More

    ಗದಗ: ಬಸವ ಪುರಾಣಕ್ಕೆ ಮಣಕವಾಡ ಗ್ರಾಮಸ್ಥರ ಬಸವಬುತ್ತಿ

    ಗದಗ
    ನಗರದ ಹಾಲಕೆರೆ ಮಠದ ಆನಂದಾಶ್ರಮದಲ್ಲಿ ಲಿಂ. ಡಾ. ಅನ್ನದಾನೇಶ್ವರ ಶ್ರೀಗಳ ಸತ್ಯ ಸಂಕಲ್ಪದಂತೆ ತಿಂಗಳ ಪರ್ಯಂತ ಆಯೋಜಿಸಿರುವ ಬಸವ ಪುರಾಣ ಪ್ರವಚನದಲ್ಲಿ ಅಣ್ಣಿಗೇರಿ ತಾಲೂಕಿನ ಮಣಕವಾಡದ ಗ್ರಾಮದ ಭಕ್ತರು 16 ಸಾವಿರ ಕರಿಗಡಬು, ಹಪ್ಪಳ, ಸೆಂಡಿಗೆ ಸಮೇತ ಬಸವ ಬುತ್ತಿಯನ್ನು ಮಂಗಳವಾರ ಸಂಜೆ ಹಾಲಕೆರೆ ಮಠಕ್ಕೆ ತೆಗೆದುಕೊಂಡು ಬಂದು ಅರ್ಪಿಸಿದರು.
    ನಗರದ ಹಾತಲಗೇರಿ ನಾಕಾದಿಂದ ವಾದ್ಯ ಮೇಳಗಳೊಂದಿಗೆ ಮಠದವರೆಗೂ ಐದು ನೂರಕ್ಕೂ ಹೆಚ್ಚು ಮಹಿಳೆಯರು ತಂದ ಬಸವ ಬುತ್ತಿಯನ್ನು ಪೂಜೆ ಮಾಡುವ ಮೂಲಕ ಮಠಕ್ಕೆ ಬರಮಾಡಿಕೊಳ್ಳಲಾಯಿತು.
    ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀಗಳು ಮಾತನಾಡಿ, ಬಸ ಪುರಾಣದಲ್ಲಿ ಶರಣ ಮುಗ್ಧ ಸಂಗಯ್ಯನ ಬದುಕು, ಕಾಯಕ, ಲಿಂಗಪೂಜೆ ನಿಷ್ಠೆ ಕುರಿತು ಪ್ರವಚನ ಮೂಲಕ ತಿಳಿಸಿದರು.
    ದಾಸೋಹ ಸೇವೆ ನೀಡಿದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಧು ಪುಣೇಕರ ದಂಪತಿ, ಮಂಜುನಾಥ ಬೇಲೇರಿ, ನಿವೃತ್ತ ಇಂಜಿನಿಯರ್ ಆರ್.ಕೆ ಮಠದ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
    ದರೂರ ವಿರಕ್ತಮಠದ ಕೊಟ್ಟೂರ ಸ್ವಾಮೀಜಿ, ಕುರಗೋಡ ವಿರಕ್ತಮಠದ ನಿರಂಜನ ಪ್ರಭು ದೇವರು, ಸೋಮಸಮುದ್ರ ವಿರಕ್ತಮಠದ ಸಿದ್ಧಲಿಂಗ ದೇವರು, ಶ್ರೀಧರಗಡ್ಡಿ ವಿರಕ್ತಮಠದ ಮರಿಕೊಟ್ಟೂರ ದೇವರು, ಬೂದಗುಂಪ ವಿರಕ್ತಮಠದ ಸಿದ್ಧೇಶ್ವರ ದೇವರು ಹಾಗೂ ವ್ಯಾಕರಣಾಳ ವಿಶ್ವೇಶ್ವರ ದೇವರು, ಶಿವಲಿಂಗ ಶಾಸ್ತ್ರೀ ಸಿದ್ದಾಪೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts