More

    ಬಸವಣ್ಣ ಸಮಾನತೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ

    ಚಿತ್ರದುರ್ಗ: ಬಸವಣ್ಣನವರ ವಿಚಾರಗಳನ್ನು ಪ್ರಪಂಚದಾದ್ಯಂತ ಪ್ರಚುರ ಪಡಿಸಿದ್ದು, ಮುರುಘಾಮಠವೆಂದು ಶ್ರೀ ಮಠದ ಉಸ್ತುವಾರಿ ಶ್ರೀ ಬಸ ವಪ್ರಭು ಸ್ವಾಮೀಜಿ ಹೇಳಿದರು. ಬಸವ ಜಯಂತಿ ಅಂಗವಾಗಿ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಗುರುವಾರ ಆಯೋಜಿಸಿದ್ದ ಬಸವಾ ದಿ ಶರಣರ ವೇಷಭೂಷಣ,ವಚನಗಳ ಕಂಠಪಾಠ,ರಂಗೋಲಿ ಸ್ಪರ್ಧೆಗಳ ಸಂದರ್ಭದಲ್ಲಿ ಮಾತನಾಡಿದ ಅವರು,ಬಸವಣ್ಣನವರು ಸಮಾ ನತೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ. ಅವರ ವಿಚಾರಧಾರೆಗಳನ್ನು ಪ್ರಚುರ ಪಡಿಸಲು ಮುರುಘಾಮಠದ ಶ್ರಮಿಸುತ್ತಿದೆ ಎಂದರು.
    ಚಿದರವಳ್ಳಿ ಪಾರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ,ಮುರುಘಾಮಠವು ಪಾರಂಪರಿಕ ಹಾಗೂ ಧಾ ರ್ಮಿಕ ಮಠವಾಗದೆ,ಬಸವಾದಿ ಪ್ರಮಥರ ತತ್ತ್ವಸಿದ್ಧಾಂತಗಳನ್ನು ಅನೂಚಾನವಾಗಿ ಮುಂದುವರಿಸಿಕೊಂಡು ಬರುತ್ತಿದೆ. ಸ್ಪರ್ಧೆಗಳು ಮ ನುಷ್ಯನ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತವೆ. ಪ್ರತಿಭೆಗಳು ಅಕ್ಷಯವಾಗಬೇಕೆಂಬ ಉದ್ದೇಶ ನಮ್ಮದಾಗಬೇಕೆಂದರು.
    ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ,ಸರ್ವ ಶರಣರ ನಡೆ ನುಡಿಗಳನ್ನು ಅರ್ಥೈಸುವ ಸ ಲುವಾಗಿ ಹಾಗೂ ಬಸವಣ್ಣನವರ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಶ್ರೀಮಠದ ಮತ್ತು ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ,ಸದಸ್ಯ ಚಂದ್ರಶೇಖರ್ ಇದ್ದರು. ಶ್ರೀಮತಿ ಜ್ಯೋತಿ ಪ್ರಾರ್ಥಿ ಸಿದರು. ಡಾ.ಗೌರಮ್ಮ ಸ್ವಾಗತಿಸಿ,ಸ್ನೇಹಾ ವಂದಿಸಿದರು. ಪುಷ್ಪವಲ್ಲಿ ನಿರೂಪಿಸಿದರು.
    ವಿಜೇತರು
    ವಚನ ಕಂಠಪಾಠ ಸ್ಪರ್ಧೆಯಲ್ಲಿ ಅಂಕಿತಾ(ಪ್ರ),ನಾಗಲಾಂಬಿಕಾ ಮಲ್ಲಿಕಾರ್ಜುನ್(ದ್ವಿ)ಮತ್ತು ಗೀತಾ ರುದ್ರೇಶ್(ತೃ)ಬಹಮಾನ ಪಡೆ ದರು. ಬಸವಾದಿ ಶರಣರ ವೇಷಭೂಷಣ ಸ್ಪರ್ಧೆಯಲ್ಲಿ ಅಕ್ಕಮಹಾದೇವಿ ವೇಷಧಾರಿ ಜಿ.ಟಿ.ನವ್ಯಾ(ಪ್ರ),ಬಸವೇಶ್ವರ ವೇಷಧಾರಿ ತೇಜಸ್‌ಕೋಟಿ,(ದ್ವಿ)ಮತ್ತು ಗಂಗಾಂಬಿಕೆ ವೇಷಧಾರಿ ಕವಿತಾಸಿದ್ದೇಶ್(ತೃ). ರಂಗೋಲಿ ಸ್ಪರ್ಧೆಯಲ್ಲಿ ಜಿ.ಎಸ್.ಯಶೋಧಾ(ಪ್ರ), ಸೌಮ್ಯವಿನಯ್(ದ್ವಿ)ಮತ್ತು ಶಿಲ್ಪಾ(ತೃ).
    ಬಸವಾದಿ ಶರಣರ ಭಜನಾ ಸ್ಪರ್ಧೆಯಲ್ಲಿ ಜಯಸ್ವಾಮಿ ಸಂಗಡಿಗರು,ಪಾಂಡುರಂಗ ಭಜನಾ ಮಂಡಳಿ,ಸಣ್ಣಕಿಟ್ಟದಹಳ್ಳಿ(ಪ್ರ), ಮಾಸ್ಟರ್‌ಮೌನೇಶ್ ಮತ್ತು ಸಂಗಡಿಗರು,ಶ್ರೀಆಂಜನೇಯ ಭಜನಾಮಂಡಳಿ ಉಚ್ಚಂಗಿದುರ್ಗ(ದ್ವಿ),ಗುರುಮೂರ್ತಿ ಮತ್ತು ಸಂಗಡಿ ಗರು,ವೀರಾಂಜನೇಯ ಭಜನಾಸಂಘ,ಕೋಲ್ಕುಂಟೆ(ತೃ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts