More

    ಫಲಾಪೇಕ್ಷೆ ಇಲ್ಲದ ಸೇವೆಗೆ ಪ್ರಶಸ್ತಿ ನಿಶ್ಚಿತ; ಶಾಸಕ ಪಿ.ಟಿ.ಪರಮೇಶ್ವರನಾಯ್ಕ ವಿಶ್ವಾಸ

    ಹೂವಿನಹಡಗಲಿ, ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಅಭಿನಂದನಾ ಸಮಾರಂಭ, ಪೌರಕಾರ್ಮಿಕ ಮಹಿಳೆ ಎಂಟುಮನೆ ಮಲ್ಲಮ್ಮ, ರಾಷ್ಟ್ರಪತಿ ಪದಕ ಪಡೆದ ಪ್ಲಟೂನ್ ಕಮಾಂಡರ್ ಕೆ.ರಾಜಪೀರ್,
    Hoovina Hadagali, MLA P.T.Parameshwaranayka, congratulatory ceremony, Civil servant woman Ntummane Mallamma, President’s medal awarded platoon commander K.Rajapir,
    ಹೂವಿನಹಡಗಲಿ: ಸರ್ಕಾರಿ ಕೆಲಸವನ್ನು ಫಲಾಪೇಕ್ಷೆಗಳಿಲ್ಲದೆ ಸಲ್ಲಿಸಿದರೆ ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

    ಸ್ಥಳೀಯ ಪುರಸಭೆ ಸೋಮವಾರ ಆಯೋಜಿಸಿದ್ದ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪೌರಕಾರ್ಮಿಕ ಮಹಿಳೆ ಎಂಟುಮನೆ ಮಲ್ಲಮ್ಮ ಮತ್ತು ರಾಷ್ಟ್ರಪತಿ ಪದಕ ಪಡೆದ ಹೂವಿನಹಡಗಲಿ ಗೃಹರಕ್ಷಕದಳದ ಹಿರಿಯ ಪ್ಲಟೂನ್ ಕಮಾಂಡರ್ ಕೆ.ರಾಜಪೀರ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

    ಎಂಟುಮನೆ ಮಲ್ಲಮ್ಮ ತಮ್ಮ ಸೇವಾ ಅವಧಿಯ ದಿನಗಳಲ್ಲಿ ತಮ್ಮ ಮಗಳ ಮದುವೆಗೂ ರಜೆ ಪಡಿಯದೆ ಕೆಲಸವನ್ನು ನಿರ್ವಹಿಸಿದ್ದಾರೆ. ಅವರ ನಿಸ್ವಾರ್ಥ ಸೇವೆಯಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಮಲ್ಲಮ್ಮರಂತೆಯೇ ಇನ್ನುಳಿದ ಸಿಬ್ಬಂದಿ ಸೇವೆ ಸಲ್ಲಿಸಿದರೆ ಅವರಿಗೂ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ರಾಜ್ಯದಲ್ಲಿ ಅನೇಕ ರೀತಿಯ ಅವಘಡಗಳು ಸಂಭವಿಸಿದ ಸಂದರ್ಭ ಗೃಹರಕ್ಷಕದಳದ ಹಿರಿಯ ಪ್ಲಟೂನ್ ಕಮಾಂಡರ್ ಕೆ.ರಾಜಪೀರ್ ತಮ್ಮ ಪ್ರಾಣವನ್ನು ಲೆಕ್ಕಿಸದೆ ಅನೇಕ ಜನರ ಪ್ರಾಣವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ತುಂಗಭದ್ರಾ ನದಿಯಲ್ಲಿ ನಡೆದ ದೋಣಿ ದುರಂತ ಮತ್ತು ಚಿತ್ರದುರ್ಗದಲ್ಲಿ ನಡೆದ ಖಾಸಗಿ ಬಸ್ ದುರಂತದ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಯಶಸ್ವಿಯಾಗಿದ್ದಾರೆ. ಅವರ ಈ ಪ್ರಾಮಾಣಿಕತೆಗೆ ರಾಷ್ಟ್ರಪತಿ ಪದಕ ಲಭಿಸಿದೆ. ಇವರಿಬ್ಬರಿಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿರುವುದು ಮಲ್ಲಿಗೆ ನಾಡಿನ ಕೀರ್ತಿಯಾಗಿದೆ ಎಂದರು.

    ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ, ಉಪಾಧ್ಯಕ್ಷ ತಿಮ್ಮಣ್ಣ, ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಎಚ್., ಪುರಸಭೆ ಸದಸ್ಯರು, ಸಿಬ್ಬಂದಿ ಹಾಗೂ ಪೌರಕಾರ್ಮಿಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts