More

    ಬಗ್ಗುಂಜಿಯಲ್ಲಿ 13 ಪುರಾತನ ಬಾವಿಗಳು ಮತ್ತೆ

    ಜಯಪುರ: ಉತ್ತಮೇಶ್ವರ ಸಮೀಪದ ಬಗ್ಗುಂಜಿಯಲ್ಲಿ 16ನೇ ಶತಮಾನದ ಪ್ರಾಚೀನ ಕಾಲದ 13 ಬಾವಿಗಳು ಕಂಡುಬಂದಿವೆ ಎಂದು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ತಿಳಿಸಿದ್ದಾರೆ.

    ಹೆದ್ಸೆ ಗ್ರಾಮದ ಬಗ್ಗುಂಜಿ ಮತ್ತು ಬೆಳವಾಡಿ ಗ್ರಾಮದ ಬಗ್ಗುಂಜಿಯಲ್ಲಿ ಈ ಬಾವಿಗಳು ಕಂಡುಬಂದಿದ್ದು, ಒಂದೆರೆಡು ಬಾವಿ ಹೊರತುಪಡಿಸಿದರೆ ಉಳಿದ ಎಲ್ಲ ಬಾವಿಗಳು ಇವತ್ತಿಗೂ ಸುಸಜ್ಜಿತವಾಗಿವೆ. 11 ಬಾವಿ ಮೂರು ಅಡಿ ಸುತ್ತಳತೆ ಇದ್ದರೆ ಎರಡು ಬಾವಿಗಳು ನಾಲ್ಕ ಅಡಿ ಸುತ್ತಳತೆ ಹೊಂದಿದೆ. ಬಾವಿಯನ್ನು ಹೊಳೆಗೊಣೆಯ ಸಣ್ಣ ಸಣ್ಣ ಕಲ್ಲುಗಳನ್ನು ಬಳಸಿ ಕಟ್ಟಲ್ಪಟ್ಟಿದೆ. ಎಲ್ಲ ಬಾವಿಗಳು 15 ಅಡಿ ಮಾತ್ರ ಆಳವಾಗಿವೆ. ಬೆಳವಾಡಿ ಗ್ರಾಮದ ಬಗ್ಗುಂಜಿಯಲ್ಲಿರುವ ಬಾವಿ ಕಲಾತ್ಮಕತೆಯಿಂದ ಕೂಡಿದ್ದು ಸುಮಾರು 15 ಅಡಿ ಆಳವಾಗಿದ್ದು ಬಾವಿಯಲ್ಲಿ ಇಳಿಯಲು ಪ್ರತಿ ಮೂರು ಅಡಿಗೆ ಒಂದರಂತೆ ಬಾವಿ ಹತ್ತಲು ಅಂತರ ಬಿಟ್ಟಿರುವುದು ವಿಶೇಷವಾಗಿದೆ. ಈ ಬಾವಿಯಲ್ಲಿ ಈಗಲೂ ನೀರಿದೆ. ಬಾವಿ ನಿರ್ವಣವಾಗಿ ಹಲವು ಶತಮಾನ ಕಳೆದರೂ ಗಟ್ಟಿಮುಟ್ಟಾಗಿರುವುದು ಅಂದಿನ ಕಾಲದ ಅದ್ಭುತ ತಾಂತ್ರಿಕತೆಗೆ ಸಾಕ್ಷಿಯಾಗಿದೆ.

    ಬಾವಿ ಅಕ್ಕಪಕ್ಕದಲ್ಲಿ ಮನೆಗಳ ಹಲವು ನೆಲಗಟ್ಟುಗಳನ್ನು ಕಾಣಬಹುದು. ಅಲ್ಲಲ್ಲಿ ಬಿದ್ದಿರುವ ಮಡಕೆ ಚೂರುಗಳು, ಬಳಪದ ಕಲ್ಲಿನ ಬೋಗುಣಿಗಳು, ಕೈಹಂಚುಗಳು ಹಿಂದೆ ಬಗ್ಗುಂಜಿಯೊಂದು ಸುಸಜ್ಜಿತ ಪೇಟೆಯಾಗುತ್ತು ಎನ್ನುದು ತಿಳಿದು ಬರುತ್ತದೆ. ರಾಣಿ ಕಾಳಲಾದೇವಿ ಎಂಬಾಕೆ ಬಗ್ಗುಂಜಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಬಗ್ಗುಂಜಿಯಿಂದ ಮೇಗೂರಿನವರೆಗಿನ ಪ್ರದೇಶವನ್ನು ಬಗ್ಗುಂಜಿ ಸೀಮೆ ಎಂದು ಆಳುತ್ತಿದ್ದಳು ಎನ್ನುತ್ತದೆ ಕಲ್ಬಸ್ತಿಯ ಕ್ರಿ.ಶ.1530 ರ ಶಿಲಾ ಶಾಸನ. ಈಗ ಸಿಕ್ಕಿರುವ ಈ ಬಾವಿಗಳು ರಾಣಿ ಕಾಳಲಾದೇವಿ ಕಾಲಕ್ಕೆ ಸಂಬಂಧಿಸಿದ್ದಾಗಿದೆ. ಕ್ಷೇತ್ರ ಕಾರ್ಯದಲ್ಲಿ ಬಗ್ಗುಂಜಿ ಸುರೇಶ ಸಹಕರಿಸಿರುತ್ತಾರೆ ಎಂದು ನ.ಸುರೇಶ ಕಲ್ಕೆರೆ ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts