More

    ಬರ ಪರಿಹಾರ ನೀಡಲು ಕೇಂದ್ರ ವಿಳಂಬ


    ಯಾದಗಿರಿ: ರಾಜ್ಯದಲ್ಲಿನ ಬರ ಪರಸ್ಥಿತಿ ಮನವರಿಕೆ ಮಾಡಿಕೊಡಲು ನಮ್ಮ ಮುಖ್ಯಮಂತ್ರಿಗಳು ಮತ್ತು ಸಚಿವರು 4 ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಮಯಾವಕಾಶ ಕೋರಿದರೂ ನೀಡಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ್ ಆರೋಪಿಸಿದರು.


    ಪ್ರಸಕ್ತ ಸಾಲಿನಲ್ಲಿ ಮುಂಗಾರಿ ಮಳೆ ಸಂಪೂರ್ಣ ಕೈಕೊಟ್ಟಿದೆ. ರಾಜ್ಯದಲ್ಲಿ ತೀವೃ ಬರ ಪರಸ್ಥಿತಿ ಎದುರಾಗಿದೆ. ಮಳೆಯಿಲ್ಲದೆ 37 ಸಾವಿರ ಕೋಟಿ ರೂ. ರೈತರ ಬೆಳೆ ಹಾನಿಯಾಗಿದೆ. ಬರ ಪರಿಹಾರಕ್ಕಾಗಿ 3 ಸಾವಿರ ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದರೂ ಇದುವರೆಗೂ ಯಾವುದೇ ಸ್ಪಂದನೆ ಇಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


    ರಾಜ್ಯ ಸರಕಾರ ಬೊಕ್ಕಸ ಖಾಲಿ ಆಗಿದೆ ಎಂಬ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಯನ್ನ ನಾವು ಶೇ.92 ಜನರಿಗೆ ಮುಟ್ಟಿದ್ದೇವೆ. ಸರಕಾರ ಆರ್ಥಿಕ ಅಡಚಣೆಯಲ್ಲಿದ್ದರೂ ಸೂಕ್ತ ವ್ಯವಸ್ಥೆ ಮಾಡಿಕೊಂಡು ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ. ಇಷ್ಟಾದರೂ ಕೇಂದ್ರ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದರೆ, ಮೋದಿ ಸರಕಾರ ಖಜಾನೆ ಖಾಲಿ ಆಗಿದಿಯೋ ಅಥವಾ ನಮ್ಮದೋ ಎಂಬ ಬಗ್ಗೆ ಬಿಎಸ್ವೈ ಅವರೇ ಉತ್ತರಿಸಬೇಕು. ಬಿಜೆಪಿ ಅವರು ರಾಜ್ಯಾದ್ಯಂತ ಬರ ಅಧ್ಯಯನ ಕೈಗೊಂಡಿದ್ದಾರೆ. ಅದರ ಬದಲಿಗೆ ಕೇಂದ್ರಕ್ಕೆ ಹೋಗಿ ಮನವರಿಕೆ ಮಾಡಿಕೊಡಲಿ. ಕೇಂದ್ರದಿಂದ ಪರಿಹಾರ ಬಿಡುಗಡೆ ವಿಳಂಬವಾಗಲು ಬಿಜೆಪಿ ನಾಯಕರೇ ಪ್ರಯತ್ನಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.

    ನಮ್ಮ ಬಳಿ ಯಾವುದೇ ಒಳಜಗಳ ಇಲ್ಲ, ಅದನ್ನ ಸೃಷ್ಟಿ ಮಾಡುವವರಿಗೆ ಕೊನೆಗೆ ನಿರಾಸೆ ಕಾದಿದೆ. ಜನರ ಮನಸ್ಸನ್ನು ಅಭಿವೃದ್ಧಿಯಿಂದ ದೂರ ಸರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts