More

    ಬದ್ಧತೆ ಅರಿತು ಹೆಚ್ಚುವರಿ ಸಾಲ

    ಕೋಲಾರ: ಸಾಲ ಮರುಪಾವತಿಯಲ್ಲಿ ಪ್ರಾಮಾಣಿಕತೆ ಮೆರೆದಿರುವ ತಾಲೂಕಿನ ಚನ್ನರಾಯಪುರದ ದಲಿತ ಮತ್ತು ಇತರ ಕುಟುಂಬಗಳು ಅವಿಭಜಿತ ಜಿಲ್ಲೆಗೆ ಮಾದರಿಯಾಗಿವೆ. ಇವರ ಬದ್ಧತೆ ಅರಿತು ಪ್ರತಿ ಮಹಿಳೆಯರಿಗೆ ತಲಾ 1 ಲಕ್ಷ, ಮಹಿಳಾ ಸಂಘಕ್ಕೆ 10 ಲಕ್ಷ ರೂ. ಸಾಲ ವಿತರಿಸುವ ಮೂಲಕ ಡಿಸಿಸಿ ಬ್ಯಾಂಕ್​ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ ಎಂದು ಕೋಲಾರ-&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ಚನ್ನರಾಯಪುರದ ಓಂಶಕ್ತಿ ದೇವಾಲಯ ಆವರಣದಲ್ಲಿ ಮಂಗಳವಾರ ಸಾಲ ವಿತರಿಸಿ ಮಾತನಾಡಿ, ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಈ ಗ್ರಾಮದ ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ಸಾಲ ನೀಡುತ್ತಿದ್ದು, 80 ಕುಟುಂಬಗಳಿಗೆ ಇದರ ಪ್ರಯೋಜನ ಸಿಕ್ಕಿದೆ ಎಂದರು. ಇಲ್ಲಿನ ಮಹಿಳಾ ಸಂಘಗಳ ಸದಸ್ಯರು ತಪ್ಪದೇ ವಾರದ ಸಭೆ ನಡೆಸಿ 1.5 ಲಕ್ಷ ರೂ. ಉಳಿತಾಯ ಮಾಡಿದ್ದಾರೆ. ಸಾಲದ ಕಂತು ಸಕಾಲಕ್ಕೆ ಮರುಪಾವತಿಸಿ ಬ್ಯಾಂಕ್​ ನಂಬಿಕೆ ಉಳಿಸಿಕೊಳ್ಳುವಲ್ಲೂ ಮಾದರಿಯಾಗಿದ್ದಾರೆ. ಸುಶಿಕ್ಷಿತರು ಮಾತ್ರವಲ್ಲ, ನಾವೂ ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡಿ, ಆರ್ಥಿಕವಾಗಿ ಸದೃಢಗೊಳ್ಳಬಲ್ಲೆವು ಎಂಬುದನ್ನು ಸಮಾಜಕ್ಕೆ ಸಾಕ್ಷೀಕರಿಸಿದ್ದಾರೆ ಎಂದರು.

    ಸಮರ್ಪಕ ಸಾಲ ಮರುಪಾವತಿ ಮಾಡುವ ಸಂಘಗಳನ್ನು ಗುರುತಿಸಿ ಅವರ ಆರ್ಥಿಕ ಸಬಲತೆಗೆ ಬ್ಯಾಂಕ್​ ನೆರವಾಗಲು ನಿರ್ಧರಿಸಿದೆ. 1 ಲಕ್ಷದಲ್ಲಿ 50 ಸಾವಿರ ಬಡ್ಡಿರಹಿತ ಸಾಲವಾಗಿದ್ದು, ಉಳಿದ 50 ಸಾವಿರಕ್ಕೆ ಶೇ.4ರ ವಾರ್ಷಿಕ ಬಡ್ಡಿ ಮಾತ್ರ ಬೀಳುತ್ತದೆ. ಬ್ಯಾಂಕ್​ನಿಂದ 7 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಾಲ ವಿತರಿಸಿದ್ದು, ಅವರನ್ನು ಮೀಟರ್​ ಬಡ್ಡಿ ಶೋಷಣೆಯಿಂದ ರಕ್ಷಿಸುವ ಕೆಲಸ ಮಾಡಿದೆ ಎಂದರು.

    ಡಿಸಿಸಿ ಬ್ಯಾಂಕ್​ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಡಿಸಿಸಿ ಬ್ಯಾಂಕಿಗೆ ಮಹಿಳೆಯರೇ ಶಕ್ತಿ. ಸಾಲ ಪಡೆಯುವುದು ಮಾತ್ರವಲ್ಲಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಬ್ಯಾಂಕಿಗೆ ಶಕ್ತಿ ತುಂಬಿದ್ದಾರೆ. ನಂಬಿಕೆಗೆ ಮತ್ತೊಂದು ಹೆಸರು ಮಹಿಳೆಯರು ಎಂದು ಸಾಬೀತು ಮಾಡಿದ್ದಾರೆ ಎಂದರು. ಬ್ಯಾಂಕ್​ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಪಡೆದ ಸಾಲವನ್ನು ಸಕಾಲಕ್ಕೆ ಪಾವತಿಸಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ಪಡೆಯಬಹುದು ಎಂದರು. ಬ್ಯಾಂಕ್​ ನಿರ್ದೇಶಕ ಗೋವಿಂದರಾಜು ಮಾತನಾಡಿ, ಗಣಕೀಕರಣ, ಇ-&ಶಕ್ತಿ ಅನುಷ್ಠಾನದ ಮೂಲಕ ಬ್ಯಾಂಕಿಂಗ್​ ವಹಿವಾಟಿನಲ್ಲಿ ಲೋಪ, ಭ್ರಷ್ಟಾಚಾರವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಪಾರದರ್ಶಕ ವಹಿವಾಟು ಇರುವುದರಿಂದ ಮಧ್ಯವರ್ತಿಗಳ ಹಾವಳಿಗೂ ತಡೆಯಾಗಿದೆ ಎಂದರು. ಬ್ಯಾಂಕ್​ ಎಸ್​ಎಸ್​ಜಿ ಸಾಲ ವಿಭಾಗದ ಗೋಪಾಲಕೃಷ್ಣ ಮತ್ತಿತರರಿದ್ದರು.

    ನಮಗೆ ಖಾಸಗಿ ಸಾಲಕ್ಕೆ ಕಟ್ಟುತ್ತಿದ್ದ ಬಡ್ಡಿಯ ಶೋಷಣೆಯಿಂದ ಮುಕ್ತಿ ಸಿಕ್ಕಿದೆ. ಇದಕ್ಕೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್​ ಎರಡೂ ಜಿಲ್ಲೆಗಳ ಮಹಿಳೆಯರಿಗೆ ದೇವಾಲಯವಿದ್ದಂತೆ. ನಾವು ಖಾಸಗಿಯವರಿಗೆ ನೀಡುತ್ತಿದ್ದ ಬಡ್ಡಿಯಷ್ಟು ಹಣದ ಕಂತು ಪಾವತಿಸದರೆ ಸಾಕು, ಬ್ಯಾಂಕ್​ ಸಾಲದಿಂದ ಮುಕ್ತವಾಗುತ್ತೇವೆ. ನಮ್ಮ ಜೀವನಕ್ಕೆ ಡಿಸಿಸಿ ಬ್ಯಾಂಕ್​ ಆಧಾರವಾಗಿದೆ.
    ಯಲ್ಲಮ್ಮ, ಪ್ರತಿನಿಧಿ, ಲಕ್ಷಿ$್ಮ ಮಹಿಳಾ ಸ್ವಸಹಾಯ ಸಂಘ, ಚನ್ನರಾಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts