More

    ಫಲಾನುಭವಿಗಳಿಗೆ ಯೋಜನೆ ಮುಟ್ಟಲಿ

    ಕಲಬುರಗಿ: ಭೋವಿ ಜನಾಂಗಕ್ಕೆ ಸರ್ಕಾರ ರೂಪಿಸಿರುವ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಮಾಯಾದೇವಿ ಗಲಗಲಿ ಸೂಚಿಸಿದ್ದಾರೆ.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಐರಾವತ ಯೋಜನೆಯ ಫಲಾನು
    ಭವಿಗಳಿಗೆ ವಾಹನಗಳ ಬೀಗದ ಕೈ ವಿತರಿಸಿ ಮಾತನಾಡಿ, ನಿಗಮದ ಯೋಜನೆಗಳು ಬಡವರಿಗೆ, ನಿರ್ಗತಿಕರಿಗೆ ತಲುಪುವಂತೆ ಮತ್ತು ಪರಿಣಾಮಕಾರಿ ಅನುಷ್ಠಾನಗೊಳಿಸಲು ರಾಜ್ಯದ ಎಲ್ಲ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದರು.
    ಕೋವಿಡ್-19 ಇರುವುದರಿಂದ ಬಡವರು ಸಂಕಷ್ಟದಲ್ಲಿದ್ದಾರೆ. ನಿಗಮವು ವಿಶೇಷ ಆಸಕ್ತಿ ವಹಿಸಿ ಶೀಘ್ರದಲ್ಲಿಯೇ ಹೊಸ ಅರ್ಜಿಗಳ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ನಿಗಮಕ್ಕೆ ಬಂದ ಹೊಸ ಅರ್ಜಿಗಳ ಪಟ್ಟಿಯನ್ನು ಆದಷ್ಟು ಬೇಗ ಸಂಬಂಧಿಸಿದ ಶಾಸಕರಿಗೆ ಕಳುಹಿಸಲಾಗುವುದು. ಭೂ ಒಡೆತನ ಯೋಜನೆ, ಉದ್ಯಮಶೀಲತಾ ಯೋಜನೆ. ಗಂಗಾ ಕಲ್ಯಾಣ ಮತ್ತು ಮೈಕ್ರೋ ಕ್ರೆಡಿಟ್ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
    ಉಪ ಪ್ರಧಾನ ವ್ಯವಸ್ಥಾಪಕ ಹರ್ಷ ಗಾಂವಕರ, ಜಿಲ್ಲಾ ವ್ಯವಸ್ಥಾಪಕ ಮುನಾವರ ದೌಲಾ, ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ದೇವರಾಜ ಕೆ, ರಮೇಶ ಗಾಯದನಕರ್ ಸಿಬ್ಬಂದಿ ಸಂಜಯಕುಮಾರ, ವಿಜಯಕುಮಾರ ಭಂಡಾರಿ, ವಿಠ್ಠಲ್ ಭೋವಿ, ಅರುಣಕುಮಾರ, ಜಯಪ್ರಕಾಶ, ಚೇತನ, ಚನ್ನಬಸವ ಮೊದಲಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts