More

    ಪ್ರೊ.ಸಿ.ಪಾರ್ವತಮ್ಮ ಪ್ರಚಾರೋಪನ್ಯಾಸ ಕಾರ್ಯಕ್ರಮ

    ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಮಾನಸಗಂಗೋತ್ರಿಯ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಸಹಯೋಗದಲ್ಲಿ ಸಮಾಜಶಾಸ್ತ್ರಜ್ಞೆ ಪ್ರೊ.ಸಿ.ಪಾರ್ವತಮ್ಮ ಕುರಿತ ಪ್ರಚಾರೋಪನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು.


    ಸಂಸ್ಕೃತಿ ಚಿಂತಕಿ ಡಾ.ವೆಂ. ವನಜಾ ಮಾತನಾಡಿ, ಪ್ರೊ.ಸಿ.ಪಾರ್ವತಮ್ಮ ಅವರು ಮೈವಿವಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷರಾಗಿ 18 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಅನೇಕ ಸಲ ಇವರ ಹೆಸರು ಕುಲಪತಿ ಹುದ್ದೆಗೆ ಕೇಳಿ ಬಂದಿತ್ತು. ಇವರು ಹಣ ಕೊಡುವುದಿಲ್ಲ ಎಂಬ ಕಾರಣಕ್ಕೆ ಕೊನೇ ಕ್ಷಣದಲ್ಲಿ ಇವರ ಹೆಸರು ಕೈಬಿಡಲಾಗುತ್ತಿತ್ತು. ಇದೇ ಕಾರಣಕ್ಕೆ ಧಾರವಾಡ ವಿಶ್ವವಿದ್ಯಾಲಯದ ಕುಲಪತಿಯಾಗುವ ಅವಕಾಶ ಒದಗಿ ಬಂದರೂ ಪ್ರೊ.ಪಾರ್ವತಮ್ಮ ಆ ಹುದ್ದೆಯನ್ನು ನಿರಾಕರಿಸಿದ್ದರು ಎಂದು ಸ್ಮರಿಸಿದರು.


    ಮೈವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಎಂ.ಹೊಂಗನೂರು ಮಾತನಾಡಿ, ಪ್ರೊ.ಸಿ.ಪಾರ್ವತಮ್ಮ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಎಂದೋ ಆಗಬೇಕಿತ್ತು ಎಂದರು. ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ.ಎಸ್.ಯಶೋದಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts