More

    ಬಾಂಗ್ಲಾ ವಿಮೋಚನೆ ಯುದ್ಧದ ವಿಜಯೋತ್ಸವ

    ಮುದ್ದೇಬಿಹಾಳ: 1971ರಲ್ಲಿ ಭಾರತವು ಬಾಂಗ್ಲಾ ವಿಮೋಚನೆಗಾಗಿ ಪಾಕಿಸ್ತಾನದೊಂದಿಗೆ ನಡೆಸಿದ್ದ ಯುದ್ಧ ರಣ ರೋಚಕವಾಗಿತ್ತು. ವಾಯು ದಾಳಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ನಮ್ಮ ಸೈನಿಕರು ಅತ್ಯಂತ ವೀರಾವೇಶದಿಂದ ಶತ್ರುಗಳನ್ನು ಹಿಮ್ಮೆಟಿಸಿದ್ದರು ಎಂದು ಭಾರತೀಯ ವಾಯುಸೇನೆಯ ಹಿರಿಯ ನಿವೃತ್ತ ಸಾರ್ಜೆಂಟ್, ಎಸ್‌ಬಿಐ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಎಸ್.ಆರ್.ಕುಲಕರ್ಣಿ ಹೇಳಿದರು.

    ಇಲ್ಲಿನ ಪುರಸಭೆ ಹಿಂಭಾಗದಲ್ಲಿರುವ ವಿಜಯ ಪ್ರಿಂಟಿಂಗ್ ಪ್ರೆಸ್‌ನ ಸಭಾಂಗಣದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದಿಂದ ಭಾನುವಾರ ಏರ್ಪಡಿಸಿದ್ದ 1971ರ ಯುದ್ಧದ ವಿಜಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ- ಭಾರತೀಯ ಭೂಸೇನೆಯ ಮಾಜಿ ಹವಾಲ್ದಾರ್ ನಾನಪ್ಪ ನಾಯಕ ಹಾಘೂ ಸಂಘದ ಖಜಾಂಚಿ- ಭಾರತೀಯ ಭೂಸೇನೆಯ ಮಾಜಿ ಸುಬೇದಾರ ಪಿ.ಜಿ.ಬಿರಾದಾರ ಅವರು ತಮ್ಮ ಯುದ್ಧದ ಅನುಭವ ಹಂಚಿಕೊಂಡರು.

    ಭೂಸೇನೆಯ ಹಿರಿಯ ಮಾಜಿ ಸುಬೇದಾರ ಬಿ.ಎಚ್.ಬಿರಾದಾರ, ಮಾಜಿ ನಾಯಕ್ ಮುರಳೀಧರ ನೇಬಗೇರಿ, ಮಾಜಿ ಹವಾಲ್ದಾರ್ ಎಚ್.ಕೆ.ಮುಜಾವರ, ಎಸ್.ಆರ್.ಕುಲಕರ್ಣಿ, ಮಾಜಿ ನಾಯಕ್ ಎಸ್.ಸಿ.ಹಿರೇಮಠ ಅವರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

    ಮಾಜಿ ಸೈನಿಕರ ಸಂಘದ ಸದಸ್ಯರಾದ ಎಸ್.ಎಚ್.ಹೂಗಾರ, ಬಿ.ಆರ್.ಹಳ್ಳೂರ, ಎ.ಎಚ್.ಕಕ್ಕೇರಿ, ಯಂಕಪ್ಪ ಲಮಾಣಿ, ವಾಮನರಾವ್ ಲಮಾಣಿ, ಪರ್ವತರಡ್ಡಿ ತಾತರಡ್ಡಿ, ಪರಶುರಾಮ ಜೋಗೀನ್, ಬಸಪ್ಪ ಅರಳಿಚಂಡಿ ಸೇರಿದಂತೆ 20ಕ್ಕೂ ಹೆಚ್ಚು ಮಾಜಿ ಸೈನಿಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts