More

    ಬಜೆಟ್ನಲ್ಲಿ ಕಲ್ಯಾಣ ಪ್ರಗತಿಗೆ ಹೊಸ ಯೋಜನೆ

    ಶಹಾಪುರ: ದೇಶದ ಆದಾಯ ಹೆಚ್ಚಿಸುವಲ್ಲಿ ರೈತರ ಪಾತ್ರ ಬಲು ದೊಡ್ಡದಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.

    ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿನಿಯರ ವಸತಿನಿಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅವರು, ರೈತರು ಆರ್ಥಿಕವಾಗಿ ಸದೃಢರಾಗಲು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

    ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಒತ್ತು ನೀಡುತ್ತಿದೆ. ಕೃಷಿ ಇಲಾಖೆಯಿಂದ ಈ ಭಾಗದ ಜಿಲ್ಲೆಗಳಿಗೆ ಹೊಸ ಯೋಜನೆಗಳನ್ನು ಮುಂದಿನ ಬಜೆಟ್ನಲ್ಲಿ ಘೋಷಣೆ ಆಗುವಂತೆ ಪ್ರಯತ್ನಿಸಲಾಗುವುದು. ರೈತರ ಆರ್ಥಿಕ ಸ್ಥಿತಿ ಉತ್ತೇಜನಕ್ಕೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಸಾಕಷ್ಟು ಕ್ರಮ ಕೈಗೊಳ್ಳುತ್ತಿವೆ. ಆದರೆ ಕರೊನಾ ಎಡೆಬಿಡದೆ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ತಾಲೂಕಿನಲ್ಲಿ ಲಾಕ್ಡೌನ್, ಅತಿವೃಷ್ಟಿ, ನೆರೆ ಹಾವಳಿಯಿಂದ ರೈತರು ತತ್ತರಿಸಿದ್ದರೂ ಇದುವರೆಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಕೃಷಿ ಉದ್ಯಮವಾಗಿ ಪರಿವರ್ತನೆ ಆಗುವತನಕ ಅವರ ಬದುಕು ಹಸನಾಗಲು ಸಾಧ್ಯವಿಲ್ಲ ಎಂದರು.

    ಸರ್ಕಾರ ಎಕರೆಗೆ ಒಂದು ಲಕ್ಷ ರೂ. ಕೃಷಿ ಸಾಲ ನೀಡಬೇಕು. ಇನ್ನು ಸಬ್ಸಿಡಿ ಪಡೆಯಲು ರೈತರು ಪ್ರತಿನಿತ್ಯ ಬ್ಯಾಂಕಿಗೆ ಅಲೆಯುತ್ತಿರುವುದನ್ನು ತಪ್ಪಿಸಿ ಬ್ಯಾಂಕ್ಗಳಲ್ಲಿ ಸರಳ ರೀತಿಯಲ್ಲಿ ಸಾಲಸೌಲಭ್ಯ ಸಿಗುವಂತಾಗಬೇಕು ಎಂದ ದರ್ಶನಾಪುರ ಅವರು, ಜೆ.ಎಚ್.ಪಟೇಲ್ ಸಿಎಂ ಇದ್ದಾಗ ಕೃಷಿ ಸಚಿವ ಬೈರೇಗೌಡ ಶಹಾಪುರಕ್ಕೆ ಕೃಷಿ ವಿದ್ಯಾಲಯ ಮಂಜೂರು ಮಾಡಿದ್ದರು. 2001ರಲ್ಲಿ ಶುರುವಾದ ಈ ವಿದ್ಯಾಲಯದಲ್ಲಿ ಸಾವಿರಾರು ವಿದ್ಯಾಥರ್ಿಗಳು ವ್ಯಾಸಂಗ ಮಾಡಿದ್ದಾರೆ ಎಂದು ತಿಳಿಸಿದರು.

    ಸಂಸದ ರಾಜಾ ಅಮರೇಶ್ವರ ನಾಯಕ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಜಿಪಂ ಸಿಇಒ ಶಿಲ್ಪಾ ಶರ್ಮಾ, ಪ್ರಮುಖರಾದ ತ್ರಿವಿಕ್ರಮ ಜೋಶಿ, ಮಹಾಂತೇಶಗೌಡ ಬಿ.ಪಾಟೀಲ್ ಇದ್ದರು. ಎಂ.ಜಿ. ಪಾಟೀಲ್ ಸ್ವಾಗತಿಸಿದರು. ಗೌಡಪ್ಪ ನಿರೂಪಣೆ ಮಾಡಿದರು. ಡಾ.ಎ.ಎಸ್. ಚನ್ನಬಸವಣ್ಣ ವಂದಿಸಿದರು.

    ಸಿಎಂ ಸ್ಥಾನಕ್ಕಾಗಿ ಡಿಕೆಶಿ ಪಾದಯಾತ್ರೆ
    ಮುಖ್ಯಮಂತ್ರಿ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸ್ವಾರ್ಥಕ್ಕಾಗಿ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಲೇವಡಿ ಮಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ವರ್ಚಸ್ಸು ಕಡಿಮೆ ಮಾಡುವ ಹುನ್ನಾರವೇ ಈ ಪಾದಯಾತ್ರೆ ಹಿಂದಿರುವ ತಂತ್ರ. ಕಾಂಗ್ರೆಸ್ನಲ್ಲಿ ಮುಂದಿನ ಸಿಎಂಗಾಗಿ ಈಗಲೇ ತಿಕ್ಕಾಟ ಶುರುವಾಗಿದೆ. ವಿಧಾನಸಭೆ ಚುನಾವಣೆ ಇನ್ನೂ ಒಂದು ವರ್ಷವಿದೆ. ಆದರೆ ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಿದಂತೆ ಡಿಕೆಶಿ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು. ಡಿಕೆಶಿ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಬಗ್ಗೆ ಚಕಾರ ಎತ್ತಲಿಲ್ಲ. ಆದರೀಗ ಇದ್ದಕ್ಕಿದ್ದಂತೆ ರೈತರ ಬಗ್ಗೆ ಜ್ಞಾನೋದಯವಾಗಿದೆ. ಮೇಕೆದಾಟು ಜಾರಿಗೆ ನಮ್ಮ ಸರ್ಕಾರವೂ ಬದ್ಧವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts