More

    ಬಲೆಗೆ ಬಿದ್ದ ಬ್ಲ್ಯಾಕ್ ಮರ್ಲಿನ್ ಮೀನು

    ಅಂಕೋಲಾ: ಕಡಲಿಗೆ ತೆರಳಿದ ಮೀನುಗಾರರಿಗೆ ಕಳೆದ ಎರಡು ದಿನಗಳಿಂದ ವಿಭಿನ್ನ ಜಾತಿಯ ಮೀನುಗಳು ಬೀಳುತ್ತಿವೆ. ಅಂಕೋಲಾದ ಗಾಬೀತ ಕೇಣಿಯ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಮೀನೊಂದು ಗಮನ ಸೆಳೆಯಿತು. ಅಗಲವಾದ ರೆಕ್ಕೆ ಉದ್ದದ ಚೂಪಾದ ಕೊಂಬು ಹೊಂದಿದ ಸುಮಾರು ನಾಲ್ಕೂವರೆ ಅಡಿ ಉದ್ದದ ಇಂಡೋ ಫೆಸಿಪಿಕ್ ಬ್ಲ್ಯಾಕ್ ಮರ್ಲಿನ್ ಎಂಬ ಈ ಮೀನನ್ನು ದಂತ ವೈದ್ಯ ಡಾ.ಸಂಜು ನಾಯಕ ಪ್ರದರ್ಶಿಸಿದರು.

    ಈ ಮೀನು ತನ್ನ ಚೂಪಾದ ಕೊಂಬಿನಿಂದ ಸಣ್ಣ ಮೀನನ್ನು ಚುಚ್ಚಿ ಬೇಟೆಯಾಡುತ್ತದೆ. ಸಮುದ್ರದಲ್ಲಿ ಅತಿ ವೇಗವಾಗಿ ಈಜುವ ಮೀನುಗಳಲ್ಲಿ ಇದೂ ಒಂದು. ಸುಮಾರು 15 ಅಡಿ ಉದ್ದ, ಅರ್ಧ, ಮುಕ್ಕಾಲು ಕ್ವಿಂಟಾಲ್​ವರೆಗೂ ಬೆಳೆಯುವ ಈ ಮೀನನ್ನು ಸ್ಥಳೀಯವಾಗಿ ಬಳಸುವುದು ಕಡಿಮೆ ಬೇರೆ ದೇಶಗಳಿಗೆ ರಫ್ತಾಗುತ್ತದೆ ಎಂದು ಕಾರವಾರದ ಸಾಗರ ಜೀವ ಶಾಸ್ತ್ರಜ್ಞ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts