More

    ಬಸವಣ್ಣ, ರಾಯಣ್ಣ ಮಾನವೀಯತೆಯ ಪ್ರತೀಕ

    ಕುಲಗೋಡ: ಭಕ್ತಿಯ ಮೂಲಕ ಮನುಕುಲ ಉದ್ಧರಿಸಿದ, ವೀರ-ಶೂರತನದಿಂದ ದೇಶಾಭಿಮಾನ ಮೆರೆದ ಬಸವಣ್ಣ-ರಾಯಣ್ಣ ಮಾನವೀಯತೆಯ ಪ್ರತೀಕಗಳಾಗಿದ್ದಾರೆ ಎಂದು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದ್ದಾರೆ.

    ಸಮೀಪದ ರಡ್ಡೇರಟ್ಟಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಶ್ವಾರೂಢ ಬಸವೇಶ್ವರ ಮತ್ತು ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ಪ್ರತಿ ವ್ಯಕ್ತಿಗೂ ತನ್ನ ದೇಶ ಮತ್ತು ಧರ್ಮ ಮುಖ್ಯ. ದೇಶ-ಧರ್ಮದ ಉಳಿವಿಗೆ ದುಡಿಯಬೇಕು ಎಂದರು. ಹುಲಸೂರದ ಶಿವಾನಂದ ಶ್ರೀ ಮಾತನಾಡಿ, ಪ್ರೀತಿ-ಪ್ರೇಮದಿಂದ ಬದುಕುವ ಕಲೆಯನ್ನು ಜನರು ಕಲಿಯಬೇಕು. ಸಾಮರಸ್ಯದ ಜೀವನದಿಂದ ಬದುಕು ಸಾರ್ಥಕತೆ ಪಡೆಯುತ್ತದೆ ಎಂದರು. ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವೇಶ್ವರ ಮತ್ತು ಸಂಗೊಳ್ಳಿರಾಯಣ್ಣರು ಸಮಾಜದಲ್ಲಿ ಬಿದ್ದವರನ್ನು ಎತ್ತಿದ ಮಹಾಮಹಿಮರು. ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದರು. ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಅಭಿವೃದ್ಧಿ ಕೆಲಸದಲ್ಲಿ ಎಲ್ಲರೂ ಒಂದಾಗಿ ದುಡಿಯಬೇಕು ಎಂದರು. ಕಪರಟ್ಟಿ ಕಳ್ಳಿಗುದ್ದಿಯ ಬಸವರಾಜ ಹಿರೇಮಠ ಮಹಾಸ್ವಾಮೀಜಿ, ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ರಾಹುಲ್ ಸತೀಶ ಜಾರಕಿಹೊಳಿ ಮಾತನಾಡಿದರು. ನಂದಗಡದಿಂದ ಆಗಮಿಸಿದ್ದ ಸಂಗೊಳ್ಳಿ ರಾಯಣ್ಣ ದಿವ್ಯಜ್ಯೋತಿಯನ್ನು ಗೌರವಪೂರ್ವಕವಾಗಿ ಗ್ರಾಮಸ್ಥರು ಸ್ವಾಗತಿಸಿದರು. ಪ್ರಭಾ ಶುಗರ್ ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಭಾಷ ಪಾಟೀಲ, ರವಿ ಪರುಶೆಟ್ಟಿ, ಶಿವಾನಂದ ಲೋಕಣ್ಣವರ, ಶಿವು ಪಾಟೀಲ, ಮಹೇಶ ಪಟ್ಟಣಶೆಟ್ಟಿ, ಕರೆಪ್ಪ ಬಿಜಗುಪ್ಪಿ, ಅಡಿವೆಪ್ಪ ಅಳಗೋಡಿ, ಬಾಳಪ್ಪ ಗೌಡರ, ಬಸವರಾಜ ನಾಯ್ಕರ, ಶಿವಬಸಯ್ಯ ಹಿರೇಮಠ, ಬರಮಪ್ಪ ಪಾಶ್ಚಾಪುರ, ಶಿವಲಿಂಗ ಕುದರಿ, ಮಹಾದೇವ ಮಳಲಿ, ಮುತ್ತಪ್ಪ ಬಿಜಗುಪ್ಪಿ ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts