More

    ಬಣ್ಣದಲ್ಲಿ ಮಿಂದೆದ್ದ ಯುವಜನತೆ

    ಸಂಶಿ: ಪರಸ್ಪರ ಬಣ್ಣ ಎರಚಾಟ, ಅಣಕು ಶವಯಾತ್ರೆ, ಹುಚ್ಚೆದ್ದು ಕುಣಿದ ಯುವ ಸಮೂಹ, ಬಣ್ಣದಲ್ಲಿ ಮಿಂದೆದ್ದ ಚಿಣ್ಣರು… ಹೋಳಿ ಹಬ್ಬದ ನಿಮಿತ್ತ ಸಂಶಿ ಗ್ರಾಮದೆಲ್ಲೆಡೆ ಕಂಡುಬಂದ ದೃಶ್ಯಗಳಿವು. ಭಾನುವಾರ ಸಂಜೆ ಗ್ರಾಮದ ವಿರಕ್ತಮಠದ ಓಣಿ, ಪೇಟೆ ಓಣಿ, ಗೌಡರ ಓಣಿ, ಗರಡಿಮನೆ, ಕೋರಿಯವರ ಓಣಿ, ನಾಡರ ಬಯಲು, ಹಳೇ ಬಸ್ ನಿಲ್ದಾಣ ಸೇರಿ ವಿವಿಧೆಡೆ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಸೋಮವಾರ ಬೆಳಗ್ಗೆ ಗ್ರಾಮದ ಎಲ್ಲ ಸಮಾಜದ ಜನರು ಪೂಜಾ ವಿಧಿ-ವಿಧಾನ ಮೂಲಕ ಸಾಂಪ್ರದಾಯಿಕವಾಗಿ ಕಾಮದಹನ ನೆರವೇರಿಸಿದರು. ಎಲ್ಲಿ ನೋಡಿದರೂ ಬಣ್ಣದೋಕುಳಿಯ ಚಿತ್ತಾರ ಎದ್ದು ಕಾಣುತ್ತಿತ್ತು. ಗ್ರಾಮದ ರಸ್ತೆ ಬೀದಿಗಳಲ್ಲಿ ಕೈಯಲ್ಲಿ ಬಣ್ಣ ಹಿಡಿದುಕೊಂಡು ನಿಂತಿದ್ದ ಯುವಕರು ದಾರಿಯಲ್ಲಿ ಹೋಗುವವರಿಗೆಲ್ಲ ಬಣ್ಣ ಎರಚಿ ಸಂಭ್ರಮಿಸಿದರು.

    ಕುಂದಗೋಳದಲ್ಲಿ ರಂಗಿನಾಟದ ಸಂಭ್ರಮ: ಹೋಳಿ ಹುಣ್ಣಿಮೆ ನಿಮಿತ್ತ ಸೋಮವಾರ ಕುಂದಗೋಳ ತಾಲೂಕಿನ ಪಟ್ಟಣ ಹಾಗೂ ಬಹುತೇಕ ಗ್ರಾಮಗಳಲ್ಲಿ ರಂಗಿನಾಟವನ್ನು ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಹೆಸ್ಕಾಂ ಸಿಬ್ಬಂದಿ ಅರಿಷಿಣವನ್ನು ಮಿಶ್ರಣ ಮಾಡಿ ಒಬ್ಬರಿಗೊಬ್ಬರು ಹಚ್ಚುವ ಮೂಲಕ ಹೋಳಿ ಹಬ್ಬವನ್ನು ವೈಶಿಷ್ಟ್ಯೂರ್ಣವಾಗಿ ಆಚರಿಸಿದರು. ಕರೊನಾ ವೈರಸ್​ ಭೀತಿಯಿಂದ ಕೆಲವರು ಹೋಳಿ ಹಬ್ಬದ ಆಚರಣೆಯಿಂದ ದೂರ ಉಳಿದರೆ ಇನ್ನುಳಿದವರು ಪರಸ್ಪರ ಬಣ್ಣ ಹಚ್ಚುತ್ತ, ಹಲಿಗೆ ಬಡಿದುಕೊಂಡು, ಬಾಯಿ ಬಡಿದá-ಕೊ್ಳುತ್ತ ಕಾಮದಹನ ಮಾಡಿದರು. ಪಟ್ಟಣದ ಮಾರುಕಟ್ಟೆಯಲ್ಲಿ ನಡೆದ ಕಾಮಣ್ಣನ ಮೂರ್ತಿಯನ್ನು ಸಂಭ್ರಮದಿಂದ ದಹನ ಮಾಡಲಾಯಿತು. ಹಿರೇಮಠದ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ, ಪಪಂ ಮಾಜಿ ಸದಸ್ಯ ರಾಜು ಶಿವಳ್ಳಿ, ನಾಗಣ್ಣ ದೇಶಪಾಂಡೆ, ಶ್ರೀಕಾಂತ ಕಲಾಲ, ಭರಮಣ್ಣ ಸೊರಟೂರ, ಇತರರಿದ್ದರು.

    ಬೆನಕನಹಳ್ಳಿಯಲ್ಲಿ ಆಡಲಿಲ್ಲ ಹೋಳಿಯಾಟ: ಕುಂದಗೋಳ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸೋಮವಾರ ಸಂಭ್ರಮದಿಂದ ಹೋಳಿ ಆಚರಣೆ ಕಂಡುಬಂದರೆ ಬೆನಕನಹಳ್ಳಿ ಗ್ರಾಮದಲ್ಲಿ ಮಾತ್ರ ಹೋಳಿಯಾಟ ಆಡಲಿಲ್ಲ. ಅದರ ಬದಲಾಗಿ ರತಿ-ಮನ್ಮಥ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಿ, ನೈವೇದ್ಯ ಅರ್ಪಿಸಿ ಕಾಮ ದಹನ ನೆರವೇರಿಸಲಾಯಿತು. ಗ್ರಾಮದೇವತೆ ಮೂರ್ತಿಗೆ ಬಣ್ಣ ಹಚ್ಚುವುದು, ದೇವಸ್ಥಾನದ ಜೀಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹೋಳಿ ಹುಣ್ಣಿಮೆಯಲ್ಲಿ ಬಣ್ಣ ಎರಚಾಡುವುದು ಗ್ರಾಮದೇವತೆ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂಬ ನಂಬಿಕೆಯಿಂದ ಗ್ರಾಮಸ್ಥರು ಬಣ್ಣದಾಟ ಆಡದೇ ಕೇವಲ ಕಾಮದ ದಹನ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts