿ, ಲಕ್ಷ್ಮೀ ನಗರ,ವಿನಾಯಕ ನಗರ,ಶಾಂತಿ ನಗರದಲ್ಲಿ ಮನೆ ಮನೆ ತೆರಳಿ ಮತಯಾಚನೆ ಮಾಡಲಾಯಿತು.

    ನಗರಸಭೆ ಸದಸ್ಯರಾದ ಸರಸ್ವತಿ ಕುರಬರ, ಶೀವಲೀಲಾ ಪಟ್ಟಣಶೇಟ್ಟಿ, ಡಾ.ಎಂ.ಎಸ್.ದಡ್ಡೆನ್ನವರ, ಬಸಲಿಂಗಪ್ಪ ನಾವಲಗಿ, ಅಶೋಕ ಲಿಂಬಾವಳಿ, ಸುಭಾಷ ಕೋಠಾರೆ, ವಿಶ್ವನಾಥ ವಿಜಾಪುರ, ಜಯಪ್ರಕಾಶ ಬನ್ನಿ, ಮುತ್ತಣ್ಣ ಬೇಣ್ಣೂರ, ಮುತ್ತಣ್ಣ ಕುರಬರ, ಮಲ್ಲಿಕಾರ್ಜುನ ಕಾಂಬಳೆ, ರಾಜು ವಾಗ, ಎಂ.ಎ.ತೇಲಸಂಗ, ಮುತ್ತು ಸಜ್ಜನ ಸೇರಿದಂತೆ ನಗರ ಸಭೆ ಸದಸ್ಯರು.ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts