More

    ಬಡ್ತಿ ಭಾಗ್ಯಕ್ಕೆ ಚರ್ಚೆ ಲೇಪನ

    ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್್ಸ)ಯಲ್ಲಿ ಮತ್ತೊಂದು ಉಪ ವೈದ್ಯಕೀಯ ಅಧೀಕ್ಷಕರ ಹುದ್ದೆ ಸೃಜನೆಯಾಗಿದ್ದು, ವೈದ್ಯರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಫಾರ್ಮಕಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಜಾನಕಿ ತೊರವಿ ಅವರನ್ನು ಫೆ. 19ರಂದು ಹೊರ ರೋಗಿಗಳ ವಿಭಾಗದ ಉಪ ವೈದ್ಯಕೀಯ ಅಧೀಕ್ಷಕಿಯನ್ನಾಗಿ ನೇಮಕ ಮಾಡಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಆದರೆ, ಸಹ ಪ್ರಾಧ್ಯಾಪಕ ಹುದ್ದೆಯಿಂದ 2019, ಜೂನ್ 13ರಂದು ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿದ್ದ ಇವರನ್ನು ಒಮ್ಮೆಲೆ ಈ ಹುದ್ದೆಗೆ ತಂದು ಕೂರಿಸಿದ್ದೇಕೆ? ಎಂಬ ಪ್ರಶ್ನೆ ಎದುರಾಗಿದೆ.

    ರಾಜಕೀಯ ಲಾಬಿ: ಈ ಹುದ್ದೆ ಪಡೆಯುವುದರ ಹಿಂದೆ ರಾಜಕೀಯ ಲಾಬಿ ಇದೆ ಎನ್ನಲಾಗುತ್ತಿದೆ. ಅರ್ಹರಿದ್ದರೂ ಕೆಲವರನ್ನು ಕಡೆಗಣಿಸಿ ಈ ಹುದ್ದೆಗೆ ತಂದು ಡಾ. ಜಾನಕಿ ಅವರನ್ನು ನೇಮಿಸಲಾಗಿದೆ. ಈಗಾಗಲೇ ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ರಾಜಶೇಖರ ದ್ಯಾಬೇರಿ, ಡಾ.ಎಸ್.ವೈ. ಮುಲ್ಕಿಪಾಟೀಲ ಇದ್ದಾರೆ. ಅವರು ಕ್ಲಿನಿಕಲ್ ವಿಭಾಗದವರು. ಈಗ ನಾನ್ಕ್ಲಿನಿಕಲ್ ವಿಭಾಗದವರನ್ನು ನೇಮಕ ಮಾಡಲಾಗಿದೆ ಎಂಬುದು ಕೆಲ ವೈದ್ಯರ ಆರೋಪ.

    ಈ ಹಿಂದೆ ಸೃಜನೆ: ಹಿಂದಿನ ನಿರ್ದೇಶಕರು ಇಂಥ ಹುದ್ದೆಗಳನ್ನು ಸೃಜಿಸಿದ್ದರು. ಆಡಳಿತ ನಿರ್ವಹಣೆಗೆ ಎಂದು ಹೇಳಲಾಗುತ್ತಿದ್ದರೂ ಇದು ಜವಾಬ್ದಾರಿಯಿಂದ ನುಣಚಿಕೊಳ್ಳಲಿರುವ ಮಾರ್ಗ. ಕೆಲವರಿಗೆ ಒಂದು ವೇತನ ಬಡ್ತಿಯ ಮೊಬಲಗಿಗೆ ಸಮನಾದ ಮೊತ್ತವನ್ನು ವಿಶೇಷ ಭತ್ಯೆಯಾಗಿ ಮಂಜೂರು ಮಾಡಲಾಗಿದೆ. ಇದು ಕಿಮ್ಸ್​ಗೆ ಆರ್ಥಿಕ ಹೊರೆ ಎನಿಸುವುದಿಲ್ಲವೇ? ಎಂಬ ಪ್ರಶ್ನೆಯೂ ಕಿಮ್್ಸ ಆಸ್ಪತ್ರೆಯಲ್ಲಿ ಹರಿದಾಡುತ್ತಿದೆ.

    ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲು ಡಾ. ಜಾನಕಿ ಅವರನ್ನು ಉಪ ವೈದ್ಯಕೀಯ ಅಧೀಕ್ಷಕರನ್ನಾಗಿ ನೇಮಿಸಲು ಡಿ. 28ರಂದು ನಡೆದ ಕಿಮ್್ಸ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಹೆಚ್ಚುವರಿ ಖರ್ಚು ಬೀಳುವುದಿಲ್ಲ. ಹೊರರೋಗಿಗಳ ವಿಭಾಗದಲ್ಲಿ ದಟ್ಟಣೆ ಇದೆ. ಇದನ್ನು ನಿರ್ವಹಿಸಲು ಡಿಎಂಎಸ್ ನೇಮಕದ ಅಗತ್ಯವಿತ್ತು.
    | ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts