ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹ

0301
Published on

ಬೆಳಗಾವಿ: ತಾಲೂಕಿನ ಅಗಸಗಾ ಸುತ್ತಲಿನ ಗ್ರಾಮಗಳಿಗೆ ದಿನನಿತ್ಯ ಸಮರ್ಪಕ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಅಗಸಗಾ ಗ್ರಾಮದ ಸುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಬಸ್ ಮೂಲಕವೇ ಬೆಳಗಾವಿಗೆ ಹೋಗುತ್ತಾರೆ. ಆದರೆ, ಬೆಳಗ್ಗೆ ಹಾಗೂ ಸಂಜೆ ಸಮರ್ಪಕವಾಗಿ ಬಸ್ ಸೌಲಭ್ಯ ದೊರೆಯುತ್ತಿಲ್ಲ. ಸಂಜೆ ವೇಳೆ ಸರಿಯಾಗಿ ಬಸ್ ಬರುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಮನೆಗಳಿಗೆ ಬಂದು ತಲುಪುವುದು ರಾತ್ರಿ 8.30 ಆಗುತ್ತಿದೆ.

ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಪ್ರತಿದಿನ ಸಂಜೆ 5 ಗಂಟೆ ಒಂದು ಬಸ್ ಹಾಗೂ ಸಂಜೆ 6 ಗಂಟೆಗೆ ವಿದ್ಯಾರ್ಥಿಗಳಿಗಾಗಿಯೇ ಒಂದು ಬಸ್ ಬಿಡಬೇಕು ಎಂದು ಒತ್ತಾಯಿಸಿದರು. ಬಸವರಾಜ ಪಾಟೀಲ, ಕಲಗೌಡ ಪಾಟೀಲ, ವೈಜು ಲೂಮ್ಯಾಳ, ಪ್ರಕಾಶ ಲೋಹಾರ, ದುಂಡಪ್ಪ ಹೊಸಪೇಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net