More

    ಬಯೋಫರ್ನ್ ಕಂಪನಿಯಲ್ಲಿ ಕಾನೂನು ಅರಿವು ಕಾಂiÀiðಕ್ರಮ/ ಕಾರ್ಮಿಕರಿಗೆ ಅಗತ್ಯ ಸುರಕ್ಷಾಕ್ರಮ ಕೈಗೊಳ್ಳುವುದು ಅಗತ್ಯ/ನ್ಯಾ.ಹೊಸಮನಿ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಕಾರ್ಮಿಕರಿಗೆ ಅಗತ್ಯ ಸುರಕ್ಷಾ ಸೌಲಭ್ಯ ನೀಡುವುದು ಆಯಾ ಕಾರ್ಖಾನೆಯ ಜವಾಬ್ದಾರಿಯಾಗಿದ್ದು, ಆಡಳಿತ ಮಂಡಳಿಗಳು ನೌಕರರ ಹಿತ ಕಾಯಲು ಬದ್ದರಾಗಿರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್ ಹೊಸಮನಿ ತಿಳಿಸಿದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವೇಮಗಲ್ ಬಯೋಫರ್ನ್ ಕಂಪನಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಾರ್ಮಿಕರ ಕಾನೂನುಗಳ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಲೈಂಗಿಕ ದೌರ್ಜನ್ಯ ನಿಷೇದ, ಪರಿಹಾರ ಕಾಯ್ದೆ ನಮ್ಮ ದೇಶದಲ್ಲಿ ಜಾರಿಯಲ್ಲಿದ್ದು, ಇದರನ್ವಯ ಪ್ರತಿ ಕಾರ್ಖಾನೆಗಳಲ್ಲಿ ಮಹಿಳಾ ಕಾರ್ಮಿಕರಿಗೆ ಅನೂಕೂಲಕ್ಕಾಗಿ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಅಂತರಿತ ದೂರುಗಳ ಪರಿಹಾರ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕೆಂದು ಸಲಹೆ ನೀಡಿದರು.

    ಬಾಲ್ಯವಿವಾಹ, ಬಾಲಕಾರ್ಮಿಕತೆ ಮೂಲಕ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುದನ್ನು ತಪ್ಪಿಸುವಲ್ಲಿ ಸಮುದಾಯ, ಕಾರ್ಮಿಕರು ಮತ್ತು ಸಮುದಾಯ ಸಹಕಾರ ನೀಡಬೇಕು, ಹೆಚ್ಚು ಪ್ರಚಾರ ಒದಗಿಸುವ ಮೂಲಕ ಪೋಷಕರಿಗೆ ಈ ಕುರಿತು ಮಾರ್ಗದರ್ಶನ ನೀಡಬೇಕು ಎಂದರು.

    ಓದುವ ವಯಸ್ಸಿನಲ್ಲಿ ಮಕ್ಕಳನ್ನು ಉದ್ಯೋಗ, ಗ್ಯಾರೇಜ್, ಇಟ್ಟಿಗೆ ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುವ ಕಾರ್ಯ ಗಮನಕ್ಕೆ ಬಂದರೆ ಮಕ್ಕಳು ಕೂಡಲೇ ಕೂಡಲೇ ೧೦೯೮ ಸಹಾಯವಾಣಿಗೆ ದೂರು ನೀಡಿ ಎಂದರು.

    ಸ್ವಾತAತ್ರö್ಯಕ್ಕೆ ಮುನ್ನಾ ಸಾಮಾನ್ಯವಾಗಿದ್ದ ಬಾಲ್ಯವಿವಾಹ ತಡೆಯಲು ಬಾಲಗಂಗಾಧರ ತಿಲಕ್ ರಂತಹ ಮಹನೀಯರು ಹೋರಾಟ ನಡೆಸಿದರು ಎಂದು ಸ್ಮರಿಸಿ, ಇಂದು ಸರ್ಕಾರವಿದೆ, ಸಂವಿಧಾನ, ಕಾನೂನು ಇದ್ದು, ಬಾಲ್ಯವಿವಾಹ ಅಪರಾಧವೆಂದು ಹೇಳಲಾಗಿದೆ ಎಂದರು.

    ಮಕ್ಕಳ ಹಕ್ಕುಗಳಿಗೆ ಚ್ಯುತಿಯುಂಟು ಮಾಡುವುದು ಅಪರಾಧ. ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಹಕ್ಕು ಮಾತ್ರವಲ್ಲ, ಇತರೆ ಅನೇಕ ಹಕ್ಕುಗಳಿಗೆ, ಅವರನ್ನು ಓದಿಸಿ ಸಾಧನೆಗೆ ದಾರಿ ತೋರುವ ಪೋಷಕರೇ ಬಾಲ್ಯವಿವಾಹಕ್ಕೆ ನೂಕುವುದು ಸರಿಯಲ್ಲ. ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಕಿವಿಮಾತು ಹೇಳಿದರು.

    ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಡಾ.ಡಿ.ರಾಜು ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯಾವುದೇ ಕೈಗಾರಿಕೆ ಪರಿಸರಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳುವಂತಿಲ್ಲ. ನೀರಿನ ಸಂರಕ್ಷಣೆ, ಮಳೆ ಕೊಯ್ಲು ಪದ್ದತಿಗೆ ಒತ್ತು ನೀಡಿ ಎಂದು ಕಿವಿಮಾತು ಹೇಳಿದರು.

    ಕಾರ್ಯಕ್ರಮದಲ್ಲಿ ಬಯೋಫರ್ನ್ ಕಂಪನಿ ಜನರಲ್ ಮ್ಯಾನೇಜರ್ ದಿನೇಶ್, ಮ್ಯಾನೇಜರ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

    ಚಿತ್ರ ೨೦ ಕೆ.ಎಲ್.ಆರ್. ೦೫ : ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವೇಮಗಲ್ ಬಯೋಫರ್ನ್ ಕಂಪನಿ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕರ ಕಾನೂನುಗಳ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್ ಹೊಸಮನಿ ಉದ್ಘಾಟಿಸಿದರು.

    ಬಯೋಫರ್ನ್ ಕಂಪನಿಯಲ್ಲಿ ಕಾನೂನು ಅರಿವು ಕಾಂiÀiðಕ್ರಮ/ ಕಾರ್ಮಿಕರಿಗೆ ಅಗತ್ಯ ಸುರಕ್ಷಾಕ್ರಮ ಕೈಗೊಳ್ಳುವುದು ಅಗತ್ಯ/ನ್ಯಾ.ಹೊಸಮನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts