More

    ಬರ ಪರಿಹಾರ ಕಾಮಗಾರಿ ಆರಂಭಕ್ಕೆ ಆಗ್ರಹ -ಆಮ್ ಆದ್ಮಿ ಕಾರ್ಯಕರ್ತರ ಪ್ರತಿಭಟನೆ

    ದಾವಣಗೆರೆ: ರಾಜ್ಯದ ಬರ ಪರಿಹಾರ ಕಾಮಗಾರಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರಿಹಾರಧನ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಮ್‌ಆದ್ಮಿ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅವರಿಗೆ ಮನವಿಪತ್ರ ಸಲ್ಲಿಸಿದರು.
    ರಾಜ್ಯದಲ್ಲಿ 195 ಬರಪೀಡಿತ ತಾಲೂಕು ಘೋಷಣೆಮಾಡಿ 75 ದಿನ ಕಳೆದರೂ ಉಭಯ ಸರ್ಕಾರಗಳು ಪರಿಹಾರ ಕಾಮಗಾರಿ ಗಳನ್ನು ಕೈಗೊಳ್ಳದೆ ರಾಜಕಾರಣದಲ್ಲಿ ಮುಳುಗಿವೆ. ಇದು ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
    ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅನಾವೃಷ್ಟಿಯಿಂದ ಸುಮಾರು 116 ಕೋಟಿ ರೂ. ಹಾಗೂ ರಾಜ್ಯದಲ್ಲಿ 18 ಸಾವಿರ ಕೋಟಿ ರೂ. ಅಂದಾಜು ನಷ್ಟದ ಮಾಹಿತಿ ನೀಡಿದ್ದರೂ ಸ್ಪಂದಿಸಿಲ್ಲ. ಇತ್ತ ರಾಜ್ಯ ಸರ್ಕಾರ, ರೈತರಿಗೆ ಎಕರೆಗೆ ಕೇವಲ 2 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿ ಜಾರಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ನಷ್ಟಕ್ಕೀಡಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ರೂ.25 ಸಾವಿರ ರೂ. ಪರಿಹಾರ ನೀಡಬೇಕು. ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ತಕ್ಷಣ ಹಣ ನೀಡಬೇಕು. ಜಾನುವಾರುಗಳಿಗೆ ಮೇವು, ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು.
    ಫ್ರೂಟ್ಸ್ ಗುರುತಿನ ಮೂಲಕ ರೈತರಖಾತೆಗೆ ನೇರ ಹಣ ಪಾವತಿಸುವುದಾಗಿ ಹೇಳಿದ್ದು ಮಂದಗತಿಯಲ್ಲಿ ನಡೆಯುತ್ತಿದೆ. ಅಧಿಕಾರಿಗಳನ್ನು ನೇಮಿಸಿ, ಜಾಗೃತಿ ಮೂಡಿಸ ಇದನ್ನು ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು.
    ಪಕ್ಷದ ಜಿಲ್ಲಾಧ್ಯಕ್ಷ ಕೆ. ಶಿವಕುಮಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್. ಅರುಣಕುಮಾರ್, ಗಣೇಶ್ ಕೆ. ದುರ್ಗದ್, ಎಸ್.ಕೆ.ಆದಿಲ್ ಖಾನ್, ಸಿದ್ದಪ್ಪ, ಸುರೇಶ್, ಕೆ.ರವೀಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts